Homeಮುಖಪುಟಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #NoMoreBJP, #unemploymentday

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #NoMoreBJP, #unemploymentday

ಇದೇ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಆ ದಿನವನ್ನು "ನಿರುದ್ಯೋಗ ದಿನ"ವನ್ನಾಗಿ ಆಚರಿಸಲು ಕರೆ ನೀಡಲಾಗುತ್ತಿದೆ.

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯ ಈ ಬಾರಿಯ ಮನ್‌ಕೀ ಬಾತ್‌ನಿಂದ ಶುರುವಾದ ಡಿಸ್‌ಲೈಕ್‌ಗಳ ಸಮರದ ಜೊತೆಗೆ ಇಂದು ಟ್ವೀಟ್ಟರ್‌ನಲ್ಲಿ #NoMoreBJP, #unemploymentday ಭಾರಿ ಟ್ರೇಂಡಿಂಗ್‌ ನಲ್ಲಿದೆ. ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಆಡಳಿತದ ನ್ಯೂನತೆಗಳನ್ನು ಟ್ವೀಟ್ಟಿಗರು ಪೋಸ್ಟ್‌ ಮಾಡುತ್ತಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು ಯುವ ಸಮೂಹ ಬೀದಿಗೆ ಬಂದಿದೆ ಆದರೂ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಬೇಡದ ವಿಚಾರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಇದನ್ನೂ ಓದಿ: ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ಹಿಂದಿ ಹೇರಿಕೆಯ ವಿರುದ್ಧ ಬಹುಭಾಷ ನಟ ಪ್ರಕಾಶ್ ರಾಜ್

ಬೆಳಗ್ಗೆಯಿಂದಲೇ ’#NoMoreBJP’ ಟ್ರೇಂಡಿಂಗ್‌ ನಲ್ಲಿದ್ದು, ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಪೋಸ್ಟರ್‌ಗಳು, ಪತ್ರಿಕೆಗಳ ಕಟಿಂಗ್ಸ್‌ಗಳು, ಉದ್ಯೋಗ ನೀಡಿ ಎಂಬ ಮೀಮ್ಸ್‌ಗಳನ್ನು ಹಂಚಿಲಾಗುತ್ತಿದೆ.

ಇದರ ಜೊತೆಗೆ ಬದಲಾವಣೆ ಒಳ್ಳೆಯ ದಿನಗಳನ್ನು ತರುತ್ತದೆ. ನಾವು ಈ ಸರ್ಕಾರವನ್ನೂ ಬದಲಿಸಬೇಕಿದೆ ಎಂಬ ಟ್ವೀಟ್‌ಗಳು ಹರಿದಾಡುತ್ತಿವೆ. ನಿಮ್ಮ ಸುಳ್ಳು ಭರಸವೆಗಳು ಬೇಡ, ನಮಗೆ ಉದ್ಯೋಗ ಬೇಕು. ನಿಮ್ಮ ಹುಟ್ಟುಹಬ್ಬದ ದಿನ ನಿರುದ್ಯೋಗ ದಿನ ಆಚರಿಸುತ್ತವೆ ಎಂದು ಟ್ವೀಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: ರೈತವಿರೋಧಿ ಸುಗ್ರಿವಾಜ್ಞೆಗಳು ಬೇಡ: ಕೇಂದ್ರದ ವಿರುದ್ಧ ತಿರುಗಿಬಿದ್ದ ರೈತರು

ಇದೇ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಆ ದಿನವನ್ನು “ನಿರುದ್ಯೋಗ ದಿನ”ವನ್ನಾಗಿ ಆಚರಿಸಲು ಕರೆ ನೀಡಲಾಗುತ್ತಿದೆ. ಈ ವಾರ ಮೋದಿಯವರ ಹುಟ್ಟುಹಬ್ಬವಿರುವುದರಿಂದ ದೇಶದ ಎಲ್ಲಾ ನಿರುದ್ಯೋಗಿ ಯುವಜನತೆ #unemploymentday ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ “ನಿರುದ್ಯೋಗ ದಿನ” ವನ್ನು ಆಚರಿಸಬೇಕು ಎಂಬ ಟ್ವೀಟ್‌ಗಳು ಕಾಣಿಸುತ್ತಿವೆ.

#NoMoreBJP ಜೊತೆಗೆ #बेरोजगार_सप्ताह, #unemploymentday ಹ್ಯಾಶ್‌ಟ್ಯಾಗ್‌ಗಳು ಇಂದು ಟ್ರೆಂಡ್ ಆಗುತ್ತಲೇ ಇವೆ. ಸೆ.17ರಂದು ನಿರುದ್ಯೋಗ ದಿವಸ ಮಾಡಲು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಹರಿಬಿಡಲಾಗಿದೆ.

ಜಿಡಿಪಿ ಕುಸಿತ, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಕೊರೊನಾ ನಡುವೆ ನಡೆದ ಜೆಇಇ, ನೀಟ್ ಪ್ರವೇಶ ಪರೀಕ್ಷೆಗಳು,ವಿದ್ಯಾರ್ಥಿಗಳ ಆತ್ಮಹತ್ಯೆಗಳು, ರೈತರ ಆತ್ಮಹತ್ಯೆ, ಪ್ರವಾಹ ಪೀಡಿತ ರಾಜ್ಯಗಳಿಗೆ ಪರಿಹಾರ ನಿಡದಿರುವುದು, ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲು ನೀಡದಿರುವುದು ಮೋದಿ ಸರ್ಕಾರದ ವಿರುದ್ಧ ಯುವ ಸಮೂಹ ಸಿಡಿದೆಳಲು ಕಾರಣವಾಗಿದೆ.

ಇವುಗಳ ಜೊತೆಗೆ ಪ್ರಧಾನಿ ಒಂದು ಬಾರಿಯೂ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಯುವಕರಿಗಾಗಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಬಂದ ಸರ್ಕಾರ ಅದರ ಬದಲಾಗಿ ವಿದ್ಯಾರ್ಥಿಗಳಿಗೆ ಪಕೋಡ ಮಾರಿ, ಚಹಾ ಮಾರಿ ಎಂಬ ಮಾತುಗಳನ್ನು ವಿರೋಧಿಸಿ ಯುವಕರು ತಮ್ಮ ಆಕ್ರೋಶವೆಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಹೊರಹಾಕುತ್ತಿದ್ದಾರೆ.


ಇದನ್ನೂ ಓದಿ: ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ: ಟ್ವಿಟರ್‌ನಲ್ಲಿ #Govt_killed_Neet_students ಟ್ರೆಂಡಿಂಗ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...