ಸಿಎಎ ಪ್ರತಿಭಟನೆಯಲ್ಲಿ ’ಶಾಹಿನ್ ಬಾಗ್ ಅಜ್ಜಿ’ ಎಂದೇ ಪ್ರಖ್ಯಾತಿ ಹೊಂದಿದ್ದ 82 ವರ್ಷದ ಬಿಲ್ಕೀಸ್, ’ಟೈಮ್’ ನಿಯತಕಾಲಿಕೆಯ ವರ್ಷದ ಅತ್ಯಂತ ಪ್ರಭಾವಶಾಲಿ 100 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ದೇಶದಾದ್ಯಂತ ಸಿಎಎ ವಿರುದ್ದ ನಡೆಯುತ್ತಿದ್ದ ಪ್ರತಿಭಟನೆಯ ಕೇಂದ್ರ ಬಿಂದು ಆಗಿದ್ದ ಶಾಹಿನ್ ಬಾಗ್‌ನಲ್ಲಿ, ದೆಹಲಿಯ ಚಳಿಗೂ ಜಗ್ಗದೆ ಕೋಟ್ಯಾಂತರ ಚಳವಳಿಗಾರರ ಸ್ಫೂರ್ತಿಯ, ಪ್ರತಿರೋಧದ ಮುಖವಾಗಿ ಅವರು ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಶಾಹಿನ್ ಬಾಗ್‍ಗಳು ಬಂಧುತ್ವ ಬೆಸೆಯುತ್ತಿವೆ
ಟೈಮ್ಸ್‌ನಲ್ಲಿ ಅವರ ಬಗ್ಗೆ ಬರೆದಿರುವ ಖ್ಯಾತ ಪತ್ರಕರ್ತೆ, “ನಾನು ಅವರ ಬಗ್ಗೆ ಬರೆಯಿತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ” ಎಂದು ಹೇಳಿದ್ದಾರೆ.
“ಒಂದು ಕೈಯಲ್ಲಿ ಜಪ ಮಣಿ, ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಕುಳಿತಿರುತ್ತಿದ್ದ ಬಿಲ್ಕಿಸ್ 82 ರ ವಯಸ್ಸಿನಲ್ಲಿಯೂ ಭಾರತದ ಧ್ವನಿಯಾದರು. ಬೆಳಿಗ್ಗೆ 8 ರಿಂದ ಮಧ್ಯರಾತ್ರಿಯವರೆಗೂ ಅವರು ಪ್ರತಿಭಟನಾ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದರು” ಎಂದು ಪತ್ರಕರ್ತೆ ಬರೆದಿದ್ದಾರೆ.

“ನನ್ನ ನರನಾಡಿಗಳಲ್ಲಿ ರಕ್ತ ಹರಿಯುವುದು ನಿಲ್ಲುವವರೆಗೂ ನಾನು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಇದರಿಂದ, ಈ ದೇಶದ ಮತ್ತು ಜಗತ್ತಿನ ಜನರು ನ್ಯಾಯ ಮತ್ತು ಸಮಾನತೆಯ ಗಾಳಿಯನ್ನು ಉಸಿರಾಡುತ್ತಾರೆ” ಎಂದು ಬಿಲ್ಕೀಸ್ ಹೇಳಿದ್ದಾಗಿ ಪತ್ರಕರ್ತೆ ರಾಣಾ ಅಯೂಬ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಟೈಮ್ ನಿಯತಕಾಲಿಕೆಯ ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಗೂಗಲ್ ಕಾರ್ಯನಿರ್ವಾಹಕ ಸುಂದರ್ ಪಿಚ್ಚೈ ಮುಂತಾದವರು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: BJP ಕಾರ್ಯಕರ್ತನ ಅಂಗಡಿಯಲ್ಲಿ ಮಾಡಿದ ವಿಡಿಯೋವನ್ನು ಶಾಹೀನ್ ಬಾಗ್ ಸ್ಟಿಂಗ್ ಎಂದು ಸುಳ್ಳು ಹೇಳಿದ BJP ಐಟಿ ಸೆಲ್


