Homeಮುಖಪುಟಶಿರಾ ಉಪಚುನಾವಣೆ: ಉದ್ಘಾಟನೆ ಹೆಸರಲ್ಲಿ ಬಿಜೆಪಿ ಪ್ರಚಾರ ಶುರು

ಶಿರಾ ಉಪಚುನಾವಣೆ: ಉದ್ಘಾಟನೆ ಹೆಸರಲ್ಲಿ ಬಿಜೆಪಿ ಪ್ರಚಾರ ಶುರು

ಆಗಸ್ಟ್ 10ರಂದು ಸಚಿವರಾದ ಆರ್.ಅಶೋಕ್, ಆನಂದ್ ಸಿಂಗ್ ಮತ್ತು ಜೆ.ಸಿ.ಮಾಧುಸ್ವಾಮಿ ಶಿರಾಕ್ಕೆ ಭೇಟಿ ನೀಡಿ ಮಿನಿವಿಧಾನಸೌಧ ಮತ್ತು ಅರಣ್ಯ ಇಲಾಖೆಯ ವಸತಿಗೃಹಗಳ ಉದ್ಘಾಟನೆ ನೆರವೇರಿಸಿದ್ದಾರೆ.

- Advertisement -
- Advertisement -

ಶಿರಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಪ್ರಚಾರ ಕಾರ್ಯ ಆರಂಭಿಸಿದೆ. ಬಿಜೆಪಿ ಅಭ್ಯರ್ಥಿ ಹೆಸರು ಅಂತಿಮವಾಗಿ ಘೋಷಿಸಿಲ್ಲವಾದರೂ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಹುರಿದುಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ದೇವಸ್ಥಾನಗಳಿಗೆ ಹಣ ಕೊಡುವ ಹಾಗೂ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಮುಂದಿಟ್ಟು ಮತಯಾಚನೆಯಲ್ಲಿ ತೊಡಗಿರುವ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಜನರಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ. ಮದಲೂರು ಕೆರೆಗೆ ಯಾವುದೇ ಅಲೋಕೇಷನ್ ಇಲ್ಲ. ಆದರೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಹೇಮಾವತಿ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದಾರೆ. ಇದುವರೆಗೂ ಮೌನವಾಗಿದ್ದ ಬಿಜೆಪಿ ಮುಖಂಡರು ಉಪಚುನಾವಣೆ ಎದುರಾಗಿರುವಾಗಲೇ ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.

ದನಕರುಗಳು ನೀರಿಲ್ಲದೆ ಮೇವಿಲ್ಲದೆ ಚಕ್ಕಳೆ ಬಿಟ್ಟುಕೊಂಡಿವೆ ಮತ್ತು ಜನರಿಗೆ ಕುಡಿಯುವ ನೀರಿಲ್ಲ. ಪ್ಲೋರೈಡ್ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಇದೆ. ಮದಲೂರು ಕೆರೆಗೆ ನೀರು ಹರಿಸಿದರೆ ಈ ಭಾಗದಲ್ಲಿ ಏಳೆಂಟು ವರ್ಷ ಅಂತರ್ಜಲ ಹೆಚ್ಚಳವಾಗುತ್ತದೆ. ಪಶುಪಕ್ಷಿಗಳಿಗೂ ನೀರು ಲಭ್ಯವಾಗುತ್ತದೆ ಎಂದು ಸಿಎಂ. ಬಿ.ಎಸ್.ಯಡಿಯೂರಪ್ಪಅವರಿಗೆ ಭಾವನಾತ್ಮಕವಾಗಿ ಮನವಿ ಪತ್ರ ಸಲ್ಲಿಸಿದ್ದು ಇದು ಮತದಾರರ ಮೇಲೂ ಪರಿಣಾಮ ಬೀರಲಿದೆ. ಮತದಾರರನ್ನು ಭಾವನಾತ್ಮಕ ವಿಚಾರಗಳಿಂದ ಸೆಳೆಯಲು ಇದು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಾಸಕ ಬಿ.ಸತ್ಯನಾರಾಯಣ ಅವರು ಜೀವಂತವಾಗಿರುವವರೆಗೆ ಮೌನವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶ್ ಗೌಡ ಅವರು ಶಿರಾದ ಬಿ.ಕೆ.ಮಂಜುನಾಥ್ ಎಸ್.ಆರ್.ಗೌಡರನ್ನು ನಿಯೋಗದಲ್ಲಿ ತೆರಳಿ ನೀರಿನ ಅಲೋಕೇಷನ್ ಇಲ್ಲದ ಮದಲೂರು ಕೆರೆಗೆ ಹೇಮವಾತಿ ನೀರು ಹರಿಸುವ ವಿಫಲ ಯತ್ನಕ್ಕೆ ಕೈಹಾಕಿರುವುದು ರಾಜಕೀಯ ಗಿಮಿಕ್. ಸಧ್ಯಕ್ಕಂತೂ ನೀರು ಹರಿಸಲು ಸಾಧ್ಯವಿಲ್ಲ. ಬಿಜೆಪಿ ಮುಖಂಡರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಆಗಸ್ಟ್ 10ರಂದು ಸಚಿವರಾದ ಆರ್.ಅಶೋಕ್, ಆನಂದ್ ಸಿಂಗ್ ಮತ್ತು ಜೆ.ಸಿ.ಮಾಧುಸ್ವಾಮಿ ಶಿರಾಕ್ಕೆ ಭೇಟಿ ನೀಡಿ ಮಿನಿವಿಧಾನಸೌಧ ಮತ್ತು ಅರಣ್ಯ ಇಲಾಖೆಯ ವಸತಿಗೃಹಗಳ ಉದ್ಘಾಟನೆ ನೆರವೇರಿಸಿದರು. ನಂತರ ಕೆಲ ಹೊತ್ತು ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಸಮಾಲೋಚನೆ ಮಾಡಿದರು. ಈ ಮೂಲಕ ಚುನಾವಣೆ ಘೋಷಣೆಗೂ ಮೊದಲೇ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆಪದಲ್ಲಿ ಪ್ರಚಾರವೂ ನಡೆದಿದೆ.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪ ಮಾಡಿದ್ದು ಈ ಬಗ್ಗೆ ಬಿಜೆಪಿ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಬಿಜೆಪಿಯ ಆರ್. ಅಶೋಕ್  ಗಣಿ ಮಾಲಿಕರೂ ಆದ ಸಚಿವ ಆನಂದ ಸಿಂಗ್ ಬಂದು ಹೋಗಿರುವುದು ಕ್ಷೇತ್ರದ ಮತದಾರರಲ್ಲಿ ಕುತೂಹಲವನ್ನು ಹೆಚ್ಚಿಸಿದೆ..

ಚುನಾವಣೆ ಘೋಷಣೆಗೂ ಮುನ್ನವೇ ಶಿರಾ ಕ್ಷೇತ್ರದಲ್ಲಿ ರಾಜಕೀಯ ಕಾವು ತೀವ್ರ ಗತಿಯಲ್ಲಿ ಏರತೊಡಗಿದೆ. ಬಿಜೆಪಿ ಪ್ರಚಾರದಲ್ಲಿ ಮುಂದಿದ್ದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಆಡಳಿತಾರೂಢ ಪಕ್ಷದ ಪಟ್ಟುಗಳಿಗೆ ಪ್ರತಿ ತಂತ್ರಗಳನ್ನು ಹೆಣೆಯುವುದರಲ್ಲಿ ನಿರತವಾಗಿವೆ.


ಇದನ್ನೂ ಓದಿ: ಶಿರಾ ಉಪ ಚುನಾವಣೆ: ಶಿರಾ ಕ್ಷೇತ್ರದಿಂದ ಬಿ.ಸುರೇಶ್ ಗೌಡ ಕಣಕ್ಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...