Homeಕರೋನಾ ತಲ್ಲಣಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್

ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್

29 ವಿದೇಶಿ ತಬ್ಲೀಘಿಗಳ ಎಫ್‌ಐಆರ್‌ಗಳನ್ನು ರದ್ದು ಪಡಿಸಿದ ನ್ಯಾಯಾಲಯ ತಬ್ಲೀಘಿ ವಿಚಾರದಲ್ಲಿ ಅಪಪ್ರಚಾರ ಮಾಡಿದ ಮಾಧ್ಯಮಗಳನ್ನು ತೀವ್ರ ತರಾಟೆಗೆ ಪಡೆಯಿತು.

- Advertisement -
- Advertisement -

ಮಾರ್ಚ್‌ನಲ್ಲಿ ನಿಜಾಮುದ್ದೀನ್‌ ಬಳಿ ನಡೆದಿದ್ದ ತಬ್ಲೀಘೀ ಜಮಾಅತ್ ಸಭೆಯಲ್ಲಿ ಪಾಲ್ಗೊಂಡಿದ್ದ 29 ವಿದೇಶಿ ಪ್ರಜೆಗಳ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದು ಪಡಿಸಿದ ನ್ಯಾಯಾಲಯ ಪ್ರಕರಣದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಎಂದು ಕರೆದಿದೆ.

ತಬ್ಲೀಘಿ ಜಮಾಅತ್ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಪ್ರಜೆಗಳ ಬಗ್ಗೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡಿದೆ. ಭಾರತದಲ್ಲಿ ಕೊರೋನ ಹರಡಲು ಇವರೇ ಕಾರಣ ಎನ್ನುವ ಚಿತ್ರಣವನ್ನು ಮಾಧ್ಯಮಗಳು ಪ್ರಸಾರ ಮಾಡಿದೆ ಎಂದು ಮಾಧ್ಯಮಗಳನ್ನು ತೀವ್ರವಾಗಿ ತರಾಟೆಗೆ ಪಡೆಯಿತು.

ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ 

ದೆಹಲಿಯ ನಿಜಾಮುದ್ದೀನ್‌ನಲ್ಲಿನ ಸಭೆಗೆ ಹಾಜರಾಗುವ ಮೂಲಕ ತಮ್ಮ ಪ್ರವಾಸಿ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಭಾರತೀಯ ದಂಡ ಸಂಹಿತೆ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ವಿದೇಶಿ ಪ್ರಜೆಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?

ಸರ್ಕಾರವನ್ನೂ ಟೀಕಿಸಿದ ನ್ಯಾಯಾಲಯ “ಸಾಂಕ್ರಾಮಿಕ ಬಿಕ್ಕಟ್ಟು ಉಂಟಾದಾಗ ರಾಜಕೀಯ ಸರ್ಕಾರವು ಬಲಿಪಶುವನ್ನು ಹುಡುಕಲು ಪ್ರಯತ್ನಿಸುತ್ತಿತ್ತು” ಎಂದು ಹೇಳಿದೆ.

ತಬ್ಲೀಗಿ ಜಮಾಅತ್‌ನ ಚಟುವಟಿಕೆಗಳು 50 ವರ್ಷಗಳಿಂದಲೂ ನಡೆಯುತ್ತಿದೆ. ನಿಝಾಮುದ್ದೀನ್ ಮರ್ಕಝ್ ಕಾರ್ಯಕ್ರಮದಲ್ಲಿ ಈ ವಿದೇಶಿಗರು ಭಾಗವಹಿಸುವ ಬಗ್ಗೆ ಮತ್ತು ವೀಸಾಗಳನ್ನು ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಅರಿವಿತ್ತು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ’ಥೂ… ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ’; ಸಚಿವ ಸುಧಾಕರ್‌ಗೆ ಮಹಿಳಾ ವೈದ್ಯೆ ಛೀಮಾರಿ

ಏಪ್ರಿಲ್‌ನಲ್ಲಿ ದೆಹಲಿಯ ನಿಜಾಮುದ್ದೀನ್‌ನಲ್ಲಿನ ಧಾರ್ಮಿಕ ಸಭೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 9,000 ಜನರು ಭಾಗವಹಿಸಿದ್ದರು.

ಈ ಘಟನೆಯು ನಂತರ ಮಾಧ್ಯಮಗಳು ಮತ್ತು ಬಿಜೆಪಿ ಸೇರಿದಂತೆ ಹಲಲವಾರು ಬಲಪಂಥೀಯ ಸಂಘಟನೆಗಳು ವಿವಾದವನ್ನು ಸೃಷ್ಟಿಸಿ ಭಾರತದಲ್ಲಿ ಕೊರೊನಾ ಪ್ರಕರಣಗಳು ಹರಡಲು ಇವರೆ ಕಾರಣ ಎಂದು ತಪ್ಪಾಗಿ ನಿರೂಪಿಸಿದ್ದರು.


ಓದಿ: ಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...