Homeಅಂತರಾಷ್ಟ್ರೀಯಅಲ್‌ ಜಝೀರಾ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಅಧಿಕಾರಿಗಳು

ಅಲ್‌ ಜಝೀರಾ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಅಧಿಕಾರಿಗಳು

- Advertisement -
- Advertisement -

ಗಾಝಾದಲ್ಲಿ ಇಸ್ರೇಲ್ ನಡೆಸಿದ ಕ್ರೌರ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದ ಅಲ್‌ ಜಝೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಈ ಹಿಂದೆ ದೇಶದಲ್ಲಿ ನಿರ್ಬಂಧ ವಿಧಿಸಿತ್ತು. ಇದೀಗ ಇಸ್ರೇಲ್‌ನಲ್ಲಿನ ಅಲ್‌ಜಝೀರಾ ಕಚೇರಿಗೆ ಇಸ್ರೇಲ್‌ ಅಧಿಕಾರಿಗಳು ದಾಳಿ ನಡೆಸಿದ್ದು, ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕತಾರ್ ಮೂಲದ ಟಿವಿ ಸುದ್ದಿ ನೆಟ್‌ವರ್ಕ್‌ ಅಲ್‌ ಜಝೀರಾವನ್ನು ದೇಶದಲ್ಲಿ ನಿರ್ಬಂಧಿಸದಲು ಇಸ್ರೇಲ್‌ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ಮೇಳೆ ಇಂಥ ದಾಳಿ ನಡೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಸಂವಹನ ಸಚಿವಾಲಯದ ಇನ್ಸ್‌ಪೆಕ್ಟರ್‌ಗಳು, ಪೊಲೀಸರೊಂದಿಗೆ ಜೆರುಸಲೆಮ್‌ನಲ್ಲಿರುವ ಅಲ್ ಜಝೀರಾ ಕಚೇರಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಕ್ಯಾಮರ ಸೇರಿದಂತೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೊದಲು ಅಲ್‌ ಜಝೀರಾ ಪ್ರಸಾರಕ್ಕೆ ಇಸ್ರೇಲ್‌ ನಿರ್ಬಂಧ ವಿಧಿಸಿರುವುದರ ಜೊತೆಗೆ ಅಲ್‌ಜಝೀರಾ ವೆಬ್‌ಸೈಟ್‌ನ್ನು ಇಸ್ರೇಲ್‌ನಾದ್ಯಂತ ನಿರ್ಬಂಧಿಸಿತ್ತು.

ಇಸ್ರೇಲ್‌ನ ಸಂವಹನ ಸಚಿವರಾದ ಶ್ಲೋಮೋ ಕರ್ಹಿ ದಾಳಿ ಕುರಿತ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ ಜಝೀರಾ ಇಸ್ರೇಲ್‌ನ ಕ್ರಮವನ್ನು ಖಂಡಿಸಿದ್ದು, ಇದು ಮಾಹಿತಿಯನ್ನು ಪಡೆಯುವ ಮಾನವನ ಹಕ್ಕುಗಳನ್ನು ಉಲ್ಲಂಘಿಸುವ ಅಪರಾಧ ಕೃತ್ಯ ಎಂದು ಹೇಳಿದೆ. ಅಸೋಸಿಯೇಷನ್ ಫಾರ್ ಸಿವಿಲ್ ರೈಟ್ಸ್ ಇನ್ ಇಸ್ರೇಲ್ (ACRI) ಈ ಬಗ್ಗೆ ಇಸ್ರೇಲ್‌ನ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಇದು ಮಾಧ್ಯಮಗಳಿಗೆ ಕರಾಳ ದಿನ ಮತ್ತು ಪ್ರಜಾಪ್ರಭುತ್ವಕ್ಕೆ ಕರಾಳ ದಿನ ಎಂದು ಇಸ್ರೇಲ್‌ನ ವಿದೇಶಿ ಪ್ರೆಸ್ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕತಾರ್‌ ಪ್ರಮುಖ ಮಧ್ಯವರ್ತಿಯಾಗಿದೆ. ಗಾಝಾದಲ್ಲಿನ ಇಸ್ರೇಲ್‌ ಒತ್ತೆಯಾಳುಗಳ ಬಿಡುಗಡೆಯನ್ನು ಒಳಗೊಂಡಿರುವ ಒಪ್ಪಂದದ ಕಡೆಗೆ ಕೆಲಸ ಮಾಡುವುದನ್ನು ಕತಾರ್‌ ಮುಂದುವರೆಸಿದೆ. ಈ ಮಧ್ಯೆ ಇಸ್ರೇಲ್‌- ಕತಾರ್‌ ಮೂಲದ ಅಲ್‌ಜಝೀರಾ ಕಚೇರಿ ಮೇಲೆ ದಾಳಿ ನಡೆಸಿದೆ.

ಅಲ್ ಜಝೀರಾ ಇಸ್ರೇಲ್‌ನ ಭದ್ರತೆಗೆ ಹಾನಿ ಮಾಡಿದೆ, ಅಕ್ಟೋಬರ್ 7ರ ಹತ್ಯಾಕಾಂಡದಲ್ಲಿ ಸಕ್ರಿಯವಾಗಿ ಭಾಗವಹಿಸಿದೆ, ನಮ್ಮ ದೇಶದಿಂದ ಹಮಾಸ್ ಧ್ವನಿಯನ್ನು ತೆಗೆದುಹಾಕುವ ಸಮಯ ಇದು ಎಂದು ನೆತನ್ಯಾಹು ಈ ಕುರಿತ ಇಸ್ರೇಲ್‌ ಸದನದಲ್ಲಿ ಹೇಳಿದ್ದಾರೆ.

ಮಾರ್ಚ್‌ನಲ್ಲಿ ಇಸ್ರೇಲ್‌ ಸೈನಿಕರು ಗಾಝಾದ ಅಲ್ ಶಿಫಾ ಆಸ್ಪತ್ರೆಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳುವ ಸ್ಟೋರಿಯನ್ನು ಅಲ್‌ಜಝೀರಾ ಚಾನೆಲ್ ವರದಿ ಮಾಡಿತ್ತು. ಇದನ್ನು ಇಸ್ರೇಲ್ ರಕ್ಷಣಾ ಪಡೆಗಳು ನಿರಾಕರಿಸಿದ್ದವು.

ಶ್ವೇತಭವನದ ವಕ್ತಾರ ಕರೀನ್ ಜೀನ್-ಪಿಯರ್ ಇಸ್ರೇಲ್‌ ಸರಕಾರದ ಈ ಕ್ರಮವನ್ನು ಟೀಕಿಸಿದ್ದಾರೆ. ಗಾಝಾದಲ್ಲಿ ಕೆಲಸ ಮಾಡುವವರು ಸೇರಿದಂತೆ ಪ್ರಪಂಚದಾದ್ಯಂತದ ಪತ್ರಕರ್ತರ ಕೆಲಸವನ್ನು ಯುಎಸ್ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ ಪುತ್ರನಿಗೆ ಬಿಜೆಪಿ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಬಿಐ, ಜಾರಿ ನಿರ್ದೇಶನಾಲಯವನ್ನು ಮುಚ್ಚಬೇಕು: ಇಂಡಿಯಾ ಮೈತ್ರಿ ಕೂಟದ ಮುಂದೆ ಅಖಿಲೇಶ್ ಯಾದವ್ ಪ್ರಸ್ತಾಪ

0
ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಇಲಾಖೆಗಳು ಅಗತ್ಯವಿಲ್ಲ, ಅವುಗಳನ್ನು ಮುಚ್ಚಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದು, ಈ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಸಿಬಿಐ ಮತ್ತು...