Homeನೂರರ ನೋಟಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ

ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

- Advertisement -
- Advertisement -

ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ International Day for Universal Access to Information ದಿನವನ್ನಾಗಿ ಆಚರಿಸಲಾಯಿತು. ಆದರೆ ಮೋದಿ ಸರ್ಕಾರ ಸುದ್ದಿಯನ್ನು ಮುಚ್ಚಿಡುವ ಕಾಯಕದಲ್ಲಿ ತೊಡಗಿದೆ.
ಸೆಪ್ಟೆಂಬರ್ ಮೊದಲಲ್ಲಿ ವಿರೋಧ ಪಕ್ಷದ ಸದಸ್ಯರೊಬ್ಬರು ಪಾರ್ಲಿಮೆಂಟ್‌ನಲ್ಲಿ ಪ್ರಶ್ನಿಸಿದಾಗ ಗೃಹಸಚಿವಾಲಯದ ಮಿನಿಸ್ಟರ್ ಆಫ್ ಸ್ಟೇಟ್ ನಿತ್ಯಾನಂದ ರಾಯ್ ಅವರು ‘ವಲಸೆ ಕಾರ್ಮಿಕರ ದಂಡು ನಗರಗಳನ್ನು ಬಿಟ್ಟು ಹಿಂಡುಹಿಂಡಾಗಿ ತಮ್ಮ ಊರುಗಳಿಗೆ ಹೋದರೆಂಬ ಬೋರಂಟಿ ಬಿಡಲಾಗಿದೆ ಈ ಪತ್ರಿಕಾ ವರದಿಗಳು ಶುದ್ಧ ಸುಳ್ಳು’ ಎಂದು ಉತ್ತರಿಸಿದರು. ಸರ್ಕಾರದ ಪರಿಸ್ಥಿತಿಯ ಅರಿವಿನ ಕೊರತೆಯಿಂದಾಗಿ ಈ ಮಂತ್ರಿಗಳು ಈ ಉಡಾಫೆ ಉತ್ತರ ಕೊಟ್ಟರು. ಸರ್ಕಾರದ ಉದಾಸೀನ ಭಾವನೆಯಿಂದ ಹಾಗೂ ಮಾಹಿತಿಯ ಕೊರತೆಯಿಂದ, ಆಹಾರ ದೊರೆಯದೆ ಅನೇಕರು ಹಸಿವಿನಿಂದ ಪ್ರಾಣ ಬಿಟ್ಟರು. ಸರ್ಕಾರ ಆತುರಆತುರವಾಗಿ ಕೊರೊನಾ ಹೆಸರಿನಲ್ಲಿ ದಿಢೀರನೆ ಲಾಕ್‌ಡೌನ್ ಜಾರಿಗೆ ತಂದು ವಲಸೆ ಕಾರ್ಮಿಕರ ಮೇಲೆ ನಿರ್ಬಂಧಗಳನ್ನು ಹೇರಿತು. ಊಟವಿಲ್ಲದೆ, ಕೆಲಸವಿಲ್ಲದೆ ವಲಸೆ ಕಾರ್ಮಿಕರು ಇಲ್ಲಿ ಸಾಯುವುದಕ್ಕಿಂತ ತಮ್ಮ ಊರುಗಳಿಗೆ ಹೋಗಿ ಪ್ರಾಣ ಬಿಡುವುದು ಮೇಲು ಎಂದು ಯೋಚಿಸಿದರು. ಶ್ರಮಿಕ್ ರೈಲುಗಳಲ್ಲಿ ಹೊಟ್ಟೆಗಿಲ್ಲದೆ ಸತ್ತವರು, ವಾಹನಗಳ ಸೌಕರ್ಯವಿಲ್ಲದೆ ನಡೆದುಹೋದ ಲಕ್ಷಾಂತರ ವಲಸೆ ಕಾರ್ಮಿಕರು, ಅವರು ಅನುಭವಿಸಿದ ಕಷ್ಟಗಳು ಮತ್ತು ಹೊಟ್ಟೆಗಿಲ್ಲದೆ ದಾರಿಯಲ್ಲಿ ಸತ್ತವರ ಮಾಹಿತಿ ಸರ್ಕಾರದಲ್ಲಿ ಇಲ್ಲ ಎಂದ ಮೇಲೆ ಇದು ಬೇಜವಾಬ್ದಾರಿ ಸರ್ಕಾರವಲ್ಲದೆ ಬದ್ಧತೆಯುಳ್ಳ ಸರ್ಕಾರವೇ?

ಈ ಬೇಜವಾಬ್ದಾರಿ ಮಂತ್ರಿಗಳ ಉತ್ತರ ಮಾನವನ ಹಕ್ಕುಗಳ ಮೇಲಿನ ಮತ್ತು ಪ್ರಜಾಸತ್ತೆಯ ಮೇಲಿನ ದಾಳಿ ಇದ್ದಹಾಗೆ ಕಾಣುತ್ತದೆ.

ದೇವಿಕಾ ಎಂಬ ಕೇರಳದ ದಲಿತ ವಿದ್ಯಾರ್ಥಿನಿ ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದ ಕಾರಣದಿಂದ ಆನ್‌ಲೈನ್ ಕ್ಲಾಸ್‌ಗಳಿಗೆ ಹಾಜರಾಗಲು ಆಗಲಿಲ್ಲ. ಆ ಹುಡುಗಿ ಬುದ್ಧಿವಂತಳು ಮತ್ತು ಸ್ಕಾಲರ್‌ಷಿಪ್ ಪಡೆಯುತ್ತಿದ್ದವಳು. ಆದರೆ ಬಡತನದಿಂದ ಸ್ಮಾರ್ಟ್ ಫೋನ್ ಕೊಳ್ಳಲಾರದೆಹೋದಳು. ಇದರಿಂದ ಬೇಸರಗೊಂಡ ದೇವಕಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ತಂದೆ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಯಾಗಿದ್ದು ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮೋದಿಯವರಿಗೆ ಕಾಗದ ಬರೆದಿದ್ದರೆ ಈ ಹುಡುಗಿಗೆ ಸ್ಮಾರ್ಟ್ ಫೋನ್ ಕೊಡಿಸುತ್ತಾ ಇದ್ದರೋ ಏನೋ? ಈ ಸಮಸ್ಯೆ ದೇವಿಯದು ಮಾತ್ರವಲ್ಲ ಬಡತನದಲ್ಲಿ ತತ್ತರಿಸುತ್ತಿರುವ ಸಹಸ್ರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರದು. ಸರ್ಕಾರ ಆನ್‌ಲೈನ್ ಶಿಕ್ಷಣ ಕೊಡುವ ನಿರ್ಧಾರ ಕೈಗೊಳ್ಳುವ ಮೊದಲು ಈ ಬಡ ಜನರ ಕೈಯ್ಯಲ್ಲೆೆಲ್ಲಾ ಸ್ಮಾರ್ಟ್ ಫೋನ್ ಇದೆಯೇ ಎಂದು ಯೋಚಿಸಬೇಕಾಗಿತ್ತು. ಕಾರ್ಪೊರೇಟ್ ಸಂಸ್ಥೆಗಳನ್ನು ಸಂರಕ್ಷಿಸುವುದಕ್ಕೆ ಆದ್ಯತೆ ನೀಡುವ ಈ ಸರ್ಕಾರಕ್ಕೆ ಬಡವರ ಪ್ರಶ್ನೆ ಗೌಣ ಅಲ್ಲವೇ?

ಹಣಕಾಸಿನ ಸಂಗ್ರಹ ಮತ್ತು ವೆಚ್ಚದ ಬಗೆಗೆ ಸರ್ಕಾರ ಸಂಬಂಧಪಟ್ಟ ವಿವರಗಳನ್ನು ಕಾಲಕಾಲಕ್ಕೆ ಜನತೆಯ ಮುಂದಿಡಬೇಕು. ಸರ್ಕಾರ ಮನಸೋಇಚ್ಛೆ ಜನರ ಹಣವನ್ನು ಪೋಲು ಮಾಡುತ್ತಿದೆ. ಮೋದಿ ಅವರ ಹೊರರಾಷ್ಟ್ರೀಯ ಪ್ರಯಾಣ ವೆಚ್ಚಕ್ಕೆ ಕಡಿವಾಣವೇ ಇಲ್ಲ. ಕೋಟಿ ಕೋಟಿ ರೂಪಾಯಿಗಳನ್ನು ಅವರ ಪ್ರವಾಸಕ್ಕಾಗಿ, ಪ್ರವಾಸ ಭತ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ.

ಪಿಎಂ ಕೇರ್ಸ್ ನಿಧಿಯ ವಿಷಯದಲ್ಲಿ ಸರ್ಕಾರ ಬಾಯಿ ಬಿಡುತ್ತಿಲ್ಲ. ಎಷ್ಟು ಹಣ ಬಂತು, ಯಾರಿಂದ ಬಂತು ಎಂಬ ವಿವರವನ್ನು ಕೊಡುವುದಕ್ಕೆ ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಸರ್ಕಾರ ಪಡೆದ ನಿಧಿಯಲ್ಲ. ಮೋದಿಯವರು ಅಧ್ಯಕ್ಷತೆಯಲ್ಲಿ ಟ್ರಸ್ಟ್ ಒಂದು ಖಾಸಗಿಯಾಗಿ ಪಡೆದ ಹಣ. ಇದರ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿಲ್ಲ ಎನ್ನುತ್ತಿದೆ ಸರ್ಕಾರ. ಪ್ರಧಾನಿ ಸ್ಥಾನದಲ್ಲಿದ್ದುಕೊಂಡು ಈ ಅಪಾರ ಧನ ಪಡೆದಿರುವಾಗ ಈ ಬಗ್ಗೆ ಪ್ರಶ್ನಿಸುವ ಹಕ್ಕು ಮಹಾಜನರಿಗಿದೆ ಎಂಬುದನ್ನು ಮೋದಿ ತಿಳಿಯಬೇಕು.

ಸಾರ್ವಜನಿಕ ಹಣವನ್ನು ಕೋವಿಡ್ ಬಂದ ಮೇಲೆ ಪ್ರಧಾನಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಮನಸೋಇಚ್ಛೆ ಖರ್ಚು ಮಾಡಲು ಹೊರಟಿದ್ದಾರೆ. ಸರ್ಕಾರಗಳು ಬೇರೆ ಬೇರೆ ಬಾಬತ್ತುಗಳಿಗಾಗಿ ಎತ್ತಿಟ್ಟಿರುವ ಹಣವನ್ನು ಕೊರೊನಾ ನೆಪ ಹೇಳಿ ದುರ್ಬಳಕೆ ಮಾಡಿವೆ. ‘ಹುಚ್ಚು ಮುಂಡೆ ಮದುವೇಲಿ ಉಂಡವನೇ ಜಾಣ’ ಎಂಬ ಗಾದೆಯಂತೆ ಕೊರೊನಾ ಸಮಯದಲ್ಲಿ ಅಧಿಕಾರಿಗಳು, ಮಂತ್ರಿಗಳು ಎಲ್ಲ ಬಾಬತ್ತಿನ ಹಣವನ್ನು ದುಂದುವೆಚ್ಚ ಮಾಡಿ ಜೋಬು ತುಂಬಿಸಿಕೊಂಡಿದ್ದಾರೆ. ಇದರ ಬಗೆಗೆ ನಿಷ್ಪಕ್ಷಪಾತವಾದ ಒಂದು ತನಿಖೆಯಾಗಲಿ ಎಂದರೆ ಯಡಿಯೂರಪ್ಪನವರು ನಾವು ಸತ್ಯ ಹರಿಶ್ಚಂದ್ರರು, ಒಂದು ಕಾಸೂ ದುರುಪಯೋಗವಾಗಿಲ್ಲ ನಾವೇಕೆ ತನಿಖೆಗೆ ಒಳಪಡಿಸಬೇಕು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವ ನಡೆಸುವವರು ಸೀತಾ ದೇವಿಯಂತೆ ತನ್ನ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಅಗ್ನಿಪ್ರವೇಶಕ್ಕೆ ತಯಾರಿರಬೇಕು. ಆದರೆ ಈಗ ಅಧಿಕಾರ ನಡೆಸುವವರು ಗದ್ದಿಗೆಗೆ ಅಂಟಿಕೊಳ್ಳುವವರೇ ಹೊರತು ಪ್ರಜಾಪ್ರಭುತ್ವ ಎತ್ತಿ ಹಿಡಿಯುವವರಲ್ಲ. ಹಿಂದೆ ರಾಜ ಪ್ರಭುತ್ವ ಇದ್ದಾಗ The King does no wrong – ರಾಜ ತಪ್ಪು ಮಾಡುವುದೇ ಇಲ್ಲ ಎಂಬ ಮಾತು ಪ್ರತೀತಿಯಲ್ಲಿತ್ತು. ಈಗ ಹೊಸರಾಜರ ಆಳ್ವಿಕೆಯಲ್ಲಿ ನಾವಿದ್ದೇವೆ ಇವರೂ ತಪ್ಪು ಮಾಡುವವರೇ ಅಲ್ಲ. ತಪ್ಪು ಮಾಡಿದರೂ ಅದು ತಪ್ಪಲ್ಲ

ಜಿಲ್ಲಾ ಅದಿರು ಫೌಂಡೇಷನ್ ನಿಧಿಯನ್ನು ಕೊರೊನಾ ನೆಪ ಹೇಳಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಖನಿಜ ತೆಗೆಯುವುದರಿಂದ ಅಲ್ಲಿಯ ಜನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವರಿಗೆ ಶುದ್ಧ ನೀರು, ಶುದ್ಧ ಗಾಳಿ ಒದಗಿಸುವುದಕ್ಕೆ, ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗುವುದರಿಂದ ಅವುಗಳ ದುರಸ್ತಿಗಾಗಿ ಈ ನಿಧಿಯನ್ನು ಮೀಸಲಿರಿಸಲಾಗಿತ್ತು. ಈ ಬಗೆಯ ಹಣಕಾಸಿನ ದುರ್ಬಳಕೆ ಮತ್ತು ದುರಾಡಳಿತದ ಬಗೆಗೆ ಜನತೆಗೆ ಸಮಜಾಯಿಷಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ?

ಪಾರ್ಲಿಮೆಂಟ್‌ನಲ್ಲಿ, ಅಸೆಂಬ್ಲಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೆ ಆರ್ಡಿನೆನ್ಸಗಳ ಮುಖಾಂತರ ರೈತರ, ಕಾರ್ಮಿಕರ, ಬಡಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಆರ್ಡಿನೆನ್ಸ್ಗಳನ್ನೇ ಶಾಸನವನ್ನಾಗಿ ಮಾಡುವ ಸಂದರ್ಭದಲ್ಲಾದರೂ ಆ ಬಿಲ್‌ಗಳ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗಿತ್ತು.

ರೈತರು ಮತ್ತು ಕಾರ್ಮಿಕರ ಹತ್ತಿರ ತಾವು ತರಲು ತೀರ್ಮಾನಿಸಿರುವ ಸುಗ್ರೀವಾಜ್ಞೆಗಳ ಬಗೆಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಸರ್ಕಾರಗಳು ಸರ್ವಾಧಿಕಾರಿ ನೀತಿಯನ್ನು ಅನುಸರಿಸಿವೆ. ರಚನಾತ್ಮಕ ಟೀಕೆಗಳನ್ನು ಮಾಡುವುದು ಪ್ರಜೆಯ ಹಕ್ಕು. ಈ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಸರ್ಕಾರಗಳ ಕರ್ತವ್ಯ. ಈ ಮೂಲಭೂತ ಅಧಿಕಾರವನ್ನೇ ಕಡೆಗಣಿಸಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಸ್ವೇಚ್ಛೆಯಿಂದ ನಡೆದುಕೊಂಡಿರುವುದನ್ನು ಪ್ರಜೆಯಾದವನು ಲಘುವಾಗಿ ಸ್ವೀಕರಿಸಬಾರದು. ರೈತರ ಮತ್ತು ಕಾರ್ಮಿಕರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವನ್ನು ಪ್ರಜೆಗಳೂ ಸೇರಿದಂತೆ ರೈತರು, ಕಾರ್ಮಿಕರು ವಿರೋಧಿಸಲು ಸಂಘಟಿತ ಪ್ರಯತ್ನವನ್ನು ಮಾಡಿರುವುದು ಸ್ತುತ್ಯ ವಿಚಾರ.

ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಚೈನಾ ಮತ್ತು ಪಾಕಿಸ್ತಾನಗಳು ಆಕ್ರಮಣಕಾರಿ ನಿಲುವನ್ನು ತಾಳಿರುವುದು ಒಂದು ಗಂಭೀರ ವಿಷಯ. ಭಾರತದ ಭೂಭಾಗವನ್ನು ಆಕ್ರಮಿಸಲು ಚೈನಾ ಹೊರಟಿದೆ ಎಂದು ರಕ್ಷಣಾ ವಿಭಾಗ ಹೇಳುವುದು ಮೋದಿಯವರು ಅಂಥದೇನೂ ನಡೆದಿಲ್ಲವೆಂದು ಹೇಳುವುದು ಆ ಮೂಲಕ ಜನರನ್ನು ನಿಜಸ್ಥಿತಿ ಏನೆಂದು ತಿಳಿಯಲು ಅವಕಾಶ ನೀಡದೆ ಕತ್ತಲಲ್ಲಿ ಇಡುವುದು ಯಾವ ಘನಂದಾರಿ ಕೆಲಸ? ರಾಷ್ಟ್ರದ ಭದ್ರತೆಯ ಬಗೆಗೆ ಇಂತಹ ದ್ವಂದ್ವಗಳನ್ನು ಸರ್ಕಾರ ತಳೆಯುವುದು ಅಪಾಯಕಾರಿ ನಿಲುವು. ಪ್ರಜೆಗಳು ಈ ಬೇಜವಾಬ್ದಾರಿ ನಿಲುವನ್ನು ತಾಳಿರುವ ಮೋದಿ ಸರ್ಕಾರದ ಬಗೆಗೆ ಗಂಭೀರವಾಗಿ ವಿಚಾರ ಮಾಡುವ ಕಾಲ ಸನ್ನಿಹಿತವಾಗಿದೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...