Homeಮುಖಪುಟಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ: ಸುರೇಶ್ ಗೌಡ ಹೇಳಿಕೆಗೆ ವ್ಯಾಪಕ ವಿರೋಧ

ಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ: ಸುರೇಶ್ ಗೌಡ ಹೇಳಿಕೆಗೆ ವ್ಯಾಪಕ ವಿರೋಧ

ಈ ಹೇಳಿಕೆ ಬಿಜೆಪಿ ಅಧ್ಯಕ್ಷರ ಸಣ್ಣತನವನ್ನು ತೋರಿಸುತ್ತದೆ. ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿಲು ಸುರೇಶ್ ಗೌಡರಿಗೆ ಹಿಂದೂಗಳ ಮೇಲೆ ದಿಢೀರ್ ಪ್ರೀತಿ ಉಕ್ಕಿ ಹರಿಯಿತೇ ಎಂದು ಬಹಳಷ್ಟು ಜನರು ಪ್ರಶ್ನಿಸಿದ್ದಾರೆ.

- Advertisement -
- Advertisement -

ತುಮಕೂರು ಜಿಲ್ಲೆಯ ‘ಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ’ ಎಂಬ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ, ಖಂಡನೆ ವ್ಯಕ್ತವಾಗಿದೆ. ಶಾಂತಿ, ಸೌಹಾರ್ದತೆ ಮತ್ತು ಭಾವೈಕ್ಯತೆಯಿಂದ ಬದುಕುತ್ತಿರುವ ಜನರ ನಡುವೆ ಮತಗಳಿಗಾಗಿ ದ್ವೇಷದ ಕಿಡಿಹೊತ್ತಿಸಿ ಗಲಭೆಗೆ ಪ್ರಚೋದಿಸುವುದು ಹೇಯ ಕೃತ್ಯ ಎಂದು ಸಾಮಾಜಿಕ ಜಾಲತಾಣಿಗರು ಕಿಡಿಕಾರಿದ್ದಾರೆ.

ಈ ಹೇಳಿಕೆ ಬಿಜೆಪಿ ಅಧ್ಯಕ್ಷರ ಸಣ್ಣತನವನ್ನು ತೋರಿಸುತ್ತದೆ. ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿಲು ಸುರೇಶ್ ಗೌಡರಿಗೆ ಹಿಂದೂಗಳ ಮೇಲೆ ದಿಢೀರ್ ಪ್ರೀತಿ ಉಕ್ಕಿ ಹರಿಯಿತೇ ಎಂದು ಬಹಳಷ್ಟು ಜನರು ಪ್ರಶ್ನಿಸಿದ್ದಾರೆ.

ತುಮಕೂರು ಜಿಲ್ಲೆ ಸಿದ್ದಪುರುಷರ, ಸಾಧುಗಳ ನೆಲೆವೀಡು. ಭಾವೈಕ್ಯತೆಗೆ ಹೆಸರಾದ ಕಲ್ಪತರು ನಾಡು. ಎಲ್ಲಾ ಧರ್ಮದವರೂ ಪರಸ್ಪರ ಸಹಬಾಳ್ವೆಯಿಂದ ಬದುಕು ನಡೆಸುತ್ತಿದ್ದಾರೆ. ಇಂತಹ ಶಾಂತಸಾಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಕಲ್ಲುತೂರಿ ಅಲೆಗಳನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ನೇರ ಚುನಾವಣೆ ಎದುರಿಸಲು ಸಾಧ್ಯವಾಗದೇ ಧರ್ಮ, ದೇವರು ವಿಷಯಗಳನ್ನು ಹರಿಯಬಿಟ್ಟು ಮತದಾರರನ್ನು ತನ್ನತ್ತ ಸೆಳೆಯುವ ಬಿಜೆಪಿ ಯತ್ನ ಕೈಗೂಡುವುದಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

“ಧರ್ಮ ಎನ್ನುವ ಅಸ್ತ್ರ ಬಿಟ್ಟು ಬೇರೆ ಏನ್ ಇದೆ ನಿಮ್ ಹತ್ರ? ನಿಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿದ್ರೆ ಹೇಳಿ, ರೈತ ಕಾರ್ಮಿಕ ವಿರೋಧಿ ಬಿ ಜೆ ಪಿ ಸರ್ಕಾರಕ್ಕೆ ಧಿಕ್ಕಾರ” ಎಂದು ಜಿ.ಭಗತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ತುಮಕೂರು ಜಿಲ್ಲೆ ಶಾಂತಿಯುತವಾಗಿಯೇ ಇದೆ. ಈ ರಾಜಕೀಯದ ಚದುರಂಗದ ಆಟದಲ್ಲಿ ರಾಜಕಾರಣಿಗಳು ಧರ್ಮ, ಜಾತಿ, ಅನ್ನೋ ಹೆಸರಲ್ಲಿ ಮುಗ್ಧ ಜನರನ್ನು ದಾಳಗಳನ್ನಾಗಿ ಬಳಸಿಕೊಂಡು ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ” ಎಂದು ಓಬಳ ನರಸಿಂಹ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಶಿರಾ ಶಾಂತಿಯುತವಾಗಿದೆ. ಸೌಹಾರ್ಧಯುತವಾಗಿದೆ. ಅಲ್ಲಿ ಜಾತಿಯತದ ವಿಷ ಬೀಜ ಬಿತ್ತಬೇಡೆ ಅಲ್ಲಿ ನಿಮ್ಮ ಬೆಳೆ ಬೆಯ್ಯುವುದಿಲ್ಲ.

Posted by Annapurna Venkatananjappa on Wednesday, September 23, 2020

“ತುಮಕೂರಿಗೆ ಕಳಂಕ ಈತ.. ರಾಜಕಾರಣ ಮಾಡಿ ಅಂದರೇ ಹಾದರ ಮಾಡುತ್ತಿದ್ದಾರೆ.. ಮನುಷ್ಯತ್ವ ಇಲ್ಲದ ಸೌಜನ್ಯ ಇಲ್ಲದ ಮೃಗಿಯ ವರ್ತನೆಯ ರಾಜಕಾರಣಿ. ರಾಜಕೀಯಕ್ಕಾಗಿ ಸಮಾಜದಲ್ಲಿ ಶಾಂತಿ ಕದಡುವ ಇಂತವರು ಮಾರಕ. ಈ ನಾಡಿನ ಪ್ರತಿಯೊಬ್ಬರು ಗೌರವಿಸುವ ನಮ್ಮ ನೆಲದ ಮಾಜಿ ಪ್ರಧಾನಿಗೆ ಕೊರಳಪಟ್ಟಿಗೆ ಕೈ ಹಾಕಿ ಅಂದವನು ಇವರಿಗೆ ಕನಿಷ್ಟ ವ್ಯಕ್ತಿ ಗೌರವವೂ ಇಲ್ಲಾ.. ಇವರ ಮಾತಿಗೆ ಮರುಳಾದರೇ ಶಿರಾ ಶಾಂತಿ ಸುವ್ಯವಸ್ಥೆಗೆ ತಾನೇ ಬೆಂಕಿ ಹಚ್ಚಿಕೊಂಡ ಹಾಗೇ” ಎಂದು ಮಂಜುನಾಥ್ ಹೆಚ್.ಎನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟರಾಜಪ್ಪ ಯರಗುಂಟೆ ಮಾತನಾಡಿ “ಮಂದಿರ, ಮಸೀದಿ, ಪಾಕಿಸ್ತಾನ, ಸಾಬ್ರೂ, ಸರ್ಜಿಕಲ್ ಸ್ಟ್ರೈಕ್, ತ್ರಿವಳಿತಲಾಖ್, ಜಮ್ಮು ಮತ್ತು ಕಾಶ್ಮೀರ ಇವುಗಳಷ್ಟೇ ಸಮಸ್ಯೆಗಳಲ್ಲ. ಇದರಾಚೆ ದೇಶದ ಆರ್ಥಿಕ ಸ್ಥಿತಿ, ನಿರುದ್ಯೋಗ ಸಮಸ್ಯೆ, ಆರ್ಥಿಕ ಅಭಿವೃದ್ಧಿ, ಕಾರ್ಪೊರೇಟ್ ಉದ್ಯಮಿಗಳಿಗೆ ರತ್ನಗಂಬಳಿ, ಇವರ ಸಾಲ ಮನ್ನ, ಭೂಸುಧಾರಣೆ ಎಪಿಎಂಸಿ ಖಾಯಿದೆಯಿಂದ ರೈತರಿಗೆ ಹೊಡೆತ, ಸಾರ್ವಜನಿಕ ಉದ್ದಿಮೆಗಳ ಬಾಗಿಲು, ನಿರುದ್ಯೋಗ ಸಮಸ್ಯೆ ಇನ್ನೂ ಸಾಮಾಜಿಕ ಸಮಸ್ಯೆಗಳು ಇದಾವೆ ಅಂತಾ ಸಮರ್ಥವಾಗಿ ಮುಟ್ಟಿಸುವಲ್ಲಿ ಕಾಂಗ್ರೆಸ್, ಅದಕ್ಕಿಂತ ಮುಖ್ಯವಾಗಿ ಎಲ್ಲಾ ಸಂಘಟನೆಗಳು ವಿಫಲವಾಗಿದೆ. ಅದರ ಫಲ ಈ ಬಿಜೆಪಿ ಸರ್ಕಾರ ಮತ್ತು ಆಡಳಿತ” ಎಂದಿದ್ದಾರೆ.

ಬಿಜೆಪಿಯವರದೇ ಬೆಟ್ಟದಷ್ಟು ಉಳುಕು ಇಟ್ಟುಕೊಂಡು ಚುನಾವಣೆ ಎದುರಿಸಲು ನೈತಿಕ ವಿಷಯಗಳ ಅಭಾವದಿಂದ ತಮ್ಮ ಓಬಿರಾಯನಕಾಲದ ಹಳೇ ವಿಷಬೆರೆತ ಹೇಳಿಕೆ ಬಿತ್ತರಮಾಡಿದ್ದಾರೆ. ಮಾತಿನಮೇಲೆ ನಿಗಾ ಇಲ್ಲದ ಭಾವೈಕ್ಯತೆ ಪದದ ಅರ್ಥವೇ ಗೊತ್ತಿಲ್ಲದ ಸುರೇಶಗೌಡನಂತಹವರ ಬಾಯಿಯಲ್ಲಿ ಇಂತಹ ಬೆಂಕಿ ಹಚ್ಚುವ ಹೇಳಿಕೆ ಬಾರದೇ ಇನ್ನೇನು ಬರಲು ಸಾಧ್ಯ? ಜನ ಯಾರು ಇಂದು ದಡ್ಡರಾಗಿ ಉಳಿದಿಲ್ಲ ಸೂಕ್ತ ತೀರ್ಪು ನೀಡಲು ಶಕ್ತರಾಗಿದ್ದಾರೆ ಎಂದು ಆರ್ ಕಾಮರಾಜ್ ಅಭಿಪ್ರಾಯಪಟ್ಟಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ನೆಲೆಯನ್ನು ಕಂಡುಕೊಳ್ಳಲು ಬಿಜೆಪಿ ಜಿಲ್ಲಾಧ್ಯಕ್ಷರು ಜನರನ್ನು ಪ್ರಚೋದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.  ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಗಮನಕ್ಕೆ ಬಾರದ ಹಿಂದೂಗಳು ಶಿರಾ ಉಪಚುನಾವಣೆಯಲ್ಲಿ ನೆನಪಾದರೇ ಎಂದು ಜಾತಲಾಣಿಗರು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಮುಖಂಡ ಗೌರಿಶಂಕರ್ ಎದುರು ಸೋತು ಮುಖಭಂಗ ಅನುಭವಿಸಿರುವ ಸುರೇಶ್ ಗೌಡ ನೆಮ್ಮದಿಯ ತಾಣ ಶಿರಾದಲ್ಲಿ ಗಲಭೆ ಸೃಷ್ಟಿಸಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಅವುಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ಅನುಷ್ಠಾನಗೊಳಿಸುವ ಕೆಲಸ ಮಾಡಲಿ. ಅದು ಬಿಟ್ಟು ಹುಳಿ ಹಿಂಡುವ ಕೆಲಸ ಬಿಟ್ಟರೆ ಒಳ್ಳೆಯದು ಎಂಬ ಮಾತುಗಳು ವ್ಯಕ್ತವಾಗಿದೆ.


ಇದನ್ನೂ ಓದಿ: ಶಿರಾ ಉಪಚುನಾವಣೆ: ಉದ್ಘಾಟನೆ ಹೆಸರಲ್ಲಿ ಬಿಜೆಪಿ ಪ್ರಚಾರ ಶುರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...