Homeಮುಖಪುಟ100 ಕೋಟಿ ದಾಟಿದ ಬಿಜೆಪಿಯ ಗೂಗಲ್‌ ಜಾಹೀರಾತು ವೆಚ್ಚ!; ಕರ್ನಾಟಕವೇ ಪ್ರಮುಖ ಟಾರ್ಗೆಟ್‌

100 ಕೋಟಿ ದಾಟಿದ ಬಿಜೆಪಿಯ ಗೂಗಲ್‌ ಜಾಹೀರಾತು ವೆಚ್ಚ!; ಕರ್ನಾಟಕವೇ ಪ್ರಮುಖ ಟಾರ್ಗೆಟ್‌

- Advertisement -
- Advertisement -

ಬಿಜೆಪಿ ದೇಶದಲ್ಲಿ ಗೂಗಲ್‌ ಮತ್ತು ಯೂಟ್ಯೂಬ್‌ನಲ್ಲಿ ರಾಜಕೀಯ ಜಾಹೀರಾತಿಗೆ ಅತಿ ಹೆಚ್ಚು ವೆಚ್ಚಗೊಳಿಸಿರುವುದು ಬಹಿರಂಗವಾಗಿದೆ. ಸರ್ಚ್ ಇಂಜಿನ್‌ ಗೂಗಲ್ ಮತ್ತು ಅದರ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಬಿಜೆಪಿಯ ರಾಜಕೀಯ ಜಾಹೀರಾತುಗಳ ವೆಚ್ಚ 100 ಕೋಟಿ ರೂಪಾಯಿಗಳನ್ನು ದಾಟಿದೆ. ಇಷ್ಟೊಂದು ವೆಚ್ಚದಲ್ಲಿ ಗೂಗಲ್‌ನಲ್ಲಿ ಭಾರತದ ಯಾವುದೇ ರಾಜಕೀಯ ಪಕ್ಷ ಜಾಹೀರಾತು ನೀಡಿಲ್ಲ ಎನ್ನುವುದು ಇದೀಗ ಬಹಿಂಗವಾಗಿದೆ.

ಬಿಜೆಪಿಯ ಡಿಜಿಟಲ್ ಪ್ರಚಾರಗಳ ಪ್ರಚಾರಕ್ಕಾಗಿ 101 ಕೋಟಿ ರೂ.ಗಿಂತ ಹೆಚ್ಚು ವೆಚ್ಚ ಮಾಡಿದ್ದು, ಇದು ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (DMK), ಮತ್ತು ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (I-PAC) ಮೇ 2018ರಿಂದ Google ಜಾಹೀರಾತುಗಳ ಪಾರದರ್ಶಕತೆ ವರದಿಯನ್ನು ಪ್ರಕಟಿಸಲು ಪ್ರಾರಂಭಿಸಿದಾಗಿನಿಂದ ಮಾಡಿದ ವೆಚ್ಚಕ್ಕೆ ಸಮಾನವಾಗಿದೆ.

ಇಂಡಿಯಾ ಟುಡೇ ವಿಶ್ಲೇಷಣೆಯ ಪ್ರಕಾರ, ಮೇ 31, 2018 ಮತ್ತು ಏಪ್ರಿಲ್ 25, 2024 ರ ನಡುವೆ ಪ್ರಕಟವಾದ Google ಜಾಹೀರಾತುಗಳಲ್ಲಿ ಬಿಜೆಪಿಯ ಪಾಲು ಒಟ್ಟು ಖರ್ಚಿನ ಶೇಕಡಾ 26 ರಷ್ಟಿದೆ, ಅಂದರೆ 390 ಕೋಟಿ ರೂ.ಆಗಿದೆ.

Googleನಿಂದ “ರಾಜಕೀಯ ಜಾಹೀರಾತು” ಎಂದು ವಿವರಿಸಲಾದ ಒಟ್ಟು 2,17,992 ವಿಷಯ ತುಣುಕುಗಳಲ್ಲಿ  1,61,000 ಕ್ಕಿಂತ ಹೆಚ್ಚು ಅಂದರೆ 73% ಈ ಅವಧಿಯಲ್ಲಿ ಬಿಜೆಪಿ ಪ್ರಕಟಿಸಿದೆ. ಬಿಜೆಪಿ ಪಕ್ಷದ ಬಹುಪಾಲು ಜಾಹೀರಾತುಗಳು ಕರ್ನಾಟಕದ ನಿವಾಸಿಗಳನ್ನು ಟಾರ್ಗೆಟ್‌ ಮಾಡಿಕೊಂಡು ನೀಡಲಾಗಿದ್ದು, ಇದಕ್ಕೆ 10.8 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ, ನಂತರ ಉತ್ತರ ಪ್ರದೇಶದಲ್ಲಿ 10.3 ಕೋಟಿ, ರಾಜಸ್ಥಾನದಲ್ಲಿ 8.5 ಕೋಟಿ ರೂ, ಮತ್ತು ದೆಹಲಿಯಲ್ಲಿ 7.6 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಒಟ್ಟಾರೆಯಾಗಿ, ತಮಿಳುನಾಡನ್ನು ಹೆಚ್ಚು ಟಾರ್ಗೆಟ್‌ ಮಾಡಿಕೊಂಡು ಗೂಗಲ್‌ನಲ್ಲಿ ಹೆಚ್ಚಾಗಿ ‘ರಾಜಕೀಯ ಜಾಹೀರಾತುಗಳನ್ನು’ ನೀಡಲಾಗಿದೆ. ನಂತರದ ಸಾಲಿನಲ್ಲಿ ತೆಲಂಗಾಣ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ ಎಂದು ವಿಶ್ಲೇಷಣೆಯು ತಿಳಿಸಿದೆ.

ಪಾರದರ್ಶಕತೆ ಕೇಂದ್ರದ ಮಾಹಿತಿಯ ಪ್ರಕಾರ, 45 ಕೋಟಿ ರೂಪಾಯಿಗಳೊಂದಿಗೆ, ಗೂಗಲ್ ಜಾಹೀರಾತುಗಳು ಮತ್ತು ವಿಡಿಯೋ ಜಾಹೀರಾತುಗಳೊಂದಿಗೆ ರಾಜಕೀಯ ವೆಚ್ಚದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ ಪಾರ್ಟಿ ಈ ಅವಧಿಯಲ್ಲಿ 5,992 ಆನ್‌ಲೈನ್ ಜಾಹೀರಾತುಗಳನ್ನು ಪ್ರಕಟಿಸಿದೆ, ಬಿಜೆಪಿಯ ಜಾಹೀರಾತುಗಳಿಗೆ ಹೋಲಿಕೆ ಮಾಡಿದರೆ ಇದು ಕೇವಲ 3.7 ಪ್ರತಿಶತದಷ್ಟು ಮಾತ್ರವಾಗಿದೆ. ಕಾಂಗ್ರೆಸ್‌ ಜಾಹೀರಾತು ಪ್ರಚಾರಗಳು ಪ್ರಾಥಮಿಕವಾಗಿ ಕರ್ನಾಟಕ ಮತ್ತು ತೆಲಂಗಾಣ ಮತ್ತು ಮಧ್ಯಪ್ರದೇಶದ ಮೇಲೆ ಕೇಂದ್ರೀಕೃತವಾಗಿತ್ತು.

ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆ, ಗೂಗಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೂರನೇ ಅತಿ ದೊಡ್ಡ ರಾಜಕೀಯ ಜಾಹೀರಾತುದಾರರಾಗಿದ್ದು, ಮೇ 2018 ರಿಂದ 42ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. Googleನಲ್ಲಿ ಭಾರತ್ ರಾಷ್ಟ್ರ ಸಮಿತಿಯ (BRS) ನವೆಂಬರ್ 2023ರಲ್ಲಿ ವಿಧಾನ ಸಭೆ ಚುನಾವಣೆ ವೇಳೆ ಜಾಹೀರಾತುಗಳನ್ನು ಪ್ರಕಟಿಸಿರುವುದನ್ನು ವಿಶ್ಲೇಷಣೆಯು ಗಮನಿಸಿದೆ.

ಲೋಕಸಭೆ ಚುನಾವಣೆಯ ಎರಡನೇ ಹಂತದ ಪ್ರಚಾರದ ಸಮಯದಲ್ಲಿ, ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆ, ನೀತಿಗಳು ಮತ್ತು ಸಾಧನೆಗಳನ್ನು ಪ್ರಚಾರ ಮಾಡಲು ಕನಿಷ್ಠ 14.7 ಕೋಟಿ ರೂ.ವೆಚ್ಚ ಮಾಡಿದೆ. ಏಪ್ರಿಲ್ 18 ಮತ್ತು ಏಪ್ರಿಲ್ 24ರ ನಡುವೆ ಕಾಂಗ್ರೆಸ್‌ 5.7 ಕೋಟಿ ರೂಪಾಯಿ ವೆಚ್ಚದೊಂದಿಗೆ ಮೊದಲ ಸ್ಥಾನದಲ್ಲಿದೆ ಮತ್ತು ಬಿಜೆಪಿಯು 5.3 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇದನ್ನು ಓದಿ: ಚಿಕ್ಕಬಳ್ಳಾಪುರದಲ್ಲಿ 4.8 ಕೋಟಿ ನಗದು ವಶ: ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್‌ ವಿರುದ್ಧ ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...