ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಅಪಾರ ಗೌರವವಿದೆ. ಜಪಾನಿನ ಪೂರ್ವ ತುದಿಯಿಂದ ಅಮೇರಿಕದ ಪಶ್ಚಿಮ ತುದಿಯವರೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಗಾಂಧಿಯ ಪ್ರತಿಮೆಗಳಿವೆ. ಅಧ್ಯಯನ ಕೇಂದ್ರಗಳಿವೆ. ದಕ್ಷಿಣ ಆಫ್ರಿಕಾದಲ್ಲಂತೂ ಮಹಾತ್ಮ ಗಾಂಧಿಯವರಿಗೆ ಇನ್ನಿಲ್ಲದ ಪ್ರೀತಿ ಮತ್ತು ಅಪಾರ ಗೌರವವಿದೆ. ಭಾರತ ಬಿಟ್ಟರೆ ಗಾಂಧಿಯವರ ಎರಡನೇ ತವರೆಂದು ದಕ್ಷಿಣ ಆಫ್ರಿಕಾವನ್ನು ಕರೆಯಲಾಗುತ್ತದೆ. ದಕ್ಷಿಣ ಆಫ್ರಿಕಾದಿಂದ ಗಾಂಧೀಜಿ ಭಾರತಕ್ಕೆ ಮರಳಿದ ಮೇಲೂ ಅವರ ಕುಟುಂಬದ ಮುಂದಿನ ಪೀಳಿಗೆಗಳು ಆದೇಶದಲ್ಲಿಯೇ ನೆಲೆಸಿವೆ. ಈಗ  ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮೊಗಳು ಆಶಿಶ್‌ ಲತಾ ರಾಮಗೋಬಿನ್‌ ಅವರು ವಂಚನೆಯ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.‌ ಒಂದು ಕಾಲದಲ್ಲಿ ವರ್ಣಬೇಧ ನೀತಿಯ ವಿರುದ್ದ ಹೋರಾಟ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದ ಜೈಲುಗಳಲ್ಲಿ ಅನೇಕವರ್ಷ ಸೆರೆವಾಸ ಅನುಭವಿಸಿದ್ದರು.

ದಕ್ಷಿಣ ಆಫ್ರಿಕಾದ ಬಂದರು ನಗರಿ ಡರ್ಬನ್‌ನ ನ್ಯಾಯಾಲಯ ಗಾಂಧಿ ಕುಟುಂಬದ ಕುಡಿ ಆಶಿಶ್ ಲತಾ ರಾಮಗೋಬಿನ್‌ ಅವರಿಗೆ $4,00,000 ಹಣದ ವಂಚನೆಯ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪಿತ್ತಿದೆ. ಜೊತೆಗೆ 7 ವರ್ಷಗಳ ಜೈಲು ಶಿಕೆಯನ್ನು ವಿಧಿಸಿದೆ. ಆಶಿಶ್‌ ಲತಾ ಅವರನ್ನು ಡರ್ಬನ್‌ ಪೊಲೀಸರು ಬಂಧಿಸಿ ಜೈಲಿಗೆ ಕರೆದೊಯ್ದಿದ್ದಾರೆ. ಗಾಂಧೀಜಿಯವರ ನಂತರ ಅವರ ಕುಟುಂಬದವರೊಬ್ಬರು ದಕ್ಷಿಣ ಆಫ್ರಿಕಾದಲ್ಲಿ ಜೈಲಿಗೆ ಹೋಗುತ್ತಿರುವುದು ಇದೇ ಮೊದಲ ನಿದರ್ಶನವೆಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಮೂರನೇ ಅಲೆ ಆರಂಭ

ಆಶಿಶ್‌ ಲತಾ ಅವರು ಭಾರತದಿಂದ ಬಟ್ಟೆಗಳನ್ನು ಆಮದು ಮಾಡಿಕೊಳ್ಳುವ ಸಲುವಾಗಿ ನಕಲಿ ದಾಖಲೆಗಳನ್ನು ನೀಡಿ ಹೂಡಿಕೆದಾರರಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಅವರ ಮೇಲೆ ಎಸ್‌ಎ ಮಹರಾಜ್‌ ಎಂಬುವವರು 2015 ರಲ್ಲಿ ಪ್ರಕರಣ ದಾಖಲಿಸಿದ್ದರು. ಆರ್ಥಿಕ ವಂಚನೆ ಆರೋಪಕ್ಕೆ ಸಂಬಂಧಿಸಿದ ಈ 2015 ರ ಪ್ರಕರಣದಲ್ಲಿ ಡರ್ಬನ್‌ ನ್ಯಾಯಾಲಯ ಆಶಿಶ್‌ ಲತಾ ಅವರಿಗೆ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಎಸ್ಎ. ಮಹರಾಜ್‌ ಅವರು ಆಶಿಶ್‌ ಲತಾ ಅವರ ಕೌಟುಂಬಿಕ ಹಿನ್ನೆಲೆಯ ನಂಬಿಕೆಯಲ್ಲಿ ವ್ಯವಹಾರಕ್ಕೆ ಸಹಿ ಹಾಕಿದ್ದರು ಎನ್ನಲಾಗಿದೆ.

ಆಶಿಶ್‌ ಲತಾ ಅವರ ತಾಯಿ, ಗಾಂಧೀಜಿಯವರ ಮೊಮ್ಮಗಳು ಇಳಾಗಾಂಧಿ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದಾರೆ. ಅವರು 1994-2004 ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಸಂಸತ್ತಿನಲ್ಲಿ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸಿದ್ದರು.

ಇಳಾ ಗಾಂಧಿಯವರ ಮಗಳು ಮತ್ತು ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಶಿಶ್‌ ಲತಾ ರಾಮ್‌ಗೋಬಿನ್ ತಮ್ಮನ್ನು ತಾವು ಮಾನವ ಹಕ್ಕುಗಳ ಹೋರಾಟಗಾರ್ತಿಯೆಂದು ಕರೆದುಕೊಂಡಿದ್ದಾರೆ. ಜೊತೆಗೆ ಇಂಟರ್ನ್ಯಾಷನಲ್‌ ಸೆಂಟರ್‌ ಫಾರ್‌ ನಾನ್‌ ವಯಲೆನ್ಸ್‌ ಎಂಬ ಎನ್‌ಜಿಒ ನಡೆಸುತ್ತಿರುವುದಾಗಿಯೂ ತಿಳಿಸಿದ್ದಾರೆ.


ಇದನ್ನೂ ಓದಿ: ಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ: ಆರೋಪಿಯ ಹಿಂದಿದೆ ಹಿಂಸಾವಾದಿ ಹಿಂದುತ್ವ ಪರಿವಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here