Homeಕರೋನಾ ತಲ್ಲಣಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ

ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ

ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕೌಶಲ ಕೇಂದ್ರದ ತರಗತಿಗಳು ಈ ತಿಂಗಳ 21 ಕ್ಕೆ ಆರಂಭವಾಗಲಿದೆ.

- Advertisement -
- Advertisement -

ಈ ತಿಂಗಳ 21 ರಿಂದ ಆರಂಭವಾಗಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕೌಶಲ ಕೇಂದ್ರದ ತರಗತಿಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.

ಇಡೀ ಆವರಣವನ್ನು ಸೋಂಕುಮುಕ್ತಗೊಳಿಸಿ, ಪ್ರತ್ಯೇಕ ಕಾಲಾವಧಿಯಲ್ಲಿ, ಗುಂಪುಗೂಡುವಿಕೆಗೆ ಅವಕಾಶವಾಗದಂತೆ ತರಗತಿಗಳನ್ನು ನಡೆಸಬೇಕು ಮತ್ತು ಒಂದೊಂದು ಡೆಸ್ಕ್‌ಗಳ ನಡುವೆ ಆರು ಅಡಿಗಳ ಅಂತರ ಕಡ್ಡಾಯವಾಗಿ ಇರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ

ತರಗತಿಗಳನ್ನು ನಡೆಸುವಾಗ ಗುಂಪುಗೂಡಲು ಅವಕಾಶ ನೀಡಬಾರದು. ತರಗತಿಯಲ್ಲಿ ಪಾಠ ಹಾಗೂ ಆನ್‌ಲೈನ್ ಬೋಧನೆ ಎರಡನ್ನೂ ಅಳವಡಿಸಿಕೊಳ್ಳಬೇಕು ಮತ್ತು ಮೌಲ್ಯಮಾಪನಕ್ಕೆ ಕ್ರಮ ಕೈಗೊಳ್ಳಬೇಕು. ಸಂಸ್ಥೆಗಳ ಆವರಣದೊಳಗೆ ಮೆಸ್ ಸೌಲಭ್ಯವಿದ್ದಲ್ಲಿ ಅಲ್ಲಿ ಕೂಡಾ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಳಾಗಿದೆ.

ಹಾಸ್ಟೆಲ್‌ ಕೊಠಡಿಯನ್ನು ಹಂಚಿಕೊಳ್ಳುವ ವ್ಯವಸ್ಥೆ ಇದ್ದರೆ ಕನಿಷ್ಠ ಆರು ಅಡಿಗಳ ಅಂತರ ನಿರ್ವಹಿಸಬೇಕು. ಸಾಧ್ಯವಿದ್ದಲ್ಲಿ ತಾತ್ಕಾಲಿಕ ಡಿವೈಡರ್‌ ಸಾಧ್ಯತೆಯ ಬಗ್ಗೆ ಪರಿಶೀಲಿಸಬೇಕು. ವಿದ್ಯಾರ್ಥಿಗಳಲ್ಲಿ ರೋಗಲಕ್ಷಣ ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿಗೆ ವರ್ಗಾಯಿಸಬೇಕು ಎಂದು ಮಾರ್ಗಸೂಚಿ ಹೇಳಿದೆ.

ಇದನ್ನೂ ಓದಿ: ತಳಸಮುದಾಯದ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಬಂದಂತೆಲ್ಲಾ ಅದರ ಅನುದಾನ ಕಡಿತವಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...