ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ’’ನೀವು ಜಾತ್ಯಾತೀತರಾಗಿ ಮಾರ್ಪಾಡಾಗಿದ್ದೀರಾ’’ ಎಂದು ಪ್ರಶ್ನಿಸಿದ್ದು, ಇದಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರದಲ್ಲಿ, ”ರಾಜ್ಯಪಾಲರು ಬಳಸಿದ ಭಾಷೆಯನ್ನು ನೋಡಿ ಆಘಾತಕ್ಕೊಳಗಾದೆ” ಎಂದು ಹೇಳಿದ್ದಾರೆ.
“ಗೌರವಾನ್ವಿತ ರಾಜ್ಯಪಾಲರು ಈ ವಿಷಯದ ಬಗ್ಗೆ ತಮ್ಮ ಸ್ವಂತ ದೃಷ್ಟಿಕೋನಗಳನ್ನು ಮತ್ತು ಅಭಿಪ್ರಾಯಗಳನ್ನು ಹೊಂದಬಹುದು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಮುಖ್ಯಮಂತ್ರಿಗೆ ಅವರು ತಮ್ಮ ಸಲಹೆಗಳನ್ನು ತಿಳಿಸುವ ಅಧಿಕಾರವನ್ನು ನಾನು ಪ್ರಶಂಸಿಸುತ್ತೇನೆ. ಆದಾಗ್ಯೂ, ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ರಾಜ್ಯಪಾಲರ ಪತ್ರ ಮತ್ತು ಪತ್ರದಲ್ಲಿನ ಭಾಷೆಯ ಬಳಕೆಯನ್ನು ನೋಡಿ ನಾನು ಆಘಾತ ಮತ್ತು ಆಶ್ಚರ್ಯಕ್ಕೊಳಗಾಗಿದ್ದೇನೆ” ಎಂದು ಅವರು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಂಗನಾ ರಾಣಾವತ್ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?
It was brought to my notice through the media, a letter written by the Hon. Governor of Maharashtra to the @CMOMaharashtra
In this letter the Hon. Governor has sought the intervention of the Chief Minister to open up religious places for the public. pic.twitter.com/1he2VOatx3
— Sharad Pawar (@PawarSpeaks) October 13, 2020
ರಾಜ್ಯಪಾಲರು ಉದ್ಧವ್ ಠಾಕ್ರೆಗೆ ಸೋಮವಾರ ಬರೆದ ಪತ್ರದಲ್ಲಿ, ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ಪೂಜಾ ಸ್ಥಳಗಳನ್ನು ಕೂಡಲೇ ಪುನಃ ತೆರೆಯಲು ಆದೇಶವನ್ನು ನೀಡುವಂತೆ ಕೋರಿದ್ದರು. “ನೀವು ಹಿಂದುತ್ವದ ಕಟ್ಟಾ ಸಮರ್ಥಕರಾಗಿದ್ದೀರಿ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ನೀವು ಭಗವಾನ್ ರಾಮನ ಬಗ್ಗೆ ನಿಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದೀರಿ. ನೀವು ಪಂಡರಪುರದ ವಿಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಆಶಾಡಿ ಏಕಾದಶಿಯ ಪೂಜೆ ನಡೆಸಿದ್ದೀರಿ” ಎಂದು ರಾಜ್ಯಪಾಲರು ಪತ್ರದಲ್ಲಿ ಬರೆದ್ದರು.
“ಪೂಜಾ ಸ್ಥಳಗಳ ಪುನರಾರಂಭವನ್ನು ಮತ್ತೆ ಮತ್ತೆ ಮುಂದೂಡಲು ನೀವು ಯಾವುದೇ ದೈವಿಕ ಮುನ್ಸೂಚನೆಯನ್ನು ಪಡೆದಿದ್ದೀರ ? ಅಥವಾ ನೀವು ‘ಜಾತ್ಯತೀತ’ರಾಗಿ ಮಾರ್ಪಟ್ಟಿದ್ದೀರಾ, ಹಿಂದೆ ನೀವು ಆ ಪದವನ್ನು ದ್ವೇಷಿಸುತ್ತಿದ್ದಿರಿ”
-ಭಗತ್ ಸಿಂಗ್ ಕೋಶ್ಯರಿ, ಮಹಾರಾಷ್ಟ್ರ ರಾಜ್ಯಪಾಲ
ಈ ಪತ್ರಕ್ಕೆ ಮುಖ್ಯಮಂತ್ರಿ ಠಾಕ್ರೆ ಪ್ರತಿಕ್ರಿಯಿಸಿದ್ದು, ತಮ್ಮ ಹಿಂದುತ್ವಕ್ಕೆ ರಾಜ್ಯಪಾಲರಿಂದ ಅಥವಾ ಯಾರಿಂದಲೂ ಪ್ರಮಾಣಪತ್ರ ಅಗತ್ಯವಿಲ್ಲ. ತಾನು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿರುವ ಅವರು, “ನಾನು ದೈವಿಕ ಮುನ್ಸೂಚನೆಗಳನ್ನು ಪಡೆಯುತ್ತಿದ್ದೇನೆ ಎಂದು ನೀವು ಹೇಳಿದ್ದೀರಾ? ಬಹುಶಃ ನೀವು ಅವುಗಳನ್ನು ಪಡೆದುಕೊಂಡಿರಬಹುದು ಆದರೆ ನಾನು ಅಷ್ಟು ದೊಡ್ಡವನಲ್ಲ” ಎಂದು ಬರೆದಿದ್ದಾರೆ.
ದೇವಾಲಯಗಳನ್ನು ಪುನಃ ತೆರೆಯುವುದು ಅಥವಾ ವಿಳಂಬ ಮಾಡುವುದು “ಜಾತ್ಯತೀತತೆಯ ಪ್ರಶ್ನೆಯಲ್ಲ” ಎಂದು ಠಾಕ್ರೆ ರಾಜ್ಯಪಾಲರಿಗೆ ನೆನಪಿಸಿದ್ದು, ಕೊಶ್ಯರಿ ಅವರು ತಮ್ಮದೇ ಆದ ಸಾಂವಿಧಾನಿಕ ಪ್ರಮಾಣವನ್ನು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
“ನೀವು ಕೂಡ ‘ಜಾತ್ಯತೀತ’ ಪದವನ್ನು ಹೊಂದಿರುವ ಸಂವಿಧಾನದ ಮೂಲಕ ಪ್ರತಿಜ್ಞೆ ಮಾಡಿದ್ದೀರಿ ಎಂಬುದನ್ನು ನೀವು ಮರೆತಿದ್ದೀರಾ? ನೀವು ಅದನ್ನು ತಿರಸ್ಕರಿಸುತ್ತೀರಾ?” ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ಪೊಲೀಸರ ರಕ್ತದಲ್ಲಿ ತೊಯ್ದ ‘ಉತ್ತಮ’ಪ್ರದೇಶ : ಶಿವಸೇನೆ ಟೀಕೆ


