ಪತಂಜಲಿ ಆಯುರ್ವೇದಿಕ್ ಕಂಪೆನಿಯ ಸಂಸ್ಥಾಪಕ ಬಾಬಾ ರಾಮದೇವ್ ಆನೆಯ ಮೇಲೆ ಕುಳಿತು ಯೋಗ ಮಾಡುತ್ತಿರುವಾಗ, ಸಮತೋಲನ ತಪ್ಪಿ ಮೇಲಿನಿಂದ ಜಾರಿಬಿದ್ದ ಘಟನೆ ನಡೆದಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಕಂಡು ಬರುವಂತೆ, ರಾಮ್‌ದೇವ್ ಆನೆಯ ಬೆನ್ನಿನ ಮೇಲೆ ಕುಳಿತು ಯೋಗ ಮಾಡುತ್ತಿದ್ದರು. ಇದಾಗಿ ಕ್ಷಣದಲ್ಲೇ ಆನೆ ತುಸು ಮೈಕೊಡವಿದ ಕಾರಣ ರಾಮ್ ದೇವ್ ಕೆಳಗೆ ಬಿದ್ದಿದ್ದಾರೆ. ಬಿದ್ದ ನಂತರ ರಾಮದೇವ್ ನಿಧಾನವಾಗಿ ಎದ್ದು ಕುಂಟುತ್ತಾ ಹೋಗುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸೋಲಿಗೆ `ಯೋಗ’ ಮಾಡದಿರೋದೆ ಕಾರಣವಂತೆ! `ಸೇಲ್ಸ್ ಬಾಬಾ’ನ ಲೇಟೆಸ್ಟ್ ಕಚಗುಳಿ
ಘಟನೆಯಲ್ಲಿ ಗಂಭೀರ ಸ್ವರೂಪದ ಗಾಯಗಳೇನು ಆಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಗುರುಗಾವ್‌ನ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
BREAKING: Baba Ramdev fell off from an elephant while doing Yoga on it, has sustained severe injuries in Spine, now admitted to Medanta Gurgaon.pic.twitter.com/1ec0IxFDLG
— Rajdeep Ssrdesai (@niiravmodi) October 13, 2020
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ. ಶಿವಂ ವಿಜ್ ಎಂಬವರು “ಬಾಬಾ ರಾಮದೇವ್ ಆನೆಯ ಮೇಲೆ ಯೋಗ ಮಾಡುತ್ತಿದ್ದರೆ, ಆನೆ ಬಾಬಾ ಅವರ ಸಮತೋಲನವನ್ನು ಭಂಗಗೊಳಿಸುತ್ತದೆ. ಅಲೋಪತಿ ಅಥವಾ ‘ಪಾಶ್ಚಾತ್ಯ’ ವಿಜ್ಞಾನವನ್ನು ಬಳಸುವ ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗದೆ ಅವರು ತಮ್ಮ ಗಾಯಗಳಿಂದ ಬೇಗನೆ ಚೇತರಿಸಿಕೊಳ್ಳಲಿ” ಎಂದು ಹೇಳಿದ್ದಾರೆ.
ಇನ್ನೂ ಹಲವು ಟ್ವೀಟ್‌ಗಳನ್ನು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.
ಇದನ್ನೂ ಓದಿ: ಮೂಗಿನೊಳಕ್ಕೆ ಸಾಸಿವೆ ಎಣ್ಣೆ ಹಾಕಿದರೆ ಕೊರೊನಾ ವೈರಸ್ ಸಾಯುತ್ತದೆ – ರಾಮ್ ದೇವ್: ನಿಜವೇನು?


