HomeಮುಖಪುಟBWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ...

BWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

- Advertisement -
- Advertisement -

ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23) ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

‘BWSSB ಗುತ್ತಿಗೆ ಕಾರ್ಮಿಕರ ಸಂಘ (ರಿ)’ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, “ಜಲಮಂಡಳಿಗೆ ಗುತ್ತಿಗೆ ಕಾರ್ಮಿಕರ ದುಡಿಮೆ ಬೇಕು, ಆದರೆ ಗುತ್ತಿಗೆ ಕಾರ್ಮಿಕರ ಬದುಕು ಬೇಡವೇ?” ಎಂದು ಜಲಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ, ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿ, ತಿಪ್ಪಗೊಂಡನಹಳ್ಳಿ, ಎಸ್‌ಟಿಪಿ, ಡಬ್ಲ್ಯೂಟಿಪಿ, ಸಬ್‌ಲೈನ್, ಪಂಪ್‌ಹೌಸ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ಯಾನಿಟರಿ ವರ್ಕರ್ಸ್, ಡ್ರೈವರ್ಸ್, ಡೇಟಾ ಎಂಟ್ರಿ ಆಪರೇಟರ್ಸ್, ವಾಲ್ವ್‌ಮ್ಯಾನ್, ಹೆಲ್ಪರ್ಸ್, ಎಟಿಎಂ ಆಪರೇಟರ್ಸ್ ಹಾಗೂ ಸೆಕ್ಯುರಿಟಿ ಸಿಬ್ಬಂದಿಯಾಗಿ ಸುಮಾರು 4,100ಕ್ಕೂ ಹೆಚ್ಚು ಕಾರ್ಮಿಕರು ಕಳೆದ 25 ವರ್ಷಗಳಿಂದಲೂ ಹೊರಗುತ್ತಿಗೆ ಆಧಾರದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ದಶಕಗಳಿಂದ ಶಾಶ್ವತ ಸ್ವರೂಪದ ಕೆಲಸ ಮಾಡುತ್ತಿದ್ದರೂ, ಅವರನ್ನು ಕಾಯಂಗೊಳಿಸದೆ ಗುತ್ತಿಗೆ ವ್ಯವಸ್ಥೆಯಲ್ಲೇ ಉಳಿಸಿಕೊಂಡು ಉದ್ಯೋಗ ಅಭದ್ರತೆ, ವೇತನ ಅನ್ಯಾಯ ಹಾಗೂ ಸುರಕ್ಷತಾ ಕೊರತೆಯಿಂದ ಶೋಷಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಇತ್ತೀಚೆಗೆ ಆರ್‌ಟಿ ನಗರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 52 ವರ್ಷದ ವಾಲ್ವ್‌ಮ್ಯಾನ್ ಸುಧೀರ್ ಅವರು ಕೆಲಸದ ವೇಳೆ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಹಾಗೆಯೇ ಬೆಳ್ಳಂದೂರಿನ ಎಸ್‌ಟಿಪಿ (STP) ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ಸರಣಿ ಸಾವುಗಳು ಜಲಮಂಡಳಿಯಲ್ಲಿ ಕಾರ್ಮಿಕರ ಸುರಕ್ಷತೆ ಎಷ್ಟರಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬುದನ್ನು ಎತ್ತಿಹಿಡಿದಿವೆ. “ಕೆಲಸದ ವೇಳೆ ಕಾರ್ಮಿಕನ ಜೀವಕ್ಕೆ ರಕ್ಷಣೆ ನೀಡುವ ಜವಾಬ್ದಾರಿ ಯಾರದ್ದು? ಅಪಘಾತದ ನಂತರ ಕೇವಲ ಪರಿಹಾರ ನೀಡುವುದು ಸಾಲದು, ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕು” ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರ ಮುಂದೆ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ಹೋರಾಟ ಅನಿವಾರ್ಯವಾಗಿದೆ. ಕಾರ್ಮಿಕರ ಶ್ರಮವನ್ನು ಬಳಸಿಕೊಂಡು ಬದುಕಿನ ಹಕ್ಕನ್ನು ಕಸಿಯುವ ನೀತಿ ತಕ್ಷಣ ಕೊನೆಗೊಳ್ಳಬೇಕು; ಸುರಕ್ಷಿತ ಕೆಲಸ, ಸಾಮಾಜಿಕ ಭದ್ರತೆ ಹಾಗೂ ನ್ಯಾಯಯುತ ವೇತನ ಖಾತರಿಯಾಗದಿದ್ದರೆ ಹೋರಾಟ ಮತ್ತಷ್ಟು ಉಗ್ರರೂಪ ಪಡೆಯಲಿದೆ ಎಂದು ಸಂಘಟನೆಯ ನಾಯಕರು ಎಚ್ಚರಿಸಿದ್ದಾರೆ. ಹೋರಾಟದ ನೇತೃತ್ವವನ್ನು ಕೆವಿ ಭಟ್, ನೂರ್ ಶ್ರೀಧರ್, ರವಿ ಮೋಹನ್, ಸುಷ್ಮಾ ವರ್ಮ, ವರದರಾಜೇಂದ್ರ ವಹಿಸಿದ್ದರು.

ಪ್ರತಿಭಟನಾ ನಿರತ BWSSB ಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳು:

  1. ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ತಕ್ಷಣ ರದ್ದುಪಡಿಸಿ, ಪೌರಕಾರ್ಮಿಕರ ಮಾದರಿಯಲ್ಲಿ ‘ನೇರ ವೇತನ (DPS)’ ಪದ್ಧತಿಯನ್ನು ಜಾರಿಗೆ ತರಬೇಕು.
  2. ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು.
  3. ಮೂಲಭೂತ ಹಕ್ಕಿನಂತಿರುವ ಬೋನಸ್, ಡಿಎ (DA) ಹಾಗೂ ಅರಿಯರ್ಸ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
  4. “ಜಲಮಂಡಳಿ ಅನ್ನಪೂರ್ಣ ಯೋಜನೆ” ಅಡಿಯಲ್ಲಿ ಹೊರಗುತ್ತಿಗೆ ಹಾಗೂ ಖಾಯಂ ಸಿಬ್ಬಂದಿಗೆ ಪ್ರೀ-ಪೇಯ್ಡ್ ಕಾರ್ಡ್ ವಿತರಿಸಬೇಕು.
  5. ಪ್ರತಿ ತಿಂಗಳ 1 ರಿಂದ 7 ನೇ ತಾರೀಖಿನ ಒಳಗಾಗಿ ಕಾರ್ಮಿಕರ ಖಾತೆಗೆ ವೇತನ ಜಮೆ ಮಾಡಬೇಕು.
  6. ಮಹಿಳಾ ಕಾರ್ಮಿಕರಿಗೆ 6 ತಿಂಗಳ ಸಂಬಳ ಸಹಿತ ರಜೆ ಕಡ್ಡಾಯಗೊಳಿಸಿ, ರಜೆಯ ನಂತರ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು.
  7. ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿ ಮೇಲಿನ ಮಾನಸಿಕ ಕಿರುಕುಳ ಸಂಪೂರ್ಣವಾಗಿ ನಿಲ್ಲಬೇಕು.
  8. ರಜೆ ದಿನಗಳು, ಕೆಲಸದ ಅವಧಿ ಹಾಗೂ ಹೆಚ್ಚುವರಿ ಕೆಲಸದ (OT) ನಿಯಮಗಳನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು.
  9. ಗ್ರಾಮೀಣ ಭಾಗದ ನೌಕರರಿಗೆ ಮೂರು ತಿಂಗಳಿಗೊಮ್ಮೆ ನೀಡುವ ‘ರಿಸ್ಕ್ ಅಲೋಯನ್ಸ್’ ಅನ್ನು ಪ್ರತಿ ತಿಂಗಳ ವೇತನದೊಂದಿಗೆ ಸೇರಿಸಿ ನೀಡಬೇಕು.
  10. ಎಲ್ಲಾ ಕಾರ್ಮಿಕರಿಗೆ ಇಎಸ್‌ಐ (ESI) ಕಾರ್ಡ್ ನೀಡಿ, ದಾಖಲಾತಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಬೇಕು. ಪಿಎಫ್ (PF) ಸೇರಿದಂತೆ ಎಲ್ಲಾ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು.
  11. ಕೆಲಸದ ವೇಳೆ ಸಂಭವಿಸುವ ಸಾವಿಗೆ ಜವಾಬ್ದಾರಿ ನಿಗದಿಪಡಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಕೆಲಸದ ಸ್ಥಳಗಳಲ್ಲಿ ಕಡ್ಡಾಯ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು.
  12. ಪ್ರತಿ 6 ತಿಂಗಳಿಗೊಮ್ಮೆ ಕುಂದುಕೊರತೆಗಳ ಪರಿಹಾರಕ್ಕಾಗಿ ಜಲಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ಜಂಟಿ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು.
  13. ಕೆಲಸದ ವೇಳೆ ಮೃತಪಟ್ಟ, ಅಪಘಾತಕ್ಕೊಳಗಾದ ಅಥವಾ ಹೃದಯಾಘಾತಕ್ಕೆ ಒಳಗಾದವರ ಕುಟುಂಬಸ್ಥರಿಗೆ ಹಾಗೂ ಏಕಾಏಕಿ ಕೆಲಸದಿಂದ ತೆಗೆದುಹಾಕಲಾದ ಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಪುನಃ ಕೆಲಸ ನೀಡಬೇಕು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಉಪಾಸನಾ ಚೌಧರಿ ಮನೆ ಮೇಲೆ ಕಲ್ಲುತೂರಾಟ, ಮಾಜಿ ಶಾಸಕ ಹುಮಾಯೂನ್ ಕಬೀರ್ ಮೇಲೂ ಹಲ್ಲೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮುಕುಂದಪುರದಲ್ಲಿ ಮಂಗಳವಾರ (ಸೆ. 22) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಹಾಗೂ ವಕ್ತಾರೆ...

SIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision – SIR / ವಿಶೇಷ...

‘ವಂದೇ ಮಾತರಂ’ ಹಾಡಲು ಬಾರದ ಬಿಜೆಪಿಗರಿಗೆ ಕೋರ್ಟ್ ಆದೇಶ ನೆಮ್ಮದಿ ತಂದಿದೆ: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ

'ವಂದೇ ಮಾತರಂ' ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದ್ದಾರೆ. ಧಾರ್ಮಿಕ...

ರಾಯಚೂರು ದಲಿತ ದೌರ್ಜನ್ಯ: ಪ್ರಕರಣಗಳನ್ನು CIDಗೆ ಒಪ್ಪಿಸುವಂತೆ ಆಗ್ರಹಿಸಿ ಗೃಹ ಸಚಿವರನ್ನು ಭೇಟಿಯಾದ ನಿಯೋಗ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ದಲಿತ ಹಕ್ಕುಗಳ ಹೋರಾಟಗಾರರ ಹಾಗೂ ಪ್ರಮುಖ ಮುಖಂಡರ ನಿಯೋಗವು ಗೃಹ...

ಶಾರ್ಜೀಲ್ ಇಮಾಮ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಅವರ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇರಲಿದೆ...

ಎಬಿವಿಪಿ ಒತ್ತಡಕ್ಕೆ ಮುಸ್ಲಿಂ ಪ್ರಾಧ್ಯಾಪಕಿ ರಾಜೀನಾಮೆ; ಕಾಲೇಜು ಆವರಣ ‘ಶುದ್ಧೀಕರಣ’ ಮಾಡಿದ ಬಲಪಂಥೀಯ ಗುಂಪು

ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜಿನ ಮುಸ್ಲಿಂ ಪ್ರಾಧ್ಯಾಪಕಿ ಮೊಹಮ್ಮದಿ ತರನ್ನುಮ್ ಅವರನ್ನು ಹಾಜರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇದಾದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು...

SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಚಾಲನೆ: ಸಿಪಿಐ(ಎಂ) ಬೆಂಬಲ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 'SIR ವಿರೋಧಿ ಕರ್ನಾಟಕ', ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ...

ಪಶ್ಚಿಮ ಬಂಗಾಳ: ಸರ್ಕಾರದ ಜೊತೆ ಇರಬೇಕಾದರೆ ಎಲೆಕ್ಷನ್ ‘ಟೆಸ್ಟ್’ನಲ್ಲಿ ಗೆಲ್ಲಿ, ಮುಸ್ಲಿಮರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ....

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ...

ಜಮುಯಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣ: ಎನ್‌ಕೌಂಟರ್ ಬಳಿಕ ಪ್ರಮುಖ ಆರೋಪಿ ನಂದನ್ ಯಾದವ್ ಬಂಧನ; 7 ಮಂದಿಯಲ್ಲಿ 5 ಮಂದಿ ವಶಕ್ಕೆ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್‌ ತರಗತಿಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ತಡೆದು ಹಲ್ಲೆ ಮಾಡಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ....