ಕೊರೊನಾ ಸಾಂಕ್ರಮಿಕ ದೇಶಕ್ಕೆ ಅಪ್ಪಳಿಸಿದ ಮೇಲೆ ಕೇಂದ್ರ ಸರ್ಕಾರ ಏಕಾಏಕಿ ಘೋಷಣೆ ಮಾಡಿದ ಲಾಕ್‌ಡೌನ್‌ನಿಂದ ಆದ ದುಷ್ಪರಿಣಾಮಗಳು, ಪಿಎಂ ನಿಧಿಯ ವಿವರಗಳು, ವಲಸೆ ಕಾರ್ಮಿಕರ ಬಗ್ಗೆ ಗಮನ ಹರಿಸದ ಸರ್ಕಾರದ ವಿರುದ್ಧ ಟ್ವಿಟ್ಟರ್ ಅಭಿಯಾನ ಶುರುವಾಗಿದೆ. ಇಂದು ಸಂಜೆ 7 ಗಂಟೆಯಿಂದ #MigrantLivesStillMatter ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಅಭಿಯಾನ ನಡೆಯಲಿದೆ ಎಂದು Migrant Workers Solidarity Network ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿ ಆರು ತಿಂಗಳು ಕಳೆದಿದೆ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೇ, ಯಾವುದೇ ಯೋಜನೆ ಕೈಗೊಳ್ಳದೆ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಿ ಸಾವಿರಾರು ವಲಸೆ ಕಾರ್ಮಿಕರ ಸಾವಿಗೆ ಕೇಂದ್ರ ಕಾರಣವಾಗಿದೆ. ಆದರೆ ಈ ಕುರಿತು ಮಾಹಿತಿಯಿಲ್ಲದ ಕಾರಣ ಪರಿಹಾರ ಸಹ ಇಲ್ಲ ಎಂದು ಕೇಂದ್ರ ಕೈಚೆಲ್ಲಿ ಕುಳಿತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 months of announcement of unplanned lockdown
⭕ No significant step from government for migrant workers either in destination cities or in villages.
⭕ No-one knows what exactly happened to the contribution given to PM-cares (1/2) pic.twitter.com/c7OQs1zvXS
— Migrant Workers Solidarity Network (@migrant_IN) September 24, 2020
ಇದನ್ನೂ ಓದಿ: NEP ಜಾರಿ ಕರ್ನಾಟಕದಲ್ಲಿಯೇ ಮೊದಲು ಎಂದ ಡಿಸಿಎಂ: ಟ್ವಿಟ್ಟರ್‌ನಲ್ಲಿ ‘#RejectNEP2020’ ಟ್ರೆಂಡ್
ಆರು ತಿಂಗಳು ಕಳೆದರು ಈ ದುರ್ಘಟನೆಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ಸರ್ಕಾರ ಯಾವುದೇ ಹೆಜ್ಜೆ ಮುಂದಿಡುತ್ತಿಲ್ಲ. ಅವರಿಗೆ ಸೂಕ್ತ ಮೂಲಸೌಕರ್ಯಗಳನ್ನು ಸಹ ಸರ್ಕಾರ ನೀಡಿಲ್ಲ. ಪಿಎಂ ನಿಧಿ ಬಗ್ಗೆ ಈವರೆಗೆ ಯಾರಿಗೂ ಮಾಹಿತಿ ನೀಡುತ್ತಿಲ್ಲ. ಕೊರೊನಾ ಕಾರಣದಿಂದ ಕಷ್ಟದಲ್ಲಿರುವವರ ಸಹಾಯಕ್ಕೆ ಎಂದು ಕೋಟ್ಯಾಂತರ ಜನ ಕೋಟ್ಯಾಂತರ ರೂಪಾಯಿಗಳನ್ನು ದಾನ ನೀಡಿದ್ದಾರೆ ಆದರೆ ಅದರ ಬಗ್ಗೆ ಕೇಂದ್ರ ಸರ್ಕಾರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ.
ಇತ್ತ ಮಾಧ್ಯಮಗಳು ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಜನಸಾಮಾನ್ಯರನ್ನು ಬೇರೆಡೆಗೆ ತಿರುಗಿಸುವ ಕೆಲಸ ಮಾಡುತ್ತಿದ್ದು, ವಾಸ್ತವದ ಸಮಸ್ಯೆಗಳನ್ನು ಮರೆಮಾಚುತ್ತಿವೆ. ಈ ಎಲ್ಲಾ ವಿಚಾರಗಳ ವಿರುದ್ಧ ಪ್ರತಿಭಟಿಸಲು ಟ್ವಿಟ್ಟರ್ ಅಭಿಯಾನ ಕೈಗೊಂಡಿದೆ. 7 ಗಂಟೆಯಿಂದ #MigrantLivesStillMatter ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಲು Migrant Workers Solidarity Network ಮನವಿ ಮಾಡಿದೆ.


