Homeಮುಖಪುಟವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ - ಅಮಾನತು

ವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ – ಅಮಾನತು

- Advertisement -
- Advertisement -

8 ಪೊಲೀಸರ ಹತ್ಯೆಗೆ ಕಾರಣವಾದ ಕ್ರಿಮಿನಲ್ ವಿಕಾಸ್ ದುಬೆಯ ಸಹಾಯಕ ದಯಾ ಶಂಕರ್ ಅಗ್ನಿಹೋತ್ರಿ ಭಾನುವಾರ ಬಂಧಿಸಲ್ಪಟ್ಟಿದ್ದು, ಆತ ನೀಡಿದ ವೀಡಿಯೊ ಹೇಳಿಕೆಯಲ್ಲಿ ಪೊಲೀಸರೇ ತಮ್ಮ ಮೇಲಿನ ದಾಳಿಯ ಸುಳಿವು ಕೊಟ್ಟಿದ್ದರು ಎಂದು ಹೇಳಿದ್ದಾನೆ.

ಕಳೆದ ವಾರ ಕಾನ್ಪುರದ ಡಿಕ್ರು ಗ್ರಾಮದಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿಗಳ ಹತ್ಯೆಯ ಹಿಂದಿನ ಪ್ರಮುಖ ಆರೋಪಿ ವಿಕಾಸ್ ದುಬೆ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಅಧಿಕಾರಿಗಳು ಸೋಮವಾರ ಇನ್ನೂ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.

ಅಮಾನತುಗೊಂಡವರಲ್ಲಿ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳಾದ ಕುನ್ವರ್ ಪಾಲ್ ಮತ್ತು ಕೆ.ಕೆ.ಶರ್ಮಾ ಮತ್ತು ಚೌಬೆಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ರಾಜೀವ್ ಸೇರಿದ್ದಾರೆ ಎಂದು ಕಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.

ವಿಶೇಷ ಪಡೆ ನಡೆಸಿದ ಆಂತರಿಕ ತನಿಖೆಯಲ್ಲಿ ಈ ಮೂವರು ಪೊಲೀಸರ ಕೈವಾಡ ಖಚಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಕರೆಗಳ ದಾಖಲೆಗಳನ್ನು ಅಮಾನತುಗೊಳಿಸುವ ಮೊದಲು ಪರಿಶೀಲಿಸಲಾಗಿದೆ. ಅವರನ್ನು ಸೇವೆಯಿಂದ ಮುಕ್ತಾಯಗೊಳಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ದಾಳಿಯ ಬಗ್ಗೆ ಮಾಹಿತಿ ಸೋರಿಕೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್ಪುರದ ಬಿಕ್ರು ಗ್ರಾಮದ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡಕ್ಕೆ ರಸ್ತೆ ತಡೆ ಮಾಡಿ ತಡೆಯೊಡ್ಡಿದ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ ಗ್ಯಾಂಗ್‌ನ ಭಾಗ ಅಗ್ನಿಹೋತ್ರಿ ಎಂದು ಶಂಕಿಸಲಾಗಿದೆ.

ಆರೋಪಿಗೆ ದಾಳಿಯ ಮಾಹಿತಿ ಸೋರಿಕೆ ಸಂಶಯದಡಿಯಲ್ಲಿ ಚೌಬೆಪುರದ ಸ್ಟೇಷನ್ ಆಫೀಸರ್ (ಎಸ್‌ಒ) ವಿನಯ್ ತಿವಾರಿ ಅವರನ್ನು ಕಳೆದ ಶನಿವಾರ ಅಮಾನತುಗೊಳಿಸಿ ಲಖನೌಗೆ ಸ್ಥಳಾಂತರಿಸಲಾಯಿತು. ಸತತ ಒಂಭತ್ತು ಗಂಟೆಗಳ ಕಾಲ ಮಾಹಿತಿ ಸೋರಿಕೆಯ ಕುರಿತು ಆತನನ್ನು ವಿಚಾರಣೆ ನಡೆಸಲಾಗಿದೆ. ಆತನ ವಿರುದ್ಧದ ಆರೋಪಗಳ ಸ್ವರೂಪವನ್ನು ಅಧಿಕಾರಿಗಳು ನಿರ್ದಿಷ್ಟಪಡಿಸಿಲ್ಲ.

1993 ರ ಹಿಂದಿನ ಅಪರಾಧ ದಾಖಲೆಗಳ ಪ್ರಕಾರ ದುಬೆ ಒಬ್ಬ ಪ್ರಭಾವೀ ಗ್ಯಾಂಗ್ ಸ್ಟರ್ ಆಗಿದ್ದು, ಪೊಲೀಸ್ ಪಡೆಯೊಳಗೇ ಬೆಂಬಲವನ್ನು ಹೊಂದಿದ್ದಾನೆ.  ಕೊಲೆ, ಕೊಲೆ ಯತ್ನ ಮತ್ತು ಅಪಹರಣ ಪ್ರಕರಣಗಳ ಹೊರತಾಗಿಯೂ ಅವರನು ಮತ್ತು ಅವನ ಗ್ಯಾಂಗ್ ಮುಕ್ತವಾಗಿ ಓಡಾಡಲು ಪೊಲೀಸರೇ ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್ಪುರ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಮೋಹಿತ್ ಅಗರ್‌ವಾಲ್ ಅವರು “ಈ ಹಿಂದೆ ಕನಿಷ್ಠ ಮೂವರು ಪೊಲೀಸರು ದುಬೆ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ ಮತ್ತು ಅವರ ವಿರುದ್ಧ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.

“ದುಬೆಯೊಂದಿಗೆ ಲಿಂಕ್ ಹೊಂದಿರುವ ಪೊಲೀಸ್ ಸಿಬ್ಬಂದಿಗಳ ಸೇವೆಗಳನ್ನು ಕೊನೆಗೊಳಿಸಲಾಗುತ್ತದೆ ಮತ್ತು ಅವರು ಕ್ರಿಮಿನಲ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ” ಎಂದು ಅಗರ್ವಾಲ್ ಹೇಳಿದ್ದಾರೆ.

ಈ ನಡುವೆ ದುಬೆ ಬಂಧನಕ್ಕಾಗಿ 25 ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ದುಬೆ ಬಗ್ಗೆ ಸುಳಿವು ನೀಡಿದವರಿಗೆ 2.5 ಲಕ್ಷ ಬಹುಮಾನ ನೀಡುವುದಾಗಿ ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವುದಾಗಿ ಪೊಲಿಸರು ಘೋಷಿಸಿದ್ದಾರೆ.

ದುಬೆಗಾಗಿ ಪೊಲೀಸರು ಭಾರಿ ಪ್ರಮಾಣದ ಹುಡುಕಾಟ ಪ್ರಾರಂಭಿಸಿದ್ದಾರೆ. ದುಬೆ ಬಂಧನಕ್ಕಾಗಿ ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದ್ದು, ದರೋಡೆಕೋರರ ಹುಡುಕಾಟ ತೀವ್ರಗೊಂಡಿದೆ.


ಇದನ್ನೂ ಓದಿ: 8 ಪೊಲೀಸರ ಹತ್ಯೆ: ಆರೋಪಿ ವಿಕಾಸ್ ದುಬೆಗೆ ದಾಳಿಯ ಮಾಹಿತಿ ಕೊಟ್ಟಿದ್ದು ಪೊಲೀಸರೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡಿನ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಕಶ್ಯಪ್ ಬಿಜೆಪಿಗೆ ಸೇರ್ಪಡೆ

0
ಯೂಟ್ಯೂಬರ್ ಮನೀಶ್ ಕಶ್ಯಪ್ ಇಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಹಾರ ಮೂಲದ ಯೂಟ್ಯೂಬರ್ ಕಶ್ಯಪ್ ಕಳೆದ ವರ್ಷ ನಕಲಿ ಮಾಹಿತಿ ಹರಡಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ...