Homeಅಂಕಣಗಳುಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ - ಎಚ್. ಎಸ್ ದೊರೆಸ್ವಾಮಿ

ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ.

- Advertisement -
- Advertisement -

ಆರ್ಥಿಕ ಶೋಷಣೆಯನ್ನ ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಸರ್ಕಾರಗಳ ಮತ್ತು ಸಂಸತ್ತಿನ ಗುರಿಯಾಗಬೇಕು. ಸ್ವಾತಂತ್ರ್ಯವೆಂದರೆ ದುರ್ಬಲವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಹೋಗುವುದಲ್ಲ. ಶೋಷಣೆಯನ್ನು ತಡೆಗಟ್ಟುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ, ಸಂಪನ್ಮೂಲಗಳ ಸ್ವಾಮ್ಯ ಒಡೆತನ ಸರ್ಕಾರದ ಕೈಯಲ್ಲಿ ಉಳಿಸಿಕೊಳ್ಳುವುದು. ಪ್ರಮುಖ ಉದ್ಯೋಗಗಳು ರಾಜ್ಯಾಡಳಿತದ ವ್ಯಾಪ್ತಿಯಲ್ಲಿರಬೇಕು. ಕೃಷಿಭೂಮಿ ಸರ್ಕಾರದ ಸ್ವಾಮ್ಯದಲ್ಲಿರಬೇಕು. ಹಾಗೆಂದರೆ ಸರ್ಕಾರ ಜಮೀನನ್ನು ಯಾರಿಗೆ ಅಂದರೆ ಅವರಿಗೆ, ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಿಕ್ಕಿದಂತೆ ಹಂಚುವ ಅಧಿಕಾರ ಅದಕ್ಕಿರಬೇಕೆಂಬ ಅರ್ಥವಲ್ಲ. ಪ್ರಮುಖ ಉದ್ಯಮಗಳು ಸರ್ಕಾರದ ವ್ಯಾಪ್ತಿಯಲ್ಲಿ ನಿರ್ವಹಣೆಯಾಗಬೇಕು. ವಿಮಾ ಸಂಸ್ಥೆಗಳ, ಲೇವಾದೇವಿ ಸಂಸ್ಥೆಗಳ ರಾಷ್ಟ್ರೀಕರಣ ಆಗಬೇಕು. ಜಮೀನ್ದಾರ, ಜೀತಗಾರ, ಕೃಷಿಕಾರ್ಮೀಕ ಮುಂತಾದ ಬರ್ಬರ ವ್ಯವಸ್ಥೆಗಳು ಕೊನೆಗೊಳ್ಳಬೇಕು. ದುರ್ಬಲವರ್ಗದವರಿಗೆ ಒದಗಿಸುವ ವಿಶೇಷ ರಕ್ಷಣಾ ನಿಬಂಧನೆಗಳನ್ನು ಸಂವಿಧಾನದ ಮೂಲಭೂತಹಕ್ಕುಗಳ ಪಟ್ಟಿಗೆ ಸೇರಿಸಬೇಕು. ಇದನ್ನು ಈಗ ಸಂವಿಧಾನದ ನಿರ್ದೇಶಕ ತತ್ವಗಳನ್ನಾಗಿ ಸೇರಿಸಲಾಗಿದೆ.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ವ್ಯಾಪಕ ತಳಹದಿಯ ಮೇಲೆ ರಚಿತವಾಗಿದೆ. ಸಮಗ್ರ ದೇಶದ ಹಿತದೃಷ್ಟಿಯಿಂದ ರಚಿತವಾಗಿದೆ.

ವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿಗಳಿಗೆ ಮಾತ್ರ ಅನ್ವಯವಾಗುವ ಮಹಾಮಂತ್ರ ಎಂದು ಪಟ್ಟಭದ್ರರು ಭಾವಿಸುತ್ತಾರೆ. ಅದರಿಂದಾಗಿ ಇದು ಶ್ರಮಜೀವಿಗಳ ದಾಸ್ಯಕ್ಕೆ ದಾರಿಮಾಡುತ್ತದೆ. ಹಿಂದೆ ದಲಿತರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ತಮ್ಮ ಶ್ರಮಶಕ್ತಿಗೆ ಸರಿಯಾದ ಪರಿಹಾರ ಪಡೆಯುವ ಅಧಿಕಾರ ಇರಲಿಲ್ಲ. ಶ್ರೀಮಂತ ರೈತರಿಗೆ ಅವರು ಖಾಯಂ ಜೀತದಾಳುಗಳಾಗಿದ್ದರು. ಅವರಿಗೆ ವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಅದು ಏನಿದ್ದರೂ ಶ್ರೀಮಂತರ ಸ್ವತ್ತಾಗಿತ್ತು.

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ. ಆ ಸಂಕೋಲೆಗಳನ್ನು ಕಳಚಿಕೊಳ್ಳುವುದೊಂದೇ ಇರುವ ಪರಿಹಾರ ಮಾರ್ಗ.

ಒಕ್ಕಲಿಗ ಸಣ್ಣ ರೈತರು ಮತ್ತು ಕಾರ್ಮಿಕರು, ಒಕ್ಕಲಿಗ White Collar ಗಿಂತ ತಾವು ಕೀಳು ಎಂದು ಭಾವಿಸುವರಾದರೂ ತಾವು ಅಸ್ಪೃಶ್ಯ ವರ್ಗದವರಿಗಿಂತ ಮೇಲ್ವರ್ಗದವರು ಎಂದು ಗರ್ವಪಡುತ್ತಾರೆ. ತಮ್ಮಂತೆಯೇ ಆರ್ಥಿಕವಾಗಿ ಹಿಂದುಳಿದ ಅಸ್ಪೃಶ್ಯರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ವೈರಿಗಳಂತೆ ನೋಡುತ್ತಾರೆ.

ಅಸ್ಪೃಶ್ಯರಿಗೆ ಸಮಾಜದಲ್ಲಿ ಗೌರವ ದೊರೆಯಬೇಕಾದರೆ ಅವರು ಮೊದಲು ಮಾಡಬೇಕಾದ ಕೆಲಸ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು. ಹಣದಿಂದಲೇ ಸಮಾಜ ಜನರನ್ನು ಅಳೆಯುವ ಈ ಕಾಲದಲ್ಲಿ ಅಸ್ಪೃಶ್ಯರು ಆರ್ಥಿಕವಾಗಿ ಚೇತರಿಸಿಕೊಳ್ಳದಿದ್ದರೆ ಸಮಾಜ ಅವರನ್ನು ತಿರಸ್ಕಾರ ಬುದ್ಧಿಯಿಂದ ನೋಡುತ್ತದೆ, ಕೀಳಾಗಿ ಕಾಣುತ್ತದೆ. ವೈರಿಗಳಂತೆ ಕಾಣುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಅಸ್ಪೃಶ್ಯರು ನಡೆದುಕೊಳ್ಳಬೇಕು.

ಆದರೆ ಒಂದು ಎಚ್ಚರಿಕೆ. ಭೌತಿಕ ಸುಖವೊಂದೇ ಸಾರಸರ್ವಸ್ವ ಎಂದು ಅಸ್ಪೃಶ್ಯರು ಭಾವಿಸಬಾರದು. ಅಸ್ಪೃಶ್ಯಯರಿಗೂ ಉಳಿದ ಎಲ್ಲರಂತೆ ಮನಸ್ಸು, ಹೃದಯಗಳಿವೆ. ಆ ಮನಸ್ಸಿಗೆ, ಹೃದಯಕ್ಕೆ ವಿಚಾರದ ಆಹಾರ ಅತ್ಯಗತ್ಯ. ವೈಚಾರಿಕತೆ ಮಾನವನ ಮನಸ್ಸಿನಲ್ಲಿ ಆಸೆಗಳನ್ನು ಹುಟ್ಟು ಹಾಕುತ್ತದೆ. ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅಸ್ಪೃಶ್ಯ ಸಂಘಟನೆಗಳು ವಿಚಾರಕ್ರಾಂತಿಯ ಬೀಜವನ್ನು ಅಸ್ಪೃಶ್ಯರ ಮನಸ್ಸಿನಲ್ಲಿ ಬಿತ್ತಬೇಕು.

ಆರ್ಥಿಕ ಬೆಳವಣಿಗೆ ಅಸ್ಪೃಶ್ಯರ ಸರ್ವತೋಮುಖ ಬೆಳವಣಿಗೆಗೆ ಒಂದು ಸಾಧನ. ಆರ್ಥಿಕ ಅಭಿವೃದ್ಧಿ ಆಯಿತು ಎಂದರೆ ಅಸ್ಪೃಶ್ಯನಿಗೆ ಸಮಾಜ ತನ್ನತಾನಾಗೇ ಗೌರವ ನೀಡಲು ಆರಂಭ ಮಾಡುತ್ತದೆ.

ಪರಂಪರಾಗತ ಉದ್ಯೋಗಗಳನ್ನು ದಲಿತರು ಬಿಡಬೇಕು. ಸತ್ತ ಪ್ರಾಣಿಗಳನ್ನು ಹೊತ್ತು ಹೂಳುವುದು ಮತ್ತು ತಿನ್ನುವುದು, ತೋಟಿ ತಳವಾರ ಹುದ್ದೆಗಳನ್ನು ವಂಶಪಾರಂಪರ್ಯದ ಕಸುಬು ಎಂದು ಊರು ಕೇರಿಯಲ್ಲಿ ಭಾವಿಸುವುದು, ಮೇಲ್ಜಾತಿಯವರ ಆಣತಿಯಂತೆ ತಮಟೆ ಹೊಡೆದು ಸಾರುವುದು ಎಲ್ಲ ನಿಲ್ಲಬೇಕು. ವಿದ್ಯಾಭ್ಯಾಸ ಪಡೆಯಲು ಎರಡು ವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವೆಂದರೆ ಬ್ರಾಹ್ಮಣವಾದ ಮತ್ತು ಬಂಡವಾಳವಾದ. ಬ್ರಾಹ್ಮಣವಾದ ಎಂಬುದನ್ನು ತಪ್ಪಾಗಿ ಅರ್ಥೈಸಬಾರದು. ಬ್ರಾಹ್ಮಣವಾದವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ವಿರೋಧಿಸುವ ಪ್ರವೃತ್ತಿ. ಈ ಪ್ರವೃತ್ತಿ ಬ್ರಾಹ್ಮಣರ ಗುತ್ತಿಯಾಗಿ ಏನೂ ಉಳಿದಿಲ್ಲ. ಎಲ್ಲ ಜಾತಿಗಳಲ್ಲೂ ಇಂತಹ ಜನ ಇದ್ದಾರೆ. ಈಗ ಇದು ಎಲ್ಲ ವರ್ಗದವರ ಸಿದ್ಧಾಂತವಾಗಿದೆ. ಈ ಪ್ರವೃತ್ತಿಯನ್ನು ದಲಿತರು ಹೋರಾಟದ ಮೂಲಕ ಬದಲಿಸಬೇಕು.

ಇನ್ನೊಂದು ಬಂಡವಾಳಶಾಹಿ ನೀತಿ. ಅದು ಲಾಭಕೋರರ ಸಂತೆ. ಬಂಡವಾಳಶಾಹಿಗಳ ಆರ್ಥಿಕನೀತಿ, ಧರ್ಮವೋ ಅಧರ್ಮವೋ ಯಾವುದೇ ಮಾರ್ಗವಾಗಲಿ ಲಾಭಗಳಿಸುವುದು. ಆಳುವ ಸರ್ಕಾರವನ್ನು ತನ್ನ ವಶ ಮಾಡಿಕೊಂಡು ಕೂಡಿಕೊಳ್ಳುವುದು. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿಸುವುದು. ಅವರಿಗೆ ಸರ್ಕಾರ ಸಕಲ ಸವಲತ್ತುಗಳನ್ನು ನೀಡಲು ತುದಿಗಾಲ ಮೇಲೆ ನಿಲ್ಲುತ್ತದೆ. ಅದಕ್ಕೆ ಕಾರಣ ಅವರು ಪಕ್ಷಕ್ಕೆ ನೀಡುವ ಎಂಜಲು ಹಣ. ಸರ್ಕಾರ ಸಮಾಜವಾದದಿಂದ ಬಂಡವಾಳಶಾಹಿ ನೀತಿಗೆ ತಿರುಗುವಂತೆ ಮಾಡುವುದು ಬಂಡವಾಳಶಾಹಿಯ ಪ್ರಥಮ ಆದ್ಯತೆ. ಮಾಲಿಕರು, ಕಾರ್ಮಿಕರು ಸರ್ಕಾರ ಮೂವರೂ ಸೇರಿ ಕಾರ್ಮಿಕ ನೀತಿ ರೂಪಿಸಬೇಕು, ಶ್ರಮಿಕರ ಕೈಗೆ ಸರ್ಕಾರ ಹೋಗಬೇಕು, ಶ್ರಮಿಕರಲ್ಲಿ ಬೇರುಬಿಟ್ಟಿರುವ ಜಾತಿ,ಭಾವನೆ, ಉಚ್ಚ ನೀಚಭಾವನೆ, ಮೇಲುಕೀಳು ಭಾವನೆ ಹೋಗದೆ ಇದ್ದರೆ ಶ್ರಮಿಕರು ಒಂದಾಗುವುದು ಹೇಗೆ ಸಾಧ್ಯವಾದೀತು? ಸಮಾಜದಲ್ಲಿ ಕ್ರಾಂತಿತರಲು ಹೇಗೆ ಸಾಧ್ಯವಾದೀತು?

ಅಂಬೇಡ್ಕರರ ಆರ್ಥಿಕನೀತಿ ಯಾವುದೇ ಜಾತಿ, ಪಕ್ಷ, ಕಾಲ, ದೇಶಗಳಿಗೆ ಸೀಮಿತವಾಗಿರದೆ ಇಡೀ ಮಾನವಕುಲದಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ನೆಮ್ಮದಿ ಬದುಕನ್ನು ಬದುಕಲು ನೆರವಾಗುವುದಾಗಿದೆ. ಇಡೀ ಮಾನವಸಮೂಹದಲ್ಲಿ ಸಮಾನತೆಯನ್ನು ತರುವುದೇ ಅಂಬೇಡ್ಕರರ ಆರ್ಥಿಕ ಗುರಿ.


ಇದನ್ನೂ ಓದಿ: ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...