HomeಮುಖಪುಟSIR ಪೂರ್ವದ ಮತದಾರರ ಪಟ್ಟಿ ಬಳಕೆ : ರಾಜಸ್ಥಾನ ಪಂಚಾಯತ್ ಸಮರದಲ್ಲಿ ಕಾಂಗ್ರೆಸ್​ಗೆ ಭರ್ಜರಿ ಜಯ;...

SIR ಪೂರ್ವದ ಮತದಾರರ ಪಟ್ಟಿ ಬಳಕೆ : ರಾಜಸ್ಥಾನ ಪಂಚಾಯತ್ ಸಮರದಲ್ಲಿ ಕಾಂಗ್ರೆಸ್​ಗೆ ಭರ್ಜರಿ ಜಯ; ಬಿಜೆಪಿಗೆ ಹಿನ್ನಡೆ

- Advertisement -
- Advertisement -

ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್) ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದೆ. ಈ ಫಲಿತಾಂಶವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯನ್ನುಂಟುಮಾಡಿದೆ.

ರಾಜ್ಯ ಚುನಾವಣಾ ಆಯೋಗದ (ಎಸ್‌ಇಸಿ) ಅಂಕಿಅಂಶಗಳ ಪ್ರಕಾರ, ಮತ ಎಣಿಕೆ ನಡೆದ 37 ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ.

ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಕಾಂಗ್ರೆಸ್ 3,701ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 2,181 ಸ್ಥಾನಗಳಿಗೆ ಸೀಮಿತವಾಗಿದೆ. ಉಳಿದ ಸ್ಥಾನಗಳಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ), ಭಾರತ ಆದಿವಾಸಿ ಪಕ್ಷ (ಬಿಎಪಿ) ಹಾಗೂ ಪಕ್ಷೇತರ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ತನ್ನ ಮುನ್ನಡೆ ಕಾಯ್ದುಕೊಂಡಿದ್ದು, 599 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 301 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. 37 ಜಿಲ್ಲೆಗಳ ಪೈಕಿ 27 ಜಿಲ್ಲಾ ಪರಿಷತ್‌ಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ ಕೇವಲ 6 ಜಿಲ್ಲೆಗಳಲ್ಲಿ ಬಹುಮತ ಗಳಿಸಿದೆ. 

ಅಕ್ಟೋಬರ್ 22, 28 ಹಾಗೂ ನವೆಂಬರ್ 3 ಮತ್ತು 14ರಂದು ಒಟ್ಟು ನಾಲ್ಕು ಹಂತಗಳಲ್ಲಿ ಈ ಚುನಾವಣೆಗಳಿಗೆ ಮತದಾನ ನಡೆದಿತ್ತು. ಇನ್ನು ನಾಲ್ಕು ಜಿಲ್ಲೆಗಳ (ಕೋಟಾ, ಬರಾನ್, ಶ್ರೀ ಗಂಗಾನಗರ ಮತ್ತು ಕರೌಲಿ) ಮತ ಎಣಿಕೆಯು ಡಿಸೆಂಬರ್ 17ರಂದು ನಡೆಯಲಿದೆ. ವಿಶೇಷವೆಂದರೆ, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿಶೇಷ ತೀವ್ರ ಪರಿಷ್ಕರಣೆಗೂ (ಎಸ್‌ಐಆರ್) ಮುನ್ನ ಇದ್ದ ಮತದಾರರ ಪಟ್ಟಿಯನ್ನು ಆಧಾರವಾಗಿ ಬಳಸಿತ್ತು.

ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹ್ಲೋಟ್ ಅವರು, “ರಾಜ್ಯದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಗ್ರಾಮೀಣ ಮತದಾರರು ತಕ್ಕ ಪಾಠ ಕಲಿಸಿದ್ದಾರೆ” ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ, ಜನಾದೇಶವನ್ನು ಒಪ್ಪಿಕೊಂಡಿರುವ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಅವರು, ಪಕ್ಷಕ್ಕೆ ಹಿನ್ನಡೆಯಾಗಿರುವ ಕ್ಷೇತ್ರಗಳ ಕುರಿತು ಆತ್ಮಾವಲೋಕನ ನಡೆಸುವುದಾಗಿ ತಿಳಿಸಿದ್ದಾರೆ.

ಎಸ್‌ಐಆರ್ ಪೂರ್ವದ ಮತದಾರರ ಪಟ್ಟಿ ಬಳಕೆ, ಡಿಲೀಟ್ ಆದವರು ಪ್ರತ್ಯಕ್ಷ !

ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಸ್‌ಐಆರ್‌ ಬಳಿಕ ಪ್ರಕಟಗೊಂಡ ಮತದಾರರ ಪಟ್ಟಿಯನ್ನು ಬಳಸಿಲ್ಲ. ಈ ವಿಚಾರವನ್ನು ರಾಜ್ಯದ ಚುನಾವಣಾ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ರಾಜೇಶ್ ವರ್ಮಾ ಮತ್ತು ಮುಖ್ಯ ಚುನಾವಣಾ ಅಧಿಕಾರಿ ನವೀನ್ ಮಹಾಜನ್ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 2025ರ ಜನವರಿ 1ರವರೆಗೆ ಪರಿಷ್ಕೃತಗೊಂಡಿದ್ದ ಚುನಾವಣಾ ಆಯೋಗದ ಎಸ್‌ಐಆರ್-ಪೂರ್ವ ಮತದಾರರ ಪಟ್ಟಿಯನ್ನು ಆಧಾರವಾಗಿ ಬಳಸಲಾಗಿದೆ ಎಂದು ತಿಳಿಸಿರುವುದು ವರದಿಯಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಸಿದ್ಧತೆಗಳು ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಆರಂಭವಾಗಿದ್ದರಿಂದ ಮತ್ತು ರಾಜ್ಯ ಚುನಾವಣಾ ಆಯೋಗವು ಸಾಂಪ್ರದಾಯಿಕವಾಗಿ ವಾರ್ಷಿಕ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಪಟ್ಟಿಯನ್ನು ಅವಲಂಬಿಸುವುದರಿಂದ ಈ ಪಟ್ಟಿಯನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚುನಾವಣಾ ಆಯೋಗದ ಅಂತಿಮ ಎಸ್‌ಐಆರ್ ಪಟ್ಟಿಗಿಂತ (5.15 ಕೋಟಿ ಮತದಾರರು) ರಾಜ್ಯ ಚುನಾವಣಾ ಆಯೋಗದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ (5.45 ಕೋಟಿ ಮತದಾರರು) ಸುಮಾರು 30 ಲಕ್ಷ ಹೆಚ್ಚು ಮತದಾರರ ಹೆಸರುಗಳು ಇರುವುದು ವರದಿಯಾಗಿದೆ. (ಅಲ್ಲದೆ, ಎಸ್‌ಐಆರ್ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಕೈಬಿಡಲಾಗಿದ್ದ 1.82 ಲಕ್ಷ ಮಂದಿಯ ಹೆಸರುಗಳು ಪಂಚಾಯತ್ ಪಟ್ಟಿಯಲ್ಲಿ ಉಳಿದುಕೊಂಡಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ).

ಎಸ್‌ಐಆರ್ ಪೂರ್ವದ ಮತದಾರರ ಪಟ್ಟಿ, ಬಿಜೆಪಿಗೆ ಸೋಲು

ರಾಜಸ್ಥಾನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿರುವುದು ಮತ್ತು ಬಿಜೆಪಿಗೆ ಹಿನ್ನಡೆಯಾಗಿರುವುದು ದೇಶದಾದ್ಯಂತ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಎಸ್‌ಐಆರ್ ಪೂರ್ವದ ಮತಪಟ್ಟಿ ಬಳಸಿರುವುದು.

ದೇಶದಲ್ಲಿ ಎಸ್‌ಐಆರ್ ವಿರುದ್ಧದ ಹೋರಾಟಗಾರರ ಪ್ರಮುಖ ಆರೋಪವೆಂದರೆ, ಎಸ್‌ಐಆರ್ ಮೂಲಕ ಬಿಜೆಪಿ ವಿರೋಧಿ ಮತದಾರರ ಹೆಸರುಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ಡಿಲೀಟ್ ಮಾಡಲಾಗುತ್ತಿದೆ ಎಂಬುವುದಾಗಿದೆ.

ಎಸ್‌ಐಆರ್ ಮೂಲಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮತದಾರರ ಹೆಸರುಗಳನ್ನು ವಿವಿಧ ಕಾರಣಗಳನ್ನು ನೀಡಿ ಡಿಲೀಟ್ ಮಾಡುವ ಮೂಲಕ ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗ ಸಹಾಯ ಮಾಡುತ್ತಿದೆ ಎಂಬ ಆರೋಪವನ್ನು ಎಸ್‌ಐಆರ್ ವಿರೋಧಿಗಳು ಮಾಡಿಕೊಂಡು ಬರುತ್ತಿದ್ದಾರೆ. ಪಶ್ಚಿಮ ಬಂಗಾಳದಂತೆ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಮೂಲಕ ಲಕ್ಷಾಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಿ, ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪವಿದೆ.

ಇದಕ್ಕೆ ಪುಷ್ಠಿ ನೀಡುವಂತೆ ರಾಜಸ್ಥಾನದ ಪಂಚಾಯತ್ ಚುನಾವಣೆಗೆ ಎಸ್‌ಐಆರ್ ಪೂರ್ವದ ಮತದಾರರ ಪಟ್ಟಿ ಬಳಸಿದಾಗ, ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಸುಮಾರು 30 ಲಕ್ಷ ಮಂದಿ ಪ್ರತ್ಯಕ್ಷಗೊಂಡಿದ್ದ ಬಗ್ಗೆ ವರದಿಯಾಗಿತ್ತು.

ಈಗ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವುದು ಸಾಧಿಸಿರುವುದು ಮತ್ತು ಆಡಳಿತರೂಢ ಬಿಜೆಪಿಗೆ ಸೋಲಾಗಿರುವುದು ಎಸ್‌ಐಆರ್ ವಿರೋಧಿ ಹೋರಾಟಗಾರರ ಆರೋಪಗಳನ್ನು ಇನ್ನಷ್ಟು ಪುಷ್ಠೀಕರಿಸಿವೆ. ಒಂದು ವೇಳೆ ಎಸ್‌ಐಆರ್ ಬಳಿಕದ ಮತದಾರರ ಪಟ್ಟಿ ಬಳಸಿದ್ದರೆ ಬಿಜೆಪಿ ಗೆಲ್ಲುತ್ತಿತ್ತೆ? ಎಂಬ ಪ್ರಶ್ನೆ ಮೂಡಿದೆ.

ಕರ್ನಾಟಕದಲ್ಲೂ ಹಳೆಯ ಬಳಸುತ್ತಾ ಆಯೋಗ?

ಬಿಜೆಪಿ ಆಡಳಿತದ ಯುಪಿ, ರಾಜಸ್ಥಾನ ರಾಜ್ಯಗಳೇ ಎಸ್‌ಐಆರ್ ಪೂರ್ವದ ಮತದಾರರ ಪಟ್ಟಿ ಬಳಸಿರುವಾಗ, ಕರ್ನಾಟಕ ಕೂಡ ಎಸ್‌ಐಆರ್ ಪಟ್ಟಿ ಬಳಸಬಾರದು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಳೆಯ ಮತದಾರರ ಪಟ್ಟಿಯನ್ನೇ ಬಳಸಬೇಕು ಎಂಬ ಆಗ್ರಹವನ್ನು ಹೋರಾಟಗಾರರು ಮಾಡಿದ್ದಾರೆ. ಈ ಸಂಬಂಧ ರಾಜ್ಯದ ಕಾಂಗ್ರೆಸ್ ಸರ್ಕಾರದ ದೃಢ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಮಾಡಿದ್ದಾರೆ.

ಈಗ ರಾಜಸ್ಥಾನ ನದ ಫಲಿತಾಂಶದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ? ರಾಜ್ಯ ಚುನಾವಣಾ ಆಯೋಗ ಹಳೆಯ ಪಟ್ಟಿಯನ್ನೇ ಬಳಸುತ್ತಾ ಕಾದು ನೋಡಬೇಕಿದೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಅಳಿಸುವಿಕೆಗೆ ಗುರುತಿಸಿದ್ದ 1,635 ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಮತ್ತೆ ಪ್ರತ್ಯಕ್ಷ; ಹಳೆಯ EPIC ಸಂಖ್ಯೆಗಳೇ ಮುಂದುವರಿಕೆ

ಬೆಂಗಳೂರು: ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹೆಸರಿನಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ದಿ ವೈರ್ ವರದಿ ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ಎಸ್‌ಐಆರ್ ವೇಳೆ ಗೈರುಹಾಜರಿ, ಸ್ಥಳಾಂತರ, ಮರಣ...

ದಲಿತ ತಾರತಮ್ಯ ಪ್ರಕರಣ: ತನಿಖಾಧಿಕಾರಿಯನ್ನು ಬದಲಿಸಲು ಮದ್ರಾಸ್ ಹೈಕೋರ್ಟ್ ಆದೇಶ

ರಾಮನಾಥಪುರಂ ಜಿಲ್ಲೆಯ ಗ್ರಾಮದೊಂದರಲ್ಲಿ ಸಾರ್ವಜನಿಕ ರಸ್ತೆಯನ್ನು ಬಳಸಲು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಜನರು ಎದುರಿಸುತ್ತಿರುವ ತೊಂದರೆಗಳ ಕುರಿತು ಸಲ್ಲಿಸಲಾದ ದೂರಿನ ಬಗ್ಗೆ ಹೊಸದಾಗಿ ತನಿಖೆ ನಡೆಸಲು, ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‌ಪಿ)...

‘ಶೀಘ್ರದಲ್ಲೇ ನಿರ್ಗಮಿತ ಪ್ರಧಾನಿ ಆಗಲಿದ್ದೇನೆಂದು ಮೋದಿಯವರಿಗೆ ಅರಿವಾಗಿದೆ’: FICCI ಭಾಷಣದ ಬೆನ್ನಲ್ಲೇ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಕಾರ್ಮಿಕರ ವೇತನ ಹೆಚ್ಚಳವಾಗುತ್ತಿಲ್ಲ ಎಂದು ಕೈಗಾರಿಕೋದ್ಯಮಿಗಳನ್ನೇ ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಕಳೆದ 12 ವರ್ಷಗಳಿಂದ ದೇಶದ ಆಡಳಿತ ನಡೆಸುತ್ತಿರುವ...

ರಾಜೀನಾಮೆ ಬಳಿಕ ಪದಚ್ಯುತಿ ಪ್ರಕ್ರಿಯೆ ಮುಂದುವರಿಸುವಂತಿಲ್ಲ: ನ್ಯಾಯಮೂರ್ತಿ ವರ್ಮಾ

ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ರಾಜೀನಾಮೆ ನೀಡಿದ ಬಳಿಕ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರತಿಪಾದಿಸಿದ್ದಾರೆ. ತಾವು ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿದಿಲ್ಲ. ಹೀಗಿರುವಾಗ ತಮ್ಮನ್ನು ಪದಚ್ಯುತಗೊಳಿಸುವ ಯಾವುದೇ...

ಇಸ್ರೇಲಿ ಸೇನೆಯ ನೆಲದಾಳಿಗೆ ಮಧ್ಯ ಗಾಜಾದಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರ; 1,500ಕ್ಕೂ ಅಧಿಕ ಕುಟುಂಬಗಳು ಅತಂತ್ರ

ಗಾಜಾ: ಇಸ್ರೇಲಿ ಸೇನೆಯ ಹೊಸ ನೆಲದಾಳಿಯ ಕಾರ್ಯಾಚರಣೆ ಮತ್ತು ಮಿಲಿಟರಿ ನಿರ್ಬಂಧಗಳಿಂದಾಗಿ ಮಧ್ಯ ಗಾಜಾ ಪಟ್ಟಿಯಲ್ಲಿ 6,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲವಂತದ ಸ್ಥಳಾಂತರಕ್ಕೆ ಒಳಗಾಗಿದ್ದಾರೆ. 1,500ಕ್ಕೂ ಅಧಿಕ ಕುಟುಂಬಗಳು ತಮ್ಮ ನೆಲೆಗಳನ್ನು ತೊರೆಯಬೇಕಾದ...

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಮುಂದುವರಿಕೆಗೆ ಸುಪ್ರೀಂ ಕೋರ್ಟ್ ಅಸ್ತು: ರಾಜ್ಯ ಸರ್ಕಾರದ ಮೇಲ್ಮನವಿ ವಜಾ!

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರೊಂದಿಗೆ ದ್ವಿಚಕ್ರ ವಾಹನ ಮಾಲೀಕರು ಮತ್ತು ಅಗ್ರಿಗೇಟರ್...

ಕಾವೇರಿ ವಿವಾದ: ಕರ್ನಾಟಕದಿಂದ 11 ಟಿಎಂಸಿ ಹೆಚ್ಚುವರಿ ನೀರು ಕೇಳಿದ್ದ ತಮಿಳುನಾಡಿನ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ಕಾವೇರಿ ನದಿಯಿಂದ ತನಗೆ 11 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ವಿಕ್ರಮ್...

‘ಮುಗ್ಧ ಭಾರತೀಯರ ಹತ್ಯೆ ಸಹಿಸಿಕೊಂಡು ಭಯೋತ್ಪಾದನೆಗೆ ಬೆಂಬಲಿಸುವ ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ’: ರಾಹುಲ್ ಗಾಂಧಿ 

ಚಿಕಾಗೋ: ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ....

ಚುನಾವಣಾ ಆಯುಕ್ತರ ನೇಮಕಾತಿ ಪ್ರಕರಣ: ಪ್ರತ್ಯೇಕ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿಎಸ್‌) ನೇಮಕಾತಿಯನ್ನು ನಿಯಂತ್ರಿಸುವ 2023ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ಕುರಿತು ಇಬ್ಬರು ನ್ಯಾಯಮೂರ್ತಿಗಳ ಪೀಠ ನೀಡಿದ್ದ...

ಗುಜರಾತ್‌ನಲ್ಲಿ ಖಾಸಗಿ ವಾಹನಗಳ ಮೇಲೆ ಜಾತಿ ಪ್ರದರ್ಶನಕ್ಕೆ ಬ್ರೇಕ್: ಜಾತಿ ಸೂಚಿಸುವ ಪದ, ಚಿಹ್ನೆ, ಬರಹಗಳ ಬಳಕೆ ನಿಷೇಧಿಸಿದ ಸರ್ಕಾರ

ಅಹಮದಾಬಾದ್: ಖಾಸಗಿ ವಾಹನಗಳ ಮೇಲೆ ಜಾತಿಯನ್ನು ಗುರುತಿಸುವ ಪದಗಳು, ಚಿಹ್ನೆಗಳು, ಚಿತ್ರಗಳು ಮತ್ತು ಬರಹಗಳನ್ನು ಪ್ರದರ್ಶಿಸುವುದನ್ನು ಗುಜರಾತ್‌ನ ಸರ್ಕಾರ ನಿಷೇಧಿಸಿದೆ. ಜಾತಿ ಆಧಾರಿತ ಗುರುತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ವ್ಯಾಪಕವಾಗಿರುವ ರಾಜ್ಯದಲ್ಲಿ ಭೂಪೇಂದ್ರ...