ಒರಾಕಲ್
PC: Fortune

ಜನಪ್ರಿಯ ಅಪ್ಲಿಕೇಶನ್ ಟಿಕ್‌ಟಾಕ್‌ನ ಮೂಲ ಕಂಪೆನಿ ಬೈಟ್‌ಡ್ಯಾನ್ಸ್‌ ಟಿಕ್‌ಟಾಕ್‌ನ‌ ಮಾರಾಟಕ್ಕೆ ತನ್ನ ಆದ್ಯತೆಯ ಸೂಟರ್ ಆಗಿ ಒರಾಕಲ್‌ ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ಒಪ್ಪಂದದ ಪರಿಚಿತ ಮೂಲವೊಂದು ತಿಳಿಸಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಈ ಹಿಂದೆ ಅದನ್ನು ಖರೀದಿಸುವ ಉತ್ಸಾಹದಲ್ಲಿದ್ದ ಮೈಕ್ರೋಸಾಫ್ಟ್‌, ’’ಟಿಕ್‌ಟಾಕ್‌ ಅನ್ನು ಖರೀದಿಸುವ ತನ್ನ ಬಿಡ್‌ ತಿರಸ್ಕರಿಸಲಾಗಿದೆ” ಎಂದು ಪ್ರಕಟಿಸಿದೆ.

ಇದನ್ನೂ ಓದಿ: ಅಮೆರಿಕಾದ ಟಿಕ್‌ಟಾಕ್‌ ಖರೀದಿಸಲು ಮುಂದಾದ ’ಒರಾಕಲ್ ಕಾರ್ಪ್’

ಟ್ರಂಪ್ ಆಡಳಿತವು ಸೆಪ್ಟೆಂಬರ್ ಮಧ್ಯದ ವೇಳೆಗೆ ಟಿಕ್‌ಟಾಕ್ ಅನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದು, ಚೀನಾದ ಮಾಲೀಕತ್ವ ಕಾರಣಕ್ಕಾಗಿ ರಾಷ್ಟ್ರೀಯ ಹಾಗೂ ಸುರಕ್ಷತೆಯ ಅಪಾಯಗಳನ್ನು ಹೇಳಿಕೊಂಡು ತನ್ನ ಅಮೇರಿಕಾದ ವ್ಯವಹಾರವನ್ನು ಮಾರಾಟ ಮಾಡಲು ಬೈಟ್‌ಡ್ಯಾನ್ಸ್‌ಗೆ ಆದೇಶಿಸಿದೆ. ಬಳಕೆದಾರರ ಡೇಟಾವನ್ನು ಚೀನಾಗೆ ರವಾನಿಸಲಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಕಳವಳಗೊಂಡಿದೆ ಎಂದು ಹೇಳಲಾಗಿತ್ತು.

ಟಿಕ್‌ಟಾಕ್‌ ಅನ್ನು ಖರೀದಿಸುವ ಒಪ್ಪಂದದಲ್ಲಿ ಮೈಕ್ರೋಸಾಫ್ಟ್ ಜೊತೆ ಪಾಲುದಾರರಾಗಲು ವಾಲ್‌ಮಾರ್ಟ್ ಯೋಜಿಸಿತ್ತು. ವಾಲ್‌ಮಾರ್ಟ್ ಇನ್ನೂ ಆಸಕ್ತಿ ಹೊಂದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ ಮೈಕ್ರೋಸಾಫ್ಟ್,”ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವಾಗ ಟಿಕ್‌ಟಾಕ್‌ನ ಬಳಕೆದಾರರಿಗೆ ನಮ್ಮ ಪ್ರಸ್ತಾಪವು ಉತ್ತಮವಾಗಬಹುದೆಂದು ವಿಶ್ವಾಸವಿದೆ” ಎಂದು ಹೇಳಿದ್ದು, “ಸುರಕ್ಷತೆ, ಗೌಪ್ಯತೆ, ಆನ್‌ಲೈನ್ ಸುರಕ್ಷತೆ ಮತ್ತು ತಪ್ಪು ಮಾಹಿತಿಗಳನ್ನು ಎದುರಿಸಲು ಈ ಸೇವೆಯ ಅತ್ಯುನ್ನತ ಮಾನದಂಡಗಳಿಗಾಗಿ ಗಮನಾರ್ಹ ಬದಲಾವಣೆಗಳನ್ನು ಮಾಡಬಹುದಿತ್ತು” ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ:  ಟಿಕ್‌ಟಾಕ್, ವೀಚಾಟ್ ಜೊತೆಗಿನ ವಹಿವಾಟುಗಳ ನಿಷೇಧ: ಡೊನಾಲ್ಡ್ ಟ್ರಂಪ್ ಸಹಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts