ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ಕೊರೊನಾ ಹರಡಲು ಕಾರಣರಾಗಿದ್ದಾರೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 12 ವಿದೇಶಿ ತಬ್ಲೀಘಿ ಜಮಾಅತ್ ಸದಸ್ಯರನ್ನು ಬಿಡುಗಡೆ ಮಾಡಬೇಕು ಎಂದು ಬಾಂದ್ರಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ.
12 ಇಂಡೋನೇಷ್ಯಾ ಪ್ರಜೆಗಳ ವಿರುದ್ದ ಮುಂಬೈ ಪೊಲೀಸರು ಹೊರಿಸಿರುವ ಆರೋಪಗಳಿಗೆ ಯಾವುದೇ ದಾಖಲೆಯಿಲ್ಲ ಎಂದು ನ್ಯಾಯಾಧೀಶ ಜಯದೇವ್ ವೈ ಗುಲೆ ಕಂಡುಕೊಂಡರು. ಆದ್ದರಿಂದ ತಬ್ಲಿಘಿ ಜಮಾಅತ್ ಸದಸ್ಯರನ್ನು ಬಿಡುಗಡೆ ಮಾಡಿ, ಅವರ ಪಾಸ್‌ಪೋರ್ಟ್‌ಗಳನ್ನು ಹಿಂದಿರುಗಿಸುವಂತೆ ನಿರ್ದೇಶಿಸಿದ್ದಾರೆ ಹಾಗೂ ಅವರ ವಿರುದ್ಧದ ಜಾಮೀನು ಬಾಂಡ್‌ಗಳನ್ನು ರದ್ದುಪಡಿಸಿದ್ದಾರೆ.
No record to show that accused acted negligently or to spread COVID-19: Mumbai Court discharges 12 Tablighi Jamaat members [Read Order]#TablighiJamaat https://t.co/aSGduc6n2R pic.twitter.com/hxv58ja6vq
— Bar & Bench (@barandbench) October 12, 2020
ಇದನ್ನೂ ಓದಿ: ’ನೀವು ಭಾರತದಲ್ಲಿ ವಾಸಿಸಲು ಯೋಗ್ಯರಲ್ಲ’ ಎಂದು ತಬ್ಲೀಘಿ ಸದಸ್ಯರಿಗೆ ಥಳಿಸಿದ ಗುಂಪು
ಇತ್ತೀಚೆಗೆ 35 ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧದ ಎಫ್‍ಐಆರ್ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಹೊರಡಿಸಿದ್ದ ಆದೇಶವನ್ನು ಆಧಾರವಾಗಿಟ್ಟುಗೊಡು ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಆರೋಪಿಗಳನ್ನು ಬಂಧಿಸಿದಾಗ ಮಾನ್ಯವಾಗುವ ವೀಸಾಗಳನ್ನು ಹೊಂದಿದ್ದರು ಮತ್ತು ವೀಸಾ ಷರತ್ತುಗಳಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅವರ ಮೇಲೆ ನಕಲಿ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳೊಂದಿಗೆ ಭಾರತಕ್ಕೆ ಬಂದಿದ್ದಾರೆ ಎಂಬ ಆರೋಪ ಇತ್ತು.
ಈ ಹಿಂದೆ ಆಗಸ್ಟ್ 22 ರಂದು ಹಲವು ವಿದೇಶಿ ತಬ್ಲೀಘಿಗಳ ಎಫ್‌ಐಆರ್‌ಗಳನ್ನು ರದ್ದು ಪಡಿಸಿದ್ದ ಬಾಂಬೆ ಹೈಕೋರ್ಟ್ ತಬ್ಲೀಘಿ ವಿಚಾರದಲ್ಲಿ ಅಪಪ್ರಚಾರ ಮಾಡಿದ ಮಾಧ್ಯಮಗಳನ್ನು ತೀವ್ರ ತರಾಟೆಗೆ ಪಡೆದಿತ್ತು.
ಇದನ್ನೂ ಓದಿ: ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್


