ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರೋದ್ಯಮ ಕುಂಠಿತಗೊಂಡಿರುವ ಹಿನ್ನೆಲೆ ಉದ್ಯಮ ಮತ್ತು ಇತರೆ ಕ್ಷೇತ್ರಗಳಿಗೆ ಚೇತರಿಕೆ ನೀಡಲು 1,350 ಕೋಟಿ ರೂ.ಗಾತ್ರದ ಆರ್ಥಿಕ ಪ್ಯಾಕೇಜ್ ಅನ್ನು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದ್ದಾರೆ.
ಒಂದು ವರ್ಷ ನೀರು ಹಾಗೂ ವಿದ್ಯುತ್ ಬಿಲ್ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ನೀಡಿರೋದು ಪ್ಯಾಕೇಜ್ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದಕ್ಕಾಗಿ 105 ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಇದರಿಂದ ರೈತರು, ಸಾಮಾನ್ಯ ಜನರು, ಉದ್ಯಮಿ ಮತ್ತು ಇತರರು ಪ್ರಯೋಜನ ಪಡೆಯುತ್ತಾರೆ” ಎಂದು ಸಿನ್ಹಾ ಹೇಳಿದರು.
ಎಲ್ಲಾ ಸಾಲಗಾರರಿಗೆ ಮಾರ್ಚ್ 2021 ರವರೆಗೆ ಸ್ಟಾಂಪ್ ಶುಲ್ಕ ವಿನಾಯಿತಿ ನೀಡಲಾಗಿದೆ. ಕೈಗಾರಿಕಾ ವಲಯವನ್ನು ಪುನರುಜ್ಜೀವನಗೊಳಿಸಲು ಶೀಘ್ರದಲ್ಲೇ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಲಾಗುವುದು. ಪ್ರಧಾನಿ ಮೋದಿ ಘೋಷಣೆ ಮಾಡಿದ್ದ ಆತ್ಮನಿರ್ಭರ ಅಭಿಯಾನ 14,000 ಕೋಟಿ ರೂಪಾಯಿಗಳ ಸೌಲಭ್ಯಗಳ ಜೊತೆಗೆ ಹೆಚ್ಚುವಾರಿಯಾಗಿ ಈ ಪರಿಹಾರವನ್ನ ನೀಡಲಾಗುತ್ತಿದೆ ಎಂದು ಮನೋಜ್ ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ: ರವಿಕೃಷ್ಣಾ ರೆಡ್ಡಿಯವರಿಗೆ ಅಪಘಾತ: “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ
ಪ್ರಸಕ್ತ ಹಣಕಾಸು ವರ್ಷದಲ್ಲಿ 6 ತಿಂಗಳವರೆಗೆ ಯಾವುದೇ ಷರತ್ತುಗಳಿಲ್ಲದೆ ವ್ಯಾಪಾರ ವಲಯದ ಪ್ರತಿ ಸಾಲಗಾರನಿಗೆ ಶೇಕಡ 5ರಷ್ಟು ಬಡ್ಡಿ ಮನ್ನಾ ಅವಕಾಶ ನೀಡಲಾಗುತ್ತದೆ. ಇದು ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಕ್ರೆಡಿಟ್ ಕಾರ್ಡ್ ಯೋಜನೆಯಡಿ, ಕೈಮಗ್ಗ ಮತ್ತು ಕರಕುಶಲ ಉದ್ಯಮದಲ್ಲಿ ಕೆಲಸ ಮಾಡುವ ಜನರಿಗೆ ನೀಡಲಾಗುತ್ತಿದ್ದ ಹಣದ ಗರಿಷ್ಠ ಮೊತ್ತ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ. ಜೊತೆಗೆ ಶೇ. 7 ರಷ್ಟು ಬಡ್ಡಿ ಮನ್ನಾ ಅವಕಾಶ. ಇದರ ಜೊತೆಗೆ ಅಕ್ಟೋಬರ್ 1 ರಿಂದ ಜಮ್ಮು ಕಾಶ್ಮೀರ ಬ್ಯಾಂಕ್ನಲ್ಲಿ ಯುವ ಮತ್ತು ಮಹಿಳಾ ಉದ್ಯಮಗಳಿಗೆ ವಿಶೇಷ ಡೆಸ್ಕ್ ಪ್ರಾರಂಭ ಮಾಡಲಾಗುವುದು ಎಂದರು.


