Homeಮುಖಪುಟ4 ತಿಂಗಳಲ್ಲಿ ಚೀನಾ ಪಾಲಿರುವ ಬ್ಯಾಂಕಿನಿಂದ 9 ಸಾವಿರ ಕೋಟಿ ಸಾಲ ಪಡೆದ ಭಾರತ

4 ತಿಂಗಳಲ್ಲಿ ಚೀನಾ ಪಾಲಿರುವ ಬ್ಯಾಂಕಿನಿಂದ 9 ಸಾವಿರ ಕೋಟಿ ಸಾಲ ಪಡೆದ ಭಾರತ

ಗಾಲ್ವಾನ್ ಸಂಘರ್ಷದಲ್ಲಿ ದೇಶದ 20 ಸೈನಿಕರು ಹುತಾತ್ಮರಾದ ನಾಲ್ಕು ದಿನದಲ್ಲೇ 5,400 ಕೋಟಿ ರೂ ಸಾಲ ಪಡೆಯಲಾಗಿತ್ತು.

- Advertisement -
- Advertisement -

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಕೊರೊನಾವನ್ನು ನಿಭಾಯಿಸಲು, ಚೀನಾ ಪಾಲಿರುವ ಏಷ್ಯನ್ ಇನ್ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌‌ಮೆಂಟ್‌ ಬ್ಯಾಂಕ್ (AIIB) ನಿಂದ ಸುಮಾರು 9 ಸಾವಿರ ಕೋಟಿ ಸಾಲವನ್ನು ಭಾರತವು ಎರಡು ಕಂತಿನಲ್ಲಿ ಪಡೆದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಮಾಹಿತಿಯನ್ನು ಕೇಂದ್ರ ಹಣಕಾಸು ಖಾತೆಯ ಕಿರಿಯ ಸಚಿವ ಅನುರಾಗ್‌ ಠಾಕೂರ್‌ ಸಂಸತ್ತಿನಲ್ಲಿ ನೀಡಿದ್ದಾರೆ.  AIIB ಯ ಮುಖ್ಯ ಕಚೇರಿ ಚೀನಾದ ಬೀಜಿಂಗ್‌ನಲ್ಲಿದ್ದು ಈ ಬ್ಯಾಂಕಿನಲ್ಲಿ 26.61% ಪಾಲನ್ನು ಚೀನಾ ಹೊಂದಿದೆ. ಭಾರತ ಈ ಬ್ಯಾಂಕಿನಲ್ಲಿ 7.6% ಪಾಲನ್ನು ಹೊಂದಿದೆ.

ಇದನ್ನೂ ಓದಿ: ಮೋದಿಗೆ ಚೀನಾದ ಹೆಸರು ಉಚ್ಚರಿಸಲು ಭಯ: ರಣದೀಪ್ ಸುರ್ಜೇವಾಲ

ಸಾಲದಲ್ಲಿ ಮೊದಲನೆ ಕಂತು 3,600 ಕೋಟಿ ರೂ.ವನ್ನು ಮೇ ತಿಂಗಳ 8 ರಂದು ಪಡೆದಿದ್ದು, ಇದನ್ನು ಕೊರೊನಾ ಸಾಂಕ್ರಮಿಕವನ್ನು ನಿಭಾಯಿಸಲು ತೆಗೆದುಕೊಂಡ ತಕ್ಷಣದ ಕಾರ್ಯಗಳಿಗೆ ಬಳಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಎರಡನೆ ಕಂತು 5,400 ಕೋಟಿ ರೂ. ಜೂನ್ ತಿಂಗಳ 19 ರಂದು ಪಡೆದಿದ್ದು, ಇದನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ (PMGKY) ಕೊರೊನಾವನ್ನು ನಿಭಾಯಿಸಲು ವಿವಿದ ಯೋಜನೆಗಾಗಿ ಬಳಸಲಾಗಿದೆ ಎಂದಿದೆ.

ಜೂನ್ 15-16 ರಂದು ಗಾಲ್ವಾನ್‌ ಕಣಿವೆಯಲ್ಲಿ ಭಾರತ-ಚೀನಾ‌ ಸಂಘರ್ಷ ನಡೆದು ಭಾರತದ 20 ಸೈನಿಕರು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಚೀನಾ ಭಾರತದ ಭೂಪ್ರದೇಶ ಅತಿಕ್ರಮಿಸಿದೆಯೆಂದು ಒಪ್ಪಿಕೊಂಡ ರಕ್ಷಣಾ ಸಚಿವಾಲಯ: ದಾಖಲೆ ಡಿಲಿಟ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...