Homeಮುಖಪುಟ8 ಪೊಲೀಸರ ಹತ್ಯೆ: ಆರೋಪಿ ವಿಕಾಸ್ ದುಬೆಗೆ ದಾಳಿಯ ಮಾಹಿತಿ ಕೊಟ್ಟಿದ್ದು ಪೊಲೀಸರೇ?

8 ಪೊಲೀಸರ ಹತ್ಯೆ: ಆರೋಪಿ ವಿಕಾಸ್ ದುಬೆಗೆ ದಾಳಿಯ ಮಾಹಿತಿ ಕೊಟ್ಟಿದ್ದು ಪೊಲೀಸರೇ?

ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಮಿಶ್ರಾ, ವಿಕಾಸ್ ದುಬೆ ಅವರ ಮನೆಯ ಮೇಲೆ ದಾಳಿ ಮಾಡಲು ಹೋದಾಗ, ಎನ್ಕೌಂಟರ್ ಪ್ರಾರಂಭವಾಗುವ ಮುನ್ನವೇ ಸ್ಟೇಷನ್ ಇನ್-ಚಾರ್ಜ್ ವಿನಯ್ ತಿವಾರಿ ಪರಾರಿಯಾಗಿರುವುದು ಅನುಮಾನವನ್ನು ಹುಟ್ಟುಹಾಕಿದೆ.

- Advertisement -
- Advertisement -

ಕಾನ್ಪುರದಲ್ಲಿ ವಿಕಾಸ್ ದುಬೆ ಮತ್ತು ಆತನ ಗ್ಯಾಂಗ್ ಎಂಟು ಮಂದಿ ಪೊಲೀಸರನ್ನು ಗುಂಡಿಕ್ಕಿ ಕೊಂದ ನಂತರ, ಆತನ ಬಂಧನಕ್ಕೆ ಹೋಗುವ ಮಾಹಿತಿ ಆರೋಪಿಗಳಿಗೆ ಕೊಟ್ಟಿದ್ದು ಯಾರು ಎಂದು ಉತ್ತರ ಪ್ರದೇಶ ಪೊಲೀಸರು ತಮ್ಮ ಸ್ಥಳೀಯ ಪೊಲೀಸರ ಮೇಲೆ ತನಿಖೆ ನಡೆಸುತ್ತಿದ್ದಾರೆ.

ಕಾನ್ಪುರದ ಶಿವರಾಜ್‌ಪುರ, ಬಿಲ್ಹೌರ್ ಮತ್ತು ಚೌಬೆಪುರದ ಮೂರು ಪೊಲೀಸ್ ತಂಡಗಳು ಶುಕ್ರವಾರ ವಿಕಾಸ್ ದುಬೆ ಅವರನ್ನು ಹಿಡಿಯಲು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ  ಬಿಕ್ರು ಗ್ರಾಮದಲ್ಲಿ ಏಕಾಏಕಿ ಎರಗಿದ ಗುಂಡಿನ ದಾಳಿಯಲ್ಲಿ 8 ಪೊಲೀಸರು ಹತರಾಗಿದ್ದರು. ಆರೋಪಿ ವಿಕಾಸ್ ದುಬೆಯನ್ನು ಹಿಡಿಯಲು 25 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಪೊಲೀಸರು ವಿಕಾಸ್ ದುಬೆ ಬಂಧನಕ್ಕೆ ಹೊರಟಿರುವ ಮಾಹಿತಿಯನ್ನು ಚೌಬೆಪುರ ಪೊಲೀಸ್ ಠಾಣೆಯ ಸಿಬ್ಬಂದಿ ನೀಡಿರಬಹುದೆಂದು ಪೊಲೀಸರು ಶಂಕಿಸುತ್ತಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಿಕಾಸ್ ದುಬೆಯ ಕ್ರಿಮಿನಲ್ ಮಾಫಿಯಾ ಪರವಾಗಿ ಬೇಹುಗಾರಿಕೆ ನಡೆಸಿದ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಮೋಹಿತ್ ಅಗರ್ವಾಲ್ ತಿಳಿಸಿದ್ದಾರೆ.

ಚೌಬೆಪುರ ಪೊಲೀಸರ್ ಠಾಣೆಯ ಉಸ್ತುವಾರಿ ವಿನಯ್ ತಿವಾರಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. ವಿಕಾಸ್ ದುಬೆ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಸ್ಥಳೀಯ ರಾಹುಲ್ ತಿವಾರಿ ದೂರು ನೀಡಿದ ನಂತರ ಶುಕ್ರವಾರದ ಘಟನೆ ಜರುಗಿದೆ.

ರಾಹುಲ್ ತಿವಾರಿ ಚೌಬೆಪುರ ಠಾಣೆಯ ಉಸ್ತುವಾರಿ ವಿನಯ್ ತಿವಾರಿ ಅವರನ್ನು ಸಂಪರ್ಕಿಸಿದಾಗ, ವಿಕಾಸ್ ದುಬೆ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದರು ಎಂದು ಆರೋಪಿಸಲಾಗಿದೆ. ನಂತರ ರಾಹುಲ್ ತಿವಾರಿ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಮಿಶ್ರಾ ಅವರನ್ನು ಸಂಪರ್ಕಿಸಿದಾಗ ಎಫ್‌ಐಆರ್‌ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಮಿಶ್ರಾ, ವಿಕಾಸ್ ದುಬೆ ಅವರ ಮನೆಯ ಮೇಲೆ ದಾಳಿ ಮಾಡಲು ಹೋದಾಗ, ಎನ್ಕೌಂಟರ್ ಪ್ರಾರಂಭವಾಗುವ ಮುನ್ನವೇ ಸ್ಟೇಷನ್ ಇನ್-ಚಾರ್ಜ್ ವಿನಯ್ ತಿವಾರಿ ಪರಾರಿಯಾಗಿರುವುದು ಅನುಮಾನವನ್ನು ಹುಟ್ಟುಹಾಕಿದೆ.

ಕಾನ್ಪುರ ಪೊಲೀಸ್ ಮುಖ್ಯಸ್ಥ ದಿನೇಶ್ ಕುಮಾರ್ ಮಾತನಾಡಿ “ಗುಂಡಿನ ದಾಳಿ ಮೂರು ಕಡೆಯಿಂದ ಬಂದಿದ್ದು, ಇದು ಸಂಪೂರ್ಣವಾಗಿ ಯೋಜಿತವಾಗಿದೆ ಎಂದು ಸಾಬೀತಾಗಿದೆ. ರಸ್ತೆಯನ್ನು ನಿರ್ಬಂಧಿಸುವ ಮೂಲಕ ಪೊಲೀಸರು ತಮ್ಮ ವಾಹನಗಳನ್ನು ಬಿಟ್ಟು ಬಿಕ್ರು ಗ್ರಾಮಕ್ಕೆ ನಡೆದುಕೊಂಡೇ ಬರುವಂತೆ ಮಾಡಿರುವುದು ಸಹ ಯೋಜನೆಯ ಭಾಗ ಎಂದು ಅವರು ತಿಳಿಸಿದ್ದಾರೆ.

ಕ್ರಿಮಿನಲ್ ಗ್ಯಾಂಗ್‌ನಿಂದ ಕೊಲ್ಲಲ್ಪಟ್ಟ ಎಂಟು ಪೊಲೀಸರಲ್ಲಿ ದೇವೇಂದ್ರ ಮಿಶ್ರಾ ಕೂಡ ಸೇರಿದ್ದಾರೆ. ಪೊಲೀಸರ ಪ್ರಕಾರ ಅವರನ್ನು ವಿಕಾಸ್‌ದುಬೆ ಅವರ ಸಂಬಂಧಿ ಪ್ರೇಮ್ ಪ್ರಕಾಶ್ ಪಾಂಡೆ ಅವರ ಮನೆಗೆ ಎಳೆದುಕೊಂಡು ಹೋಗೆ ಹೊಡೆದುರುಳಿಸಲಾಗಿದೆ. ಅವರ ಸರ್ವಿಸ್ ರಿವಾಲ್ವರ್ ಅನ್ನು ಅದೇ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳು ಮೂವರು ಸಬ್‌ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಸಹ ಗುಂಡಿಕ್ಕಿ ಕೊಂದಿದ್ದಾರೆ. ಅದೇ ವೇಳೆ ಇಬ್ಬರು ಆರೋಪಿಗಳು ಪೊಲೀಸರಿಂದ ಕೊಲ್ಲಲ್ಪಟ್ಟಿದ್ದಾರೆ.

ಪ್ರೇಮ್ ಪ್ರಕಾಶ್ ಕ್ರಿಮಿನಲ್ ಆರೋಪಿಯಾಗಿದ್ದು ವಿಕಾಸ್‌ದುಬೆ ಅವರ ಗ್ಯಾಂಗ್‌ನ ಸದಸ್ಯನೆಂದು ಹೇಳಲಾಗಿದ್ದು ಆತನನ್ನು ಎನ್ಕೌಂಟರ್‌ ಮಾಡಲಾಗಿದೆ.

ಕುಖ್ಯಾತ ಕ್ರಿಮಿನಲ್ ಮಾಸ್ಟರ್ ಮೈಂಡ್ ವಿಕಾಸ್‌ದುಬೆ ಕೊಲೆ ಯತ್ನ, ಅಪಹರಣ, ಸುಲಿಗೆ ಮತ್ತು ಗಲಭೆಗೆ ಸಂಬಂಧಿಸಿದ 60 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾರೆ. ಶನಿವಾರ ಕಾನ್ಪುರ ಜಿಲ್ಲಾಡಳಿತ ಅವರ ಮನೆಯನ್ನು ನೆಲಸಮ ಮಾಡಿದೆ.


ಇದನ್ನೂ ಓದಿ: 8 ಪೊಲೀಸರನ್ನು ಗುಂಡಿಕ್ಕಿ ಕೊಂದ ಕ್ರಿಮಿನಲ್! ಉತ್ತರ ಪ್ರದೇಶದಲ್ಲೊಂದು ಭೀಕರ ಘಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...