ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವಂತೆ ಒತ್ತಾಯಿಸಿ 8 ವಿರೋಧ ಪಕ್ಷಗಳ ಸಂಸದರು ಸಂಸತ್ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ಸಂಸದರು “ನಮಗೆ ಜಿಎಸ್ಟಿ ಪರಿಹಾರ ಬೇಕು” ಎಂಬ ಘೋಷಣೆ ಎತ್ತಿದರು.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ತೃಣಮೂಲ ಕಾಂಗ್ರೆಸ್ (ಟಿಎಂಸಿ), ದ್ರಾವಿಡ ಮುನ್ನೇತ್ರ ಖಳಗಂ (ಡಿಎಂಕೆ), ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ), ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸಮಾಜವಾದಿ ಪಕ್ಷ ಮತ್ತು ಶಿವಸೇನೆ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮಾನವ ನಿರ್ಮಿತ ವಿಪತ್ತುಗಳಿಗಾಗಿ ದೇವರನ್ನು ದೂಷಿಸಬೇಡಿ: ಪಿ.ಚಿದಂಬರಂ
#WATCH दिल्ली : राज्यों को GST भुगतान किए जाने की मांग को लेकर TRS, TMC, DMK, RJD, AAP, NCP, समाजवादी पार्टी और शिवसेना के सांसदों ने संसद परिसर में महात्मा गांधी की प्रतिमा के सामने विरोध प्रदर्शन किया। pic.twitter.com/E8KxrEtHPh
— ANI_HindiNews (@AHindinews) September 17, 2020
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ’ಕೊರೊನಾ ಸಾಂಕ್ರಾಮಿಕವು ದೇವರ ಕಾರ್ಯ. ಹಾಗಾಗಿಯೇ ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತವಾಗಿದೆ’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ನಾಯಕರು ಪರಿಹಾರಕ್ಕಾಗಿ ಆಗ್ರಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಹಲವು ಬಾರಿ ಪತ್ರಗಳನ್ನು ಬರೆದಿದ್ದರು. ಕರ್ನಾಟಕ ಮಾತ್ರ ಜಿಎಸ್‌ಟಿ ಪರಿಹಾರಕ್ಕೆ ಒತ್ತಾಯಿಸದೆ ಸಾಲ ತೆಗೆದುಕೊಲ್ಳಲು ಸಮ್ಮತ ಸೂಚಿಸಿದೆ.


