Homeಮುಖಪುಟಕೊರೊನಾ ಕಾಲದಲ್ಲೂ ನಿಲ್ಲದ ಸುಲಿಗೆ; ಖಾಸಗಿ ಶಾಲೆಗಳಲ್ಲಿ 'ಕೋವಿಡ್ ಫೀಸ್' ವಸೂಲಿ ಆರಂಭ

ಕೊರೊನಾ ಕಾಲದಲ್ಲೂ ನಿಲ್ಲದ ಸುಲಿಗೆ; ಖಾಸಗಿ ಶಾಲೆಗಳಲ್ಲಿ ‘ಕೋವಿಡ್ ಫೀಸ್’ ವಸೂಲಿ ಆರಂಭ

ಇದು ತೀರಾ ವಿಚಿತ್ರಕಾರಿ ನಡೆಯಾಗಿದೆ. ಕೋವಿಡ್ ಹೆಸರಿನಲ್ಲಿ ಶುಲ್ಕವನ್ನು ಕಡಿಮೆ ಮಾಡಬೇಕೆ ಹೊರತು ಹೆಚ್ಚು ಮಾಡಬಾರದು. ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

- Advertisement -
- Advertisement -

ಕೊರೊನಾ ಮತ್ತು ಕೊರೊನಾ ಕಾರಣಕ್ಕೆ ಹೇರಲಾದ ಲಾಕ್ ಡೌನ್ ನಿಂದ ಸಾಮಾನ್ಯ ಜನರು ತತ್ತರಿಸಿಹೋಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಂತಹ ಸಂಕಷ್ಟದ ಕಾಲದಲ್ಲಿಯೂ ಸಹ ಖಾಸಗಿ ಶಾಲೆಗಳಲ್ಲಿ ‘ಕೋವಿಡ್ ಫೀಸ್’ ಎಂಬ ಹೊಸ ಶುಲ್ಕವನ್ನು ಪರಿಚಿಯಿಸಿ ಪೋಷಕರಿಂದ ಹಣ ವಸೂಲಿಗಿಳಿದಿರುವುದು ದುರಂತ.

ಅನ್ಲಾಕ್ 4ರ ಮಾರ್ಗಸೂಚಿಗಳ ಅನ್ವಯ ಪ್ರೌಢಶಾಲೆಗಳನ್ನು ತೆರೆಯಲು ಹಸಿರು ನಿಶಾನೆ ದೊರೆತೊಡನೆಯೇ ಖಾಸಗಿ ಶಾಲೆಗಳು ‘ಕೋವಿಡ್ ಫೀಸ್’ ಪ್ರಾರಂಭಿಸಿವೆ. ಅಂದರೆ ಥರ್ಮಲ್ ಸ್ಕಾನಿಂಗ್, ಸ್ಯಾನಿಟೈಸಿಂಗ್ ಮತ್ತು ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಗೆ  ನೇಮಕ ನೆಪದಲ್ಲಿ ಒಟ್ಟು ಶುಲ್ಕದಲ್ಲಿ ಶೇ.5 ರಷ್ಟು ‘ಕೋವಿಡ್ ಫೀಸ್’ ವಸೂಲಿ ಮಾಡಲು ನಿರ್ಧರಿಸಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟಂಬರ್ 21 ರಿಂದ ಶಾಲೆಗಳನ್ನು ತೆರೆಯಲು ಕೆಲ ಮಾರ್ಗಸೂಚಿಗಳನ್ನು ಒದಗಿಸಿದ್ದು, ಕೆಲ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ನಿರ್ದೇಶಿಸಿದೆ. ಮಕ್ಕಳು ಪದೇ ಪದೇ ಮುಟ್ಟಬಹುದಾದ ಮೇಲ್ಮೈಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಗಳು ಸೇರಿ ಇತರ ವಸ್ತುಗಳನ್ನು ಸದಾ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಲು ತಿಳಿಸಿದೆ. ಹಾಗಾಗಿ ಖಾಸಗಿ ಶಾಲೆಗಳು ಹೊಸ ಶುಲ್ಕ ವಿಧಿಸಲು ಮುಂದಾಗಿವೆ.

ಶಾಲೆಗಳ ನಿರ್ವಹಣೆಗೆ ಹೆಚ್ಚಿನ ಹಣ ಬೇಕಾಗಿದೆ. ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕಿದೆ. ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ಖರೀದಿಸಬೇಕಿದೆ. ಹಾಗಾಗಿ ಒಟ್ಟು ಶುಲ್ಕದಲ್ಲಿ ಶೇ.5ರಷ್ಟನ್ನು ಮಾತ್ರ ಹೆಚ್ಚಿಸಲು ನಿರ್ಧಿಸಿದ್ದೇವೆ. ಪೋಷಕರು ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂಬುದು ಖಾಸಗಿ ಶಾಲೆಗಳ ಅಂಬೋಣ.

ಇನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇದು ತೀರಾ ವಿಚಿತ್ರಕಾರಿ ನಡೆಯಾಗಿದೆ. ಕೋವಿಡ್ ಹೆಸರಿನಲ್ಲಿ ಶುಲ್ಕವನ್ನು ಕಡಿಮೆ ಮಾಡಬೇಕೆ ಹೊರತು ಹೆಚ್ಚು ಮಾಡಬಾರದು. ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸಾಂಕ್ರಾಮಿಕ ಇನ್ನೆಷ್ಟು ಸವಾಲುಗಳನ್ನು ತಂದಿಡುತ್ತದೆಯೋ ತಿಳಿಯದಾಗಿದೆ.


ಇದನ್ನೂ ಓದಿ: ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...