ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೊರೊನಾ ಸೋಂಕು ದೃಢಪಟ್ಟನಂತರ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿಂದೆ ಎಸ್‌ಪಿಬಿ ಗೆ ಕೊರೊನಾ ನೆಗೆಟೀವ್ ವರದಿ ಬಂದಿತ್ತು. “ಗಾಯಕ ಎಸ್.ಪಿ.ಬಾಲಸುಬ್ರಮ್ಮಣ್ಯಂ ಅವರಿಗೆ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ. ಆದರೆ ಅವರು ಇನ್ನೂ ವೆಂಟಿಲೇಟರ್ ಸಹಾಯದಲ್ಲಿರುವುದಾಗಿ” ಎಸ್ ಪಿ ಬಿ ಪುತ್ರ ಎಸ್.ಪಿ.ಚರಣ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ!
“ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವನ್ನ ಚಿಕ್ಕದಾಗಿ ಆಚರಣೆ ಮಾಡಲಾಗಿದೆ. ತಂದೆ ಶ್ವಾಸಕೋಶದಲ್ಲಿ ಉಂಟಾಗಿದ್ದ ಸೋಂಕು ನಿವಾರಣೆಯಾಗುತ್ತಿದೆ” ಎಂದು ತಾವು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಹೇಳಿದ್ದರು.
ಆದರೆ ಇಂದು ಸಂಜೆ ಆಸ್ಪತ್ರೆ ಬಿಡುಗಡೆ ಮಾಡಿರುವ ವರದಿಯಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: SPB ಗೆ ಕೊರೊನಾ ನೆಗೆಟೀವ್: ಆದರೆ ಇನ್ನೂ ವೆಂಟಿಲೇಟರ್ ಸಹಾದಲ್ಲಿದ್ದಾರೆ: ಎಸ್.ಪಿ.ಚರಣ್


