ರಾಮ್ ವಿಲಾಸ್ ಪಾಸ್ವಾನ್‌ರವರ ಮರಣದ ನಂತರ ಮೋದಿ ನೇತೃತ್ವದ ಕ್ಯಾಬಿನೆಟ್‌ನಲ್ಲಿ ಸದ್ಯ ಒಬ್ಬರೇ ಒಬ್ಬ ಎನ್‌ಡಿಎ ಮಿತ್ರಪಕ್ಷದ ಸಚಿವರು ಉಳಿದಿದ್ದಾರೆ. ಅವರೇ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅಠಾವಳೆಯವರಾಗಿದ್ದು, ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವರಾಗಿದ್ದಾರೆ.
ಪಾಸ್ವಾನ್‌ರವರ ಮರಣದ ಕಾರಣ ಹೊರತುಪಡಿಸಿದರೆ, ಶಿವಸೇನೆಯ ಅರವಿಂದ್ ಸಾವಂತ್ ಮತ್ತು ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್ ಕೌರ್ ಬಾದಲ್ ಮೋದಿ ಸಂಪುಟ ತೊರೆದಿದ್ದಾರೆ. ಶಿವಸೇನೆಯು ಕಳೆದ ವರ್ಷ ಎನ್‌ಡಿಎದೊಂದಿಗಿನ ಸಂಬಂಧ ಕಳೆದುಕೊಂಡರೆ, ಇತ್ತೀಚೆಗೆ ವಿವಾದಾತ್ಮಕ ಕೃಷಿ ಮಸೂದೆಗಳ ಹಿನ್ನೆಲೆಯಲ್ಲಿ ಅಕಾಲಿ ದಳ ಹೊರನಡೆದಿದೆ.
ಪ್ರಧಾನ ಮಂತ್ರಿ ಮೋದಿಯವರೊಂದಿಗೆ ಒಟ್ಟು 57 ಮಂತ್ರಿಗಳು – 24 ಕ್ಯಾಬಿನೆಟ್ ಮಂತ್ರಿಗಳು, ಒಂಬತ್ತು ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿಯೊಂದಿಗೆ) ಮತ್ತು 24 ರಾಜ್ಯ ಸಚಿವರು – ಕೇಂದ್ರ ಸಚಿವ ಸಂಪುಟ ಸದಸ್ಯರಾಗಿ 2019 ರ ಮೇ 30 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಇಬ್ಬರು ಕ್ಯಾಬಿನೆಟ್ ಸಚಿವರು ಎನ್‌ಡಿಎ ತೊರೆದರೆ, ಸುರೇಶ್ ಅಂಗಡಿ ಮತ್ತು ರಾಮ್ ವಿಲಾಸ್ ಪಾಸ್ವಾನ್‌ರವರ ಮರಣ ಹೊಂದಿದ್ದಾರೆ.
ಸಂವಿಧಾನದ ಪ್ರಕಾರ, ಲೋಕಸಭೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಪ್ರಧಾನಿ ಸೇರಿದಂತೆ ಒಟ್ಟು ಕೇಂದ್ರ ಸಚಿವರ ಸಂಖ್ಯೆ ಶೇಕಡ 15 ಅನ್ನು ಮೀರಬಾರದು. 543 ಸದಸ್ಯರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 80 ಮಂತ್ರಿಗಳನ್ನು ಹೊಂದಬಹುದು.
ಇದನ್ನೂ ಓದಿ: ನಾನು ಸರ್ವಾಧಿಕಾರಿಯಾಗಲು ಇಚ್ಚಿಸುತ್ತೇನೆ: ವಿಜಯ್ ದೇವರಕೊಂಡ ವಿವಾದಾತ್ಮಕ ಹೇಳಿಕೆ


