Homeಮುಖಪುಟಜೆಇಇ-ನೀಟ್ 'ಮನುನೀತಿ' ಪರೀಕ್ಷೆಗಳಿದ್ದಂತೆ-ತಮಿಳು ನಟ ಸೂರ್ಯ ಟ್ವೀಟ್

ಜೆಇಇ-ನೀಟ್ ‘ಮನುನೀತಿ’ ಪರೀಕ್ಷೆಗಳಿದ್ದಂತೆ-ತಮಿಳು ನಟ ಸೂರ್ಯ ಟ್ವೀಟ್

"ದೇಶದ ನ್ಯಾಯಾಲಯಗಳಲ್ಲಿಯೇ, ಸೋಂಕಿನ ಭಯದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿರುವಾಗ, ಅದೇ ನ್ಯಾಯಾಲಯವು ನಿರ್ಭಯವಾಗಿ ಮತ್ತು ಖಡ್ಡಾಯವಾಗಿ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿದೆ" ಎಂದು ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ತಮಿಳುನಾಡಿನಲ್ಲಿ ಹಲವು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ನಟ ಸೂರ್ಯ, ಈ ಪ್ರವೇಶ ಪರೀಕ್ಷೆಗಳನ್ನು “ಮನುನೀತಿ”ಯ ಪರೀಕ್ಷೆಗಳು ಎಂದು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್ ಮಾಡಿರುವ ಪತ್ರದಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ನೀಟ್ ಪರೀಕ್ಷೆ ಮುಗಿದ ಕೆಲವು ಗಂಟೆಗಳ ನಂತರ, ಭಾನುವಾರ ಸಂಜೆ ಪತ್ರವೊಂದನ್ನು ಟ್ವೀಟ್ ಮಾಡಿ, “ಸರ್ಕಾರದ ಮೇಲೆ ಭಾರೀ ಪ್ರಮಾಣದಲ್ಲಿ ಒತ್ತಡ ಹಾಕಿ, ನೀಟ್ ವಿರುದ್ಧ ಏಕೀಕೃತ ಧ್ವನಿಯೆತ್ತಲು” ಕರೆ ನೀಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಭಾನುವಾರ ಸಂಜೆ ಬಿಡುಗಡೆ ಮಾಡಿದ ಪತ್ರದಲ್ಲಿ, “ಜೀವಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಪರೀಕ್ಷೆಯನ್ನು ಬರೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಒತ್ತಾಯಿಸಲ್ಪಡುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ವಾರದಲ್ಲಿ ತಮಿಳುನಾಡಿನ ಐವರು ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ!: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಜನರಲ್ಲಿನ ಅಸಮಾನತೆಗಳನ್ನು ಬಹಿರಂಗಗೊಳಿಸುವ ಕಾನೂನುಗಳನ್ನು ತಂದಿದ್ದಕ್ಕಾಗಿ ಸರ್ಕಾರವನ್ನು ದೂಷಿಸಿದ ಅವರು, “ಶಿಕ್ಷಣ ನೀತಿಗಳನ್ನು ರೂಪಿಸುವವರಿಗೆ ಬಡವರು ಮತ್ತು ದೀನ ದಲಿತರ ಬಗೆಗಿನ ವಾಸ್ತವಾಂಶಗಳ ಬಗ್ಗೆ ಅರಿವಿಲ್ಲ” ಎಂದು ಆರೋಪಿಸಿದ್ದಾರೆ.

“ದೇಶದ ನ್ಯಾಯಾಲಯಗಳಲ್ಲಿಯೇ, ಸೋಂಕಿನ ಭಯದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿರುವಾಗ, ಅದೇ ನ್ಯಾಯಾಲಯವು ನಿರ್ಭಯವಾಗಿ ಮತ್ತು ಖಡ್ಡಾಯವಾಗಿ ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿದೆ” ಎಂದು ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಆತ್ಮಹತ್ಯೆಗಳ ಸುದ್ದಿ ಮಾಧ್ಯಮಗಳಲ್ಲಿ ನಿರ್ದಿಷ್ಟ ದಿನದ ಚರ್ಚೆಗಳಿಗೆ ಸೀಮಿತವಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವವರು ಬರೆದಿರುವ ಟಿಪ್ಪಣಿಗಳಲ್ಲಿಯೂ ಸಹ ಕಾಗುಣಿತ ತಪ್ಪುಗಳನ್ನು ಹುಡುಕುವ ‘ಚಾಣಕ್ಯರು’ ಟಿವಿಯಲ್ಲಿ ಬಿಸಿ-ಬಿಸಿ ಚರ್ಚೆಗಳಲ್ಲಿ ತೊಡಗುತ್ತಿದ್ದಾರೆ” ಎಂದು ಮಾಧ್ಯಮಗಳ ವಿರುದ್ಧವೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಇಂತಹ ಪರೀಕ್ಷೆಗಳು ‘ಮನುನೀತಿ’ಯ ಪರೀಕ್ಷೆಗಳಾಗಿದ್ದು, ಇದು ವಿದ್ಯಾರ್ಥಿಗಳ ಅವಕಾಶಗಳನ್ನು ಮಾತ್ರವಲ್ಲದೇ, ಅವರ ಜೀವನವನ್ನೂ ಕಸಿದುಕೊಳ್ಳುತ್ತದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಇದು ಜೀವಾವಧಿ ಶಿಕ್ಷೆಯಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಮುಂದಿನ ವರ್ಷಕ್ಕೆ ಸಿದ್ಧವಾಗಬಹುದು: ಕೇಂದ್ರ ಸಚಿವ ಹರ್ಷವರ್ಧನ್

ಮಹಾಭಾರತದ ಕಥೆಯೊಂದನ್ನು ಉಲ್ಲೇಖಿಸಿ, ’’ಅಂದು ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿದ್ದರು. ಇಂದಿನ ಆಧುನಿಕ ದ್ರೋಣಾಚಾರ್ಯರು, 6ನೇ ತರಗತಿಯ ಮಗುವನ್ನು ಪರೀಕ್ಷೆ ಬರೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಒತ್ತಾಯಿಸುತ್ತಿದ್ದಾರೆ. ಇದನ್ನು ಸಾಬೀತುಪಡಿಸಿ ಮುಂದೆ ಹಾದುಹೋಗುವವರಿಗೆ ನೀಟ್ ಎಂಬ ಶಸ್ತ್ರಾಸ್ತಗಳು ಎದುರಾಗುತ್ತವೆ” ಎಂದು ಹೇಳಿದ್ದಾರೆ.

ನೀಟ್ ಪರೀಕ್ಷೆಗೆ ಹಾಜರಾಗಬೇಕಿದ್ದ 5 ಜನ ವಿದ್ಯಾರ್ಥಿಗಳು ಕಳೆದೊಂದು ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊರೊನಾ ಮಧ್ಯೆ ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದರೂ ಸಹ ಕೇಂದ್ರ ಪರೀಕ್ಷೆ ನಡೆಸುತ್ತಿರುವುದರಿಂದ ಒತ್ತಡಕ್ಕೊಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಇದರ ನಂತರ ತಮಿಳುನಾಡಿನಲ್ಲಿ ಅಕ್ರೋಷ ಭುಗಿಲೆದ್ದು, ಹಲವರು ನೀಟ್ ವಿರುದ್ಧ ಧನಿಯೆತ್ತಿ, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ನಿನ್ನೆ #Govt_Killed_NEET_Students ಎಂದು ಟ್ರೆಂಡಿಂಗ್ ಆಗಿತ್ತು.

ಈ ಮಧ್ಯೆ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ಪತ್ರ ಬರೆದು ನಟ ಸೂರ್ಯ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಪ್ರಾರಂಭಿಸಲು ಕೋರಿದ್ದಾರೆ.

ಇದನ್ನು ವಿರೋಧಿಸಿ ಟ್ವಿಟರ್‌ನಲ್ಲಿ #TNStandWithSuriya ಎಂದು ಟ್ರೆಂಡಿಂಗ್ ಆಗುತ್ತಿದ್ದು, ಈ ವರದಿ ಬರೆಯುವ ವೇಳೆಗೆ ಈ ಹ್ಯಾಶ್‌ಟ್ಯಾಗ್ ಬಳಸಿ ಸುಮಾರು 65 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.


ಇದನ್ನೂ ಓದಿ: ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ: ಟ್ವಿಟರ್‌ನಲ್ಲಿ #Govt_killed_Neet_students ಟ್ರೆಂಡಿಂಗ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ತಾರತಮ್ಯ; ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆಕೊಟ್ಟ ಡಿಎಂಕೆ

0
ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ನಡೆ ಖಂಡಿಸಿ ಆಡಳಿತಾರೂಢ ಡಿಎಂಕೆ ಶನಿವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...