ಕೊರೊನಾ ಲಾಕ್ ಡೌನ ನಿಂದಾಗಿ ಕೆಲ ತಿಂಗಳು ಸ್ಥಗಿತಗೊಂಡಿದ್ದ ಅಕ್ಕಿ ರಫ್ತು ಸರಬರಾಜು ಮತ್ತೆ ಚಾಲನೆ ಪಡೆದಿದ್ದು, ಸುಮಾರು 18 ತಿಂಗಳಲ್ಲಿ ಈ ವಾರ ಭಾರತದ ಅಕ್ಕಿ ರಫ್ತು ಬೆಲೆಗಳು ಗರಿಷ್ಠ ಮಟ್ಟಕ್ಕೆ ತಲುಪಿವೆ. ಭಾರತದಲ್ಲಿ ಶೇಕಡಾ 5 ರಷ್ಟು ಬ್ರೋಕನ್ ಪಾರ್ಬೋಯಿಲ್ಡ್ ಅಕ್ಕಿ ಬೆಲೆ ಕಳೆದ ವಾರ ಪ್ರತಿ ಟನ್‌ಗೆ $ 384- $ 390 ರಿಂದ $ 387- $ 394ಕ್ಕೆ ಏರಿಕೆಯಾಗಿದೆ.
ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತದಲ್ಲಿ, ರಫ್ತುದಾರರು ಪೂರ್ವ ಕರಾವಳಿಯ ಅತಿದೊಡ್ಡ ಅಕ್ಕಿ ನಿರ್ವಹಣಾ ಬಂದರು ಕಾಕಿನಾಡದಲ್ಲಿ ಕಂಟೇನರ್ ಗಳು ಮತ್ತು ಸೀಮಿತ ಗಿರಣಿ ಕಾರ್ಮಿಕರ ಲಭ್ಯತೆಯೊಂದಿಗೆ ಕೆಲಸ ಆರಂಭಿಸಿದ್ದಾರೆ.
“ಏಕಾಏಕಿ ಕರೋನವೈರಸ್ ದಾಳಿಯು ಆಂಧ್ರಪ್ರದೇಶದಲ್ಲಿ ಅಕ್ಕಿ ಮಿಲ್ಲಿಂಗ್ ಮತ್ತು ಕಾಕಿನಾಡದಲ್ಲಿ ಲೋಡ್ ಕಾರ್ಯಾಚರಣೆಗಳ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ. ಬೇಡಿಕೆ ಹೆಚ್ಚಾಗಿದ್ದರೂ ರಫ್ತಿಗೆ ಸೀಮಿತ ಸರಬರಾಜು ಲಭ್ಯವಿದೆ” ಎಂದು ಕಾಕಿನಾಡ ಮೂಲದ ರಫ್ತುದಾರರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸುದರ್ಶನ ಟಿವಿಯ ವಿವಾದಾತ್ಮಕ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ
ನೆರೆಯ ಬಾಂಗ್ಲಾದೇಶದಲ್ಲಿ, ಉತ್ಪಾದನಾ ಕೊರತೆಯ ಭೀತಿಯ ಮಧ್ಯೆ ದೇಶೀಯ ಬೆಲೆಗಳು ಒಂದು ತಿಂಗಳಲ್ಲಿ ಶೇಕಡಾ 20ರಷ್ಟು ಏರಿಕೆಯಾಗಿದೆ. ಇದರ ಜೊತೆಗೆ ನೈಸರ್ಗಿಕ ವಿಪತ್ತುಗಳು ಬೆಳೆಗಳನ್ನು ಹಾನಿಗೊಳಿಸಿದ ನಂತರ ಬಾಂಗ್ಲಾದೇಶವು ಅಕ್ಕಿ ಆಮದು ಮಾಡಿಕೊಳ್ಳಲು ಮುಂದಾಗಿದೆ.
ಮಾರ್ಚ್-ಏಪ್ರಿಲ್‌ನಲ್ಲಿ ಅತಿಯಾದ ಮಳೆ, ಮೇ ತಿಂಗಳಲ್ಲಿ ಆಂಫಾನ್ ಚಂಡಮಾರುತ ಮತ್ತು ಜೂನ್-ಜುಲೈನಲ್ಲಿ ಮೂರು ಮಳೆಯ ಪ್ರವಾಹಗಳು ಹೆಚ್ಚಿನ ಬೆಳೆಗಳನ್ನು ಹಾನಿಗೊಳಿಸಿದವು. ಹಾನಿಗೊಳಗಾದ ಬೆಳೆಗಳಲ್ಲಿ ಶೇಕಡಾ 70 ಪ್ರತಿಶತ ಭತ್ತವಾಗಿದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಬಾಂಗ್ಲಾದೇಶ ಯಾವುದೇ ವಿಳಂಬವಿಲ್ಲದೆ ಅಕ್ಕಿ ಆಮದು ಮಾಡಲು ಪ್ರಾರಂಭಿಸಬೇಕಾಗಿದೆ.
ಇದನ್ನೂ ಓದಿ: ಮುಂದಿನ ವರ್ಷದಿಂದ ‘ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್’ ಕಡ್ಡಾಯ-ಸಚಿವ ಬಿ.ಸಿ.ಪಾಟೀಲ್
ವಿಯೆಟ್ನಾಂನಲ್ಲಿಯೂ ಸಹ, ದೇಶೀಯ ಸರಬರಾಜುನಲ್ಲಿಯೂ ಶೇಕಡಾ 5 ರಷ್ಟು ಏರಿಕೆ ಕಂಡಿದ್ದು, ಕಳೆದ ವಾರ $ 490 ರಿಂದ ಟನ್‌ಗೆ $ 495ಗೆ ಏರಿಕೆಯಾಗಿದೆ.
“ದೇಶೀಯ ಸರಬರಾಜು ಈ ಸಮಯದಲ್ಲಿ ತುಂಬಾ ಕಡಿಮೆಯಾಗಿದೆ, ಆದರೆ ಕೆಲವು ರಫ್ತುದಾರರು ಮಲೇಷ್ಯಾ, ಟಿಮೋರ್-ಲೆಸ್ಟೆ ಮತ್ತು ಆಫ್ರಿಕಾದ ಗ್ರಾಹಕರೊಂದಿಗೆ ಈ ಹಿಂದೆ ಸಹಿ ಮಾಡಿದ ಒಪ್ಪಂದಗಳನ್ನು ಪೂರೈಸುತ್ತಲೇ ಇದ್ದಾರೆ” ಎಂದು ಮೆಕಾಂಗ್ ಡೆಲ್ಟಾ ಪ್ರಾಂತ್ಯದ ವ್ಯಾಪಾರಿ ಹೇಳಿದ್ದಾರೆ. ಚಳಿಗಾಲದ ಸುಗ್ಗಿಯ ಮುಂಚಿನ ವಾರಗಳಲ್ಲಿ ಬೆಲೆಗಳು ಇಳಿಯಬಹುದು ಎಂಬ ವಿಶ್ವಾಸದಲ್ಲಿ ವ್ಯಾಪಾರಿಗಳು ಇದ್ದಾರೆ.
ಮತ್ತೊಬ್ಬ ವ್ಯಾಪಾರಿ ಹೇಳುವಂತೆ ಫಿಲಿಪೈನ್ಸ್ ಅಲ್ಲಿ ನಡೆಯುತ್ತಿರುವ ಸುಗ್ಗಿಯ ಹಿನ್ನೆಲೆ ದೇಶೀಯ ಬೆಲೆ ಬೆಂಬಲಿಸಲು ಕನಿಷ್ಠ ನವೆಂಬರ್ ವರೆಗೆ ಫಿಲಿಪೈನ್ಸ್ ಅಕ್ಕಿ ಖರೀದಿಯನ್ನು ಸ್ಥಗಿತಗೊಳಿಸಬಹುದು ಎಂದಿದ್ದಾರೆ.


