ತಿಂಗಳ ಹಿಂದೆ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದ ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಮತ್ತೆ ಅಗ್ನಿ ದುರಂತ ಸಂಭವಿಸಿದೆ. ಘಟನೆ ಮಧ್ಯಾಹ್ನ ನಡೆದಿದ್ದು, ಬೈರೂತ್‌ನ ಬಂದರಿನಲ್ಲಿರುವ ಟೈರ್, ಆಯಿಲ್ ಉಗ್ರಾಣಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅನಾಹುತ ಸಂಭವಸಿದೆ ಎನ್ನಲಾಗಿದೆ.
ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಲೆಬನಾನ್ ಸೇನೆ, ತೈಲ ಮತ್ತು ಟಯರ್‌ಗಳನ್ನು ಸಂಗ್ರಹಿಸಿಡುವ ಉಗ್ರಾಣವೊಂದಕ್ಕೆ ಬೆಂಕಿ ಆವರಿಸಿದೆ ಹಾಗೂ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿದೆ ಎಂದು ತಿಳಿಸಿದೆ.
Huge fire burning at port in Beirut, Lebanon, at scene of last month's massive explosion which killed nearly 200 peoplehttps://t.co/NwOfLvR0oP pic.twitter.com/zC2uUNGyER
— BBC News (World) (@BBCWorld) September 10, 2020
ಘಟನೆ ಮಧ್ಯಾಹ್ನ ನಡೆದಿದ್ದು ಇದುವರೆಗೂ ಯಾವುದೆ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಸಿ ನ್ಯೂಸ್ ಹೇಳಿದೆ.
ಇದನ್ನೂ ಓದಿ: ಬೈರುತ್ ಸ್ಪೋಟ: 700 ಟನ್ ಸ್ಫೋಟಕ ರಾಸಾಯನಿಕದ ಬಗ್ಗೆ ಚಿಂತೆಯಲ್ಲಿರುವ ಚೆನ್ನೈ
ಅಗ್ನಿಶಾಮಕ ದಳದವರು ಘಟನಾ ಸ್ಥಳದಲ್ಲಿದ್ದು ಮತ್ತು ಸೈನ್ಯವು ತನ್ನ ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡುತ್ತಿದೆ.
#BREAKING: Footage of #Beirut port workers seen running away from fire https://t.co/lOBtOoGwxC
(Video via @michelarached) pic.twitter.com/ZFXZ9faR0v
— Arab News (@arabnews) September 10, 2020
ಸಿವಿಲ್ ಡಿಫೆನ್ಸ್ ಡೈರೆಕ್ಟರ್ ಜನರಲ್ ರೇಮಂಡ್ ಖಟ್ಟರ್, ಬೆಂಕಿ ಹರಡದಂತೆ ತಡೆಯಲು ಬೆಂಕಿಯ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿದೆ, “ಬೆಂಕಿಯನ್ನು ನಂದಿಸುವ ಕೆಲಸ ಮಾಡುವವರು ಜ್ವಾಲೆಗಳನ್ನು ಸಂಪೂರ್ಣವಾಗಿ ತಣಿಸುವವರೆಗೂ ಆವರಣವನ್ನು ಬಿಡುವುದಿಲ್ಲ” ಎಂದು ಅವರು ಹೇಳಿದ್ದಾಗಿ ಸರ್ಕಾರಿ ರಾಷ್ಟ್ರೀಯ ಸುದ್ದಿಸಂಸ್ಥೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
BREAKING: A fire has broken out at a warehouse in Beirut's port, according to the Lebanese Army.
It comes just weeks after a massive blast killed more than 170 people and injured more than 6,000 others. https://t.co/6Tpk75DwcW pic.twitter.com/ALOaOLbvXG
— New Day (@NewDay) September 10, 2020
ತಿಂಗಳ ಹಿಂದೆ ಇದುವೆ ಪ್ರದೇಶದಲ್ಲಿ ಅಮೋನಿಯಂ ನೈಟ್ರೇಟ್ ಸ್ಪೋಟಗೊಂಡು 200 ಜನರು ಮೃತಪಟ್ಟಿದ್ದರು.
ಇದನ್ನೂ ಓದಿ: ಬೈರುತ್ ಸ್ಫೋಟದ ಪ್ರತಿಭಟನೆಗಳ ನಡುವೆ ಮಾಹಿತಿ ಸಚಿವರ ರಾಜಿನಾಮೆ


