Homeಫ್ಯಾಕ್ಟ್‌ಚೆಕ್ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

- Advertisement -
- Advertisement -

ನಾನು ಇಂದು ಬೆಳಿಗ್ಗೆ 4.30ಕ್ಕೆ ಗಾಢ ನಿದ್ರೆ ಮಾಡುತ್ತಿರುವಾಗ ಮನೆಯಿಂದ ನಮ್ಮ ಚಿಕ್ಕಪ್ಪನ ಮಗ ಕಾಲ್ ಮಾಡಿದ. ನಾನು ಗಾಬರಿಯಿಂದ ಫೋನ್ ತೆಗೆದೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಮನೆಗೆ ಹೋಗದೇ ಬೆಂಗಳೂರಿನಲ್ಲೇ ಇರುವುದರಿಂದ ಕೊರೊನಾ ವೈರಸ್ ಬಗ್ಗೆ ಆತಂಕದಲ್ಲಿರುವಾಗ ಇಂತಹ ಕಾಲ್ ಬೆಳ್ಳಂ ಬೆಳಿಗ್ಗೆ ಬಂದುದರಿಂದ ಭಯವಾಯಿತು. ನನ್ನ ತಮ್ಮನ ಕಾಲ್‌ ರಿಸಿವ್ ಮಾಡುತ್ತಲೇ ಅಣ್ಣ ಎದ್ದೇಳು ಎದ್ದೇಳು ಅಂದ. ನಾನು ಎದ್ದಿದಿನಿ ಹೇಳೋ ಏನೋ ಅಂದೆ. ಮೊದಲು ಎದ್ದು ಕುಳಿತಿಕೋ, ನಮ್ಮ ಅತ್ತೆ ಹೇಳಿದರು ಈಗ ಯಾರು ಮಲಗಬಾರದಂತೆ ಎದ್ದೇ ಇರಬೇಕೆಂತೆ ಅಂತ ಹೇಳೀದ. ನಾನು ಆಯಿತು ಅಂತ ಕಾಲ್ ಕಟ್ ಮಾಡಿ ಮಲಗಿದೆ.

ಆದರೆ ಬೆಳಿಗ್ಗೆ ಎದ್ದು ಕಾಲ್ ಮಾಡಿ ವಿಷಯ ಏನು ಎಂದು ವಿಚಾರಿಸದರೆ, ಎಲ್ಲೋ ಹಸು ಹೊಟ್ಟೆಯಲ್ಲಿ ಮಗು ಹುಟ್ಟಿದೆಯಂತೆ. ಹಾಗಾಗಿ ಇವತ್ತು ಬೆಳಿಗಿನ ಜಾವಾ ನಿದ್ದೆ ಮಾಡಿದ್ರೆ ಏನಾದರೂ ಆಗುತ್ತೆ ಅಂತ ನಮ್ಮ ಏರಿಯಾದವರನ್ನೆಲ್ಲ ಎಬ್ಬಿಸಿದ್ದಾರೆ. ಎಲ್ಲರೂ ಫೋನ್‌ ಮಾಡಿ ಹೇಳು ಅಂದರು, ಅದಕ್ಕಾಗಿ ನಿನಗೆ ಕಾಲ್ ಮಾಡಿದೆ ಅಂದ. ನಾನು ಇವೆಲ್ಲ ನಂಬಬೇಡ ಬರೀ ಸುಳ್ಳು ಸುದ್ಧಿಗಳು ಬುದ್ಧಿ ಇಲ್ವಾ ನಿಮಗೆ ಎಂದು ಬೈಯ್ದು ಫೋನಿಟ್ಟೆ.

ಆನಂತರ ತಿಳಿಯಿತು ಇದು ಎಲ್ಲಾ ಹಳ್ಳಿಹಳ್ಳಿಗಳಿಗೂ ಹಬ್ಬುತ್ತಿದೆ ಎಂದು. ವಾಟ್ಸಪ್‌ನಲ್ಲಿ ನಿರಂತರವಾಗಿ ಈ ರೀತಿಯ ಸುಳ್ಳು ಸುದ್ಧಿಗಳನ್ನು ಹರಡಿ ಗ್ರಾಮೀಣ ಜನರನ್ನು ಇಂತಹ ಮೌಢ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರವೆ ಇದೆ ಹಾಗಾಗಿ ಇದರ ಕುರಿತು ಫ್ಯಾಕ್ಟ್‌ಚೆಕ್ ಮಾಡಲು ನಿರ್ಧರಿಸಿದೆವು.

ವಾಟ್ಸಾಪ್‌ನಲ್ಲಿ ಹಸುವೊಂದು ಮಗುವಿಗೆ ಜನ್ಮಕೊಟ್ಟಿದೆ ಎಂಬ ಐದು ಚಿತ್ರಗಳು ಹರಿದಾಡುತ್ತಿವೆ. ಇವುಗಳನ್ನು ಗೂಗಲ್‌ ರಿವರ್ಸ್‌ ಸರ್ಚ್‌ ಮಾಡಿದಾಗ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆ ಔಶಾ ತಾಲ್ಲೂಕಿನಲ್ಲಿ ವಿಕಲಾಂಗ ಮಗುವೊಂದು ಜನಿಸಿದ್ದು ಮಾತು ಬರುತ್ತಿಲ್ಲ ಎಂದು ಸುದ್ದಿ ಹರಡಿದೆ. ಹಾಗಾಗಿ ಅದು ಹುಟ್ಟಿದ ಸಮಯದಲ್ಲಿ ಉಳಿದವರೂ ಎಚ್ಚರವಿರಬೇಕು ಇಲ್ಲದಿದ್ದರೆ ಅವರ ಮಾತು ನಿಂತು ಹೋಗುತ್ತದೆ ಎಂದು ಯಾರೋ ಕಿಡಿಗೇಡಿಗಳು ಸುದ್ದಿ ಹರಡಿದ್ದಾರೆ.

ಅಲ್ಲಿಂದ ಒಬ್ಬರಿಂದ ಒಬ್ಬರಿಗೆ ನಿದ್ದೆ ಮಾಡಬೇಡಿ ಎದ್ದೇಳಿ ಎಂದು ಎಚ್ಚರಿಸುವ, ಇಡೀ ರಾತ್ರಿ ಎಚ್ಚರದಿಂದಿರುವ ಚಾಳಿ ಶುರುವಾಗಿದೆ ಮಾತ್ರವಲ್ಲ, ಆ ಮಗು ಹಸುವಿಗೆ ಹುಟ್ಟಿದ್ದು ಎಂಬ ಸುಳ್ಳು ಸಹ ಸೇರಿಕೊಂಡಿದೆ. ಅದೇ ಫೋಟೊಗಳನ್ನು ಷೇರ್‌ ಮಾಡಿ ಆಂಧ್ರ ಪ್ರದೇಶದ ಯಾವುದೋ ಊರು ಎಂದೆಲ್ಲಾ ಸುಳ್ಳು ಪಸರಿಸಿದೆ. ಅದೇ ಕಾಲ್ ಕೊನೆಗೆ ಬೆಂಗಳೂರನ್ನು ಸಹ ಮುಟ್ಟಿದೆ. ಇದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ವೆಬ್‌ಸೈಟ್‌ ಸಕಲ್‌.ಕಾಂ ಸ್ಪಷ್ಟಪಡಿಸಿದೆ.

ಅಲ್ಲದೇ ಸಂಬಂಧವಿಲ್ಲದ ಫೋಟೊಗಳನ್ನೆಲ್ಲಾ ಷೇರ್‌ ಮಾಡಲಾಗಿದೆ. ಆಂಧ್ರದ ಎದುಟ್ಲ ಗೋಪಾಲ್‌ಪೇಟ್‌ ತಾಲ್ಲೂಕು ಎಂಬಲ್ಲಿ ನಡೆದಿದೆ ಎಂಬ ಫೋಟೊಗಳನ್ನು ಸಹ ಹರಿಬಿಡಲಾಗಿದೆ. ಒಟ್ಟಾರೆ ಇದೊಂದು ಶುದ್ಧ ಮೌಢ್ಯಾಚರಣೆಯಾಗಿದೆ.

ಇಂತಹ ವದಂತಿಗಳನ್ನು ಹರಡುವ ಮೂಲಕ, ಕಾರಣವಿಲ್ಲದೆ ಜನರಲ್ಲಿ ಭಯವದ ವಾತಾವರಣ ಸೃಷ್ಟಿಸಲಾಗುತ್ತದೆ. ಯಾರೋ ಮಾನಸಿಕ ಅಸ್ವಸ್ಥರು ಈ ಸುಳ್ಳು ಸುದ್ದಿ ಹರಡಿದ್ದಾರೆ. ಇದರಿಂದ ಯಾವುದೇ ಅಪಾಯ ಯಾರಿಗೂ ಆಗುವುದಿಲ್ಲ. ಮಗು ಬೆಳೆಯುತ್ತಿದ್ದಂತೆ ಮಗುವಿನ ಮಾತುಕತೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಆದ್ದರಿಂದ ಜನರು ವದಂತಿಗಳಿಗೆ ಬಲಿಯಾಗಬಾರದು. ಎಂದು ಔಶಾ ತಾಲ್ಲೂಕಿನ ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಸಚಿನ್ ಮಿಟ್ಕರಿ ತಿಳಿಸಿದ್ದಾರೆ.

ಇತ್ತಿಚಿಗೆ ಉತ್ತರಕರ್ನಾಟಕದ ಹಳ್ಳಿಗಳಲ್ಲಿ ನಿಮ್ಮ ತಾಳಿಯಲ್ಲಿರುವ ಹವಳವನ್ನು ಕುಟ್ಟಿ ಪುಡಿಮಾಡಬೇಕು ಇಲ್ಲವಾದರೆ ನಿಮ್ಮ ಗಂಡು ಸತ್ತು ಹೋಗುತ್ತಾನೆ ಎಂದು ಸುಳ್ಳು ಸುದ್ಧಿ ಹಬ್ಬಿಸಿದ್ದಾರೆ ಇದರಿಂದ ಗ್ರಾಮೀಣ ಹೆಣ್ಣು ಮಕ್ಕಳು ಹಾಗೇ ಮಾಡಿದ್ದಾರೆ.

ಇನ್ನು ಕೆಲವು ತಿಂಗಳುಗಳ ಕೆಳಗೆ ಒಬ್ಬನೇ ಮಗ ಇದ್ದರೆ ಆತನಿಗೆ ಅತ್ತೆಯಂದಿರು ಬೆಳ್ಳಿ ಕಡಗ ಹಾಕಬೇಕು ಇಲ್ಲವಾದರೆ ಆತನಿಗೆ ಕೇಡಾಗುತ್ತದೆ ಎಂದು ಹೇಳಿದ್ದರು ಇದಕ್ಕಾಗಿ ಜನ ಸಾಲ ಮಾಡಿ ಬೆಳ್ಳಿ ಅಂಗಡಿಗಳ ಬಾಗಿಲು ತಟ್ಟಿದ್ದರು. ಆದಾದ ಕೆಲವೇ ದಿನಗಳಿಗೆ ಬೆಳ್ಳಿ ಕಡಗ ಇದ್ದರೆ ತೆಗೆದು ಹಾಗಬೇಕು ಎಂದರೆ ತೆಗೆದು ಹಾಕಿದ್ಧಾರೆ. ಈ ರೀತಿ ಗ್ರಾಮೀಣ ಜನರ ಜೀವನದ ಜೊತೆ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ ಆಟ ಆಡುತ್ತಿದ್ದಾರೆ.


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ: ಇಟಲಿಗೆ ಬಲಿಷ್ಟ ವೈದ್ಯರ ತಂಡ ಕಳುಹಿಸಿಕೊಟ್ಟ ʼಕ್ಯೂಬಾʼ


ಈ ಬಗ್ಗೆ ಸರ್ಕಾರಗಳು ಒಂದಷ್ಟು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇತ್ತಿಚಿಗೆ ವಿದ್ಯಾವಂತರೇ ಸುಳ್ಳು ಸುದ್ಧಿಗಳನ್ನು ಹರಡುತ್ತಿರುವುದು ಹೆಚ್ಚಾಗಿದೆ. ಇದನ್ನು ಮೊದಲು ನಿಲ್ಲಿಸಬೇಕು. ಸತ್ಯ ಎಂದು ತಿಳಿಯದ ಹೊರತು ವಿಷಯಗಳನ್ನು ಶೇರ್ ಮಾಡದೆ ಇರುವುದನ್ನು ರೂಢಿಸಿಕೊಳ್ಳಬೇಕು.

ಇದನ್ನೂ ಓದಿ:

ಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...