ಪೊಲೀಸರ ರಕ್ತದಲ್ಲಿ ತೊಯ್ದ ‘ಉತ್ತಮ’ಪ್ರದೇಶ : ಶಿವಸೇನೆ ಟೀಕೆ

0

ಕಳೆದ ವಾರ ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಮತ್ತು ಅವನ ಸಹಚರರು ಎಂಟು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಶಿವಸೇನೆ ಟೀಕಿಸಿದೆ. ಅವನು ಭಾರತಕ್ಕೆ ‘ನೇಪಾಳದ ದಾವೂದ್ (ಇಬ್ರಾಹಿಂ)’ ಆಗಬಾರದು ಎಂದು ಎಚ್ಚರಿಸಿದೆ.

ಕಳೆದ ವಾರ ಕಾನ್ಪುರ ಸಮೀಪದ ಡಿಕ್ರು ಎಂಬ ಹಳ್ಳಿಯೊಂದರಲ್ಲಿ ದುಬೆಯ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಸದ್ಯಕ್ಕೆ ದುಬೆ ಪರಾರಿಯಾಗಿದ್ದು, ಆತನ ಸಹಚರನನ್ನು ಬಂಧಿಸಲಾಗಿದೆ.

ದುಬೆ ನೆರೆಯ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ ಎಂದು ಸಾಮನಾ ಸಂಪಾದಕೀಯದಲ್ಲಿ ತಿಳಿಸಲಾಗಿದೆ. ಭಾರತ ಮತ್ತು ನೇಪಾಳ ಗಡಿ ಸಂಬಂಧಗಳ ಬಗ್ಗೆ ಸೂಚಿಸುತ್ತಾ “ನೇಪಾಳದೊಂದಿಗಿನ ಭಾರತದ ಗಡಿಯಲ್ಲಿ ಯಾವಾಗಲೂ ಇಂತಹ ಘಟನೆಗಳು ಜರುಗುತ್ತವೆ. ಈ ಸಮಯದಲ್ಲಿ ನೇಪಾಳದೊಂದಿಗಿನ ನಮ್ಮ ಸಂಬಂಧವೂ ಉತ್ತಮವಾಗಿಲ್ಲ. ಈ ದೃಷ್ಟಿಯಲ್ಲಿ ವಿಕಾಸ್ ದುಬೆ ನಾಳೆ ನಮಗೆ ‘ನೇಪಾಳದ ದಾವೂದ್’ ಆಗಬಾರದು ಎಂದು ಅದು ಎಚ್ಚರಿಸಿದೆ.

ಉತ್ತರ ಪ್ರದೇಶವನ್ನು ಸಾಮಾನ್ಯವಾಗಿ ‘ಉತ್ತಮ ಪ್ರದೇಶ’ ಎಂದು ಕರೆಯಲಾಗುತ್ತದೆ. ಆದರೆ ಈಗ ಅದು ಪೊಲೀಸರ ರಕ್ತದಲ್ಲಿ ತೊಯ್ದು, ಭಾರತದ ಆಘಾತ ರಾಜ್ಯವಾಗಿದೆ ಎಂದು ಶಿವಸೇನೆ ಟೀಕಿಸಿದೆ.

‘ಎನ್‌ಕೌಂಟರ್‌’ಗಳಲ್ಲಿ ದರೋಡೆಕೋರರನ್ನು ಮುಗಿಸಲು ಹೆಸರುವಾಸಿಯಾದ ಯುಪಿ ಸರ್ಕಾರದ ಪಟ್ಟಿಯಲ್ಲಿ ದುಬೆ ಅವರ ಹೆಸರು ಹೇಗೆ ಕಾಣಿಸಿಕೊಂಡಿಲ್ಲ ಎಂದು ಸಂಪಾದಕೀಯವು ಆದಿತ್ಯನಾಥ್ ಅವರ ಸರ್ಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿದೆ.

ಆದಿತ್ಯನಾಥ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ, 113 ಕ್ಕೂ ಹೆಚ್ಚು ದರೋಡೆಕೋರರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆದರೆ ದುಬೆ ಅನಧಿಕೃತ ಬಂಗಲೆ ನಿರ್ಮಿಸಿದ್ದಾನೆ. ಅದು ದರೋಡೆಕೋರರು ಪೊಲೀಸರ ಹತ್ಯೆಯನ್ನು ಆಯೋಜಿಸಿದ ನಂತರವೇ ಸರ್ಕಾರದ ಗಮನಕ್ಕೆ ಬಂದಿತು. ಇದು “ದುರದೃಷ್ಟಕರ” ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಸರ್ಕಾರದ ಹಿಟ್ ಲಿಸ್ಟ್‌ನಲ್ಲಿ ವಿಕಾಸ್ ದುಬೆ ಹೆಸರನ್ನು ಹೇಗೆ ಬಿಡಲಾಯಿತು? ಕೊಲೆ ಮತ್ತು ದರೋಡೆ ಸೇರಿದಂತೆ 60 ಕ್ಕೂ ಹೆಚ್ಚು ಗಂಭೀರ ಅಪರಾಧಗಳನ್ನು ಆತ ಹೊಂದಿದ್ದಾನೆ. ಆದರೂ ಸಾಕ್ಷ್ಯಾಧಾರದ ಕೊರತೆಯಿಂದ ಹೇಗೆ ಹೊರಗಿದ್ದಾನೆ? ಆತನ ಪರವಾಗಿ ಪೊಲೀಸರು ಹೇಗೆ ಸಾಕ್ಷಿಗಳಾದರು? ಉತ್ತರ ಪ್ರದೇಶ ಪೊಲೀಸರು ಮತ್ತು ಸರ್ಕಾರದ ಅನುಕೂಲಕ್ಕೆ ಅನುಗುಣವಾಗಿ ಎನ್‌ಕೌಂಟರ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆಯೇ? ಯಾರಾದರೂ ಅಂತಹ ಆರೋಪ ಮಾಡಿದರೆ, ಈ ಬಗ್ಗೆ ಯೋಗಿ ಸರ್ಕಾರ ಏನು ಹೇಳಬೇಕು? ಎಂದು ಸಂಪಾದಕೀಯ ಪ್ರಶ್ನಿಸಿದೆ.

ಈ ಘಟನೆಯು ನಾಲ್ಕು ದಶಕಗಳ ಹಿಂದೆ ಯುಪಿಯ ಕಥುಪುರದಲ್ಲಿ ಚಾವಿರಾಮ್ ಎಂಬ ಡಕಾಯಿತನಿಂದ 11 ಪೊಲೀಸರನ್ನು ಹತ್ಯೆ ಮಾಡಿದ ನೆನಪುಗಳನ್ನು ಮರಕಳಿಸಿದೆ. “40 ವರ್ಷಗಳ ನಂತರವೂ, ಯೋಗಿ ಮಹಾರಾಜರ ಉತ್ತರ ಪ್ರದೇಶದಲ್ಲಿ ಬದಲಾದ ದರೋಡೆಕೋರರು ಈ ರೀತಿ ಪೊಲೀಸರನ್ನು ಕೊಲ್ಲಲು ಸಾಧ್ಯವಾದರೆ … ಯೋಗಿ ಸರ್ಕಾರವು ಉತ್ತರಿಸಬೇಕಾದ ಹಲವಾರು ಪ್ರಶ್ನೆಗಳಿವೆ ಏಕೆಂದರೆ ‘ಉತ್ತರ ಪ್ರದೇಶ’ ಈಗ ಪೊಲೀಸರ ರಕ್ತದಲ್ಲಿ ತೊಯ್ದಿದೆ” ಎಂದು ಶಿವಸೇನೆ ತನ್ನ ಸಂಪಾದಕೀಯದಲ್ಲಿ ಹೇಳಿದೆ.


ಇದನ್ನೂ ಓದಿ: ವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ – ಅಮಾನತು

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here