Homeಮುಖಪುಟಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ: ಆರೋಪಿಯ ಹಿಂದಿದೆ ಹಿಂಸಾವಾದಿ ಹಿಂದುತ್ವ ಪರಿವಾರ

ಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ: ಆರೋಪಿಯ ಹಿಂದಿದೆ ಹಿಂಸಾವಾದಿ ಹಿಂದುತ್ವ ಪರಿವಾರ

‘ದಾಸ್ನಾ ದೇವಸ್ಥಾನ ಈ ಗುಂಪುಗಳ ಪ್ರಧಾನ ಕಚೇರಿ, ದೇವಸ್ಥಾನದ ಮುಖ್ಯಸ್ಥ ಯತಿ ನರಸಿಂಗಾನಂದ್ ಈ ಗುಂಪುಗಳ ನಾಯಕ, ಪೋಷಕ...’

- Advertisement -
- Advertisement -

ಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯ ಹಿನ್ನೆಲೆ ಕುರಿತು ಸ್ವತಂತ್ರ ಪತ್ರಕರ್ತ ಅಲಿಶಾನ್‍ ಜಾಫ್ರಿ ಶೋಧ ನಡೆಸಿ ದಿ ವೈರ್‌ನಲ್ಲಿ ಲೇಖನ ಬರೆದಿದ್ದಾರೆ. ಯತಿ ನರಸಿಂಗಾನಂದ ನೇತೃತ್ವದಲ್ಲಿ ಹಲವು ಹಿಂಸಾವಾದಿ ಗುಂಪುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇವು ಹಿಂಸಾಚಾರಕ್ಕೆ ಪ್ರಚೋದನೆ  ನೀಡುತ್ತಿವೆ ಎಂಬುದು ಲೇಖನದಲ್ಲಿ ಸ್ಪಷ್ಟವಾಗಿದೆ. ದೆಹಲಿ ಗಲಭೆಗಳಲ್ಲೂ ಅವರ ಪಾತ್ರವಿದೆ. ದಿ ವೈರ್ ಪ್ರಕಟಿಸಿದ ತನಿಖಾ ವರದಿಯನ್ನು ಅನುವಾದಿಸಿ ಪ್ರಕಟಿಸುತ್ತಿದ್ದೇವೆ.

ಜೂನ್ 5ರಂದು ಮಲಿಕ್ ಸೆಹ್ರಾವತ್ (ನಿಜವಾದ ಹೆಸರು ವಿಕಾಸ್‍ ಸೆಹ್ರಾವತ್) ಮಾಡಿದ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಮೂಲತಃ ಏಪ್ರಿಲ್ 11, 2021 ರಂದು ತನ್ನ ಫೇಸ್‌ಬುಕ್ ಪುಟದಲ್ಲಿ ಮಲಿಕ್‍ ಸೆಹ್ರಾವತ್ ಇದನ್ನು ಪ್ರಕಟಿಸಿದ್ದ. ಆ ವಿಡಿಯೋದಲ್ಲಿ, ಎನ್‍ಡಿಟಿವಿ ಹಿಂದಿಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅಮಾನತುಲ್ಲಾ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಏಪ್ರಿಲ್ 10 ರಂದು ದಾಸ್ನಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ದಿನದ ನಂತರ ಆತ ಈ ವಿಡಿಯೋ ಮಾಡಿದ್ದಾನೆ. ಈ ಹಿಂದೆ ಕಾಂಗ್ರೆಸ್‍ ನಾಯಕಿ ಅಲ್ಕಾ ಲಾಂಬಾ ಅವರನ್ನು ನಿಂದಿಸಿದ, ಕೊಲೆ ಬೆದರಿಕೆ ಹಾಕಿದ  ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮತ್ತು ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ಕರೆ ನೀಡಿದ್ದಕ್ಕಾಗಿ ಆತ ಬಂಧಿತನಾಗಿದ್ದ.

‘ಆ ವೇಶ್ಯೆ ಟಿವಿ ಪತ್ರಕರ್ತ ಇದ್ದಾನಲ್ಲ, ರವೀಶ್‍ ಕುಮಾರ್. ನಾನು ಅವನನ್ನೂ ಕೊಲ್ಲುತ್ತೇನೆ. ನಾನು ಅವನಿಗೆ ಗುಂಡು ಹಾರಿಸುತ್ತೇನೆ.. ಇದು ಪಕ್ಕಾ, ಅವನನ್ನು ಶೂಟ್ ಮಾಡುತ್ತೇನೆ. ಘಾಜಿಯಾಬಾದ್‌ನ ಪಿಂಕಿ ಚೌಧರಿ ಅವರು ಅಮಾನತುಲ್ಲಾ ಖಾನ್ ತಲೆಯ ಮೇಲೆ 51 ಲಕ್ಷ ರೂ.ಗಳನ್ನು ಘೋಷಿಸಿದ್ದಾರೆ. ನಾನು ಅವನನ್ನೂ ಕೊಲ್ಲುತ್ತೇನೆ, ಐದು ಲಕ್ಷ ರೂ. ಮಾತ್ರ ಕೊಡಿ ಸಾಕು” ಎಂದು ಸೆಹ್ರಾವತ್ ವೀಡಿಯೊದಲ್ಲಿ ಹೇಳುತ್ತಾನೆ.

ಜನವರಿ 2020ರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ದಾಳಿಯ ಹೊಣೆ ಹೊತ್ತಿರುವ ಮತ್ತು ಇತ್ತೀಚೆಗೆ ಮುಸ್ಲಿಮರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ವಿಡಿಯೋಗಳನ್ನು ಮಾಡಿದ ವ್ಯಕ್ತಿ ಪಿಂಕಿ ಚೌಧರಿ. ಈತ ಹಿಂದೂ ರಕ್ಷಾ ದಳದ ಮುಖ್ಯಸ್ಥನಾಗಿದ್ದು, ಎಎಪಿ ನಾಯಕ ಅಮಾನತುಲ್ಲಾ ಖಾನ್‍ ಹತ್ಯೆಗೆ 51 ಲಕ್ಷ ರೂ. ಬಹುಮಾನ ಘೋಷಿಸಿದ್ದಾನೆ.

ಸೆಹ್ರಾವತ್ ಒಂಟಿ ತೋಳ ಅಲ್ಲ, ಹಾಗೆಯೇ ಯಾರನ್ನಾದರೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ಇದೇ ಮೊದಲಲ್ಲ. ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಹಿಂಸಾವಾದಿ ಗುಂಪಿನ ಪ್ರಮುಖ ಭಾಗವಾಗಿದ್ದು, ಈ ಗುಂಪಿನ ಸದಸ್ಯರು ದಿನನಿತ್ಯದ ಆಧಾರದ ಮೇಲೆ ದ್ವೇಷವನ್ನು ಹರಡುತ್ತಾರೆ. ಮುಸ್ಲಿಂ ವಿರೋಧಿ ಹಿಂಸಾಚಾರದ ಹಲವಾರು ಘಟನೆಗಳಿಗೆ ಸಂಬಂಧಿಸಿದಂತೆ ಅವರ ಹೆಸರುಗಳನ್ನು ಎತ್ತಿ ತೋರಿಸಲಾಗಿದೆ. ಉದಾಹರಣೆಗೆ 2020ರ ದೆಹಲಿ ಹಿಂಸಾಚಾರದ ಕುರಿತು ಏಪ್ರಿಲ್ 2021ರಲ್ಲಿ, ದಿ ವೈರ್ ಈ ಕುರಿತಂತೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡುವ ಹಿಂಸಾಚಾರದ ಕರೆಗಳ ಬಗ್ಗೆ ವಿವರವಾದ ತನಿಖಾ ವರದಿಗಳನ್ನು ಪ್ರಕಟಿಸಿತು.

ಇದನ್ನೂ ಓದಿ: ದೆಹಲಿ ಹಿಂಸಾಚಾರದ ಅಸಲಿ ಪಿತೂರಿಗಾರರು ಯಾರು? ದೆಹಲಿ ಪೊಲೀಸ್ ನೋಡಲೊಲ್ಲದ ಭೀಕರ ಸತ್ಯಗಳನ್ನು ತೆರೆದಿಟ್ಟ ದಿ ವೈರ್ ವರದಿ

ಸೆಹ್ರಾವತ್ ಜನರನ್ನು ಬಹಿರಂಗವಾಗಿ ಪ್ರಚೋದಿಸುತ್ತಾನೆ. ಈತ, ಮುಸ್ಲಿಮರನ್ನು ಅಥವಾ ಸರ್ಕಾರವನ್ನು ಟೀಕಿಸುವವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಹಲವಾರು ವೀಡಿಯೊಗಳಿವೆ. ಪ್ರಶಾಂತ್ ಭೂಷಣ್ ಅವರಂತಹ “ರಾಷ್ಟ್ರ ವಿರೋಧಿಗಳು” ಎಂದಾದರೂ ಕಂಡರೆ ಅವರನ್ನು ನರಕಕ್ಕೆ ಕಳುಹಿಸುವುದಾಗಿ ಈ ಸೆಹ್ರಾವತ್‍ ಪ್ರತಿಜ್ಞೆ ಮಾಡಿದ್ದಾನೆ.

ಸೆಹ್ರಾವತ್ ಹಿಂಸಾವಾದಿ ‘ಮಹಾಕಾಲ್‍’ ತಂಡದ ನಾಯಕ. ಭಜರಂಗದಳದ ಜೊತೆ ಸಂಬಂಧ ಹೊಂದಿರುವೆನೆಂದು ಹೇಳಿಕೊಳ್ಳುತ್ತಾನೆ ಮತ್ತು ಹಿಂಸಾವಾದಿ ಹಿಂದುತ್ವದ ಬೋಧಕ ಯತಿ ನರಸಿಂಗಾನಂದ್ ಸರಸ್ವತಿಯವರ ಪ್ರೋತ್ಸಾಹವೂ ಈತನಿಗಿದೆ. ಸೆಹ್ರಾವತ್‌ನನ್ನು ಬಂಧಿಸಿದಾಗ, ನರಸಿಂಗಾನಂದ್ ಅವರು ಸೆಹ್ರಾವತ್‌ನ ಸಹಚರರೊಂದಿಗೆ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದರು. ‘ಸೆಹ್ರಾವತ್‍ ಶೀಘ್ರದಲ್ಲೇ ಹೊರ ಬರುತ್ತಾರೆ. ಅವರು ಹೊಸ ಶಕ್ತಿಯೊಂದಿಗೆ ಕೆಲಸಕ್ಕೆ ಮರಳುತ್ತಾರೆ” ಎಂದು ಹೇಳಿದರು.

ಯತಿ ಸರಸಿಂಗಾನಂದರ ದಾಸ್ನಾ ದೇವಸ್ಥಾನದಲ್ಲಿ ಗುಂಪೊಂದು ಸೇರಿತ್ತು. ಆ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಅಪ್ರಾಪ್ತ ಮುಸ್ಲಿಂ ಹುಡುಗನನ್ನು ಅಮಾನುಷವಾಗಿ ಥಳಿಸಲಾಗಿತ್ತು. ನಂತರದಲ್ಲಿ ಅಪ್‌ಲೋಡ್ ಮಾಡಿದ ಲೈವ್ ವಿಡಿಯೋದಲ್ಲಿ, ಸೆಹ್ರಾವತ್ ಮತ್ತು ಅವನ ಸಹಚರರು, ಮುಸ್ಲಿಮರನ್ನು ಕೊಲ್ಲುವ ಮತ್ತು ದಾಸ್ನಾದಿಂದ ಹೊರಹಾಕುವ ಬೆದರಿಕೆ ಹಾಕಿದ್ದರು.

ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರನ್ನೂ ಸೆಹ್ರಾವತ್ ನಿಂದಿಸಿ ಯುಪಿಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದ. ಲಾಂಬಾ ದೂರು ನೀಡಿದ ನಂತರ ಅವನನ್ನು ತಾತ್ಕಾಲಿಕವಾಗಿ ಬಂಧಿಸಲಾಯಿತು. ಆದರೆ, ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ರವೀಶ್ ಕುಮಾರ್ ವಿರುದ್ಧ ಮಾರಣಾಂತಿಕ ಬೆದರಿಕೆ ಹಾಕುವ ವೀಡಿಯೊದ ಕೊನೆಯಲ್ಲಿ, ದಾಸ್ನಾ ಜೈಲಿನಲ್ಲಿದ್ದಾಗ ಯುಪಿ ಪೊಲೀಸರು ಮತ್ತು ಯೋಗಿ ಆದಿತ್ಯನಾಥ್ ತನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಅಭಿನಂದಿಸಿದ್ದಾನೆ.

ಇದಕ್ಕೂ ಮೊದಲು ಸೆಹ್ರಾವತ್ ಮತ್ತು ಅವನ ಸಹವರ್ತಿ ಸುರೇಶ್ ರಜಪೂತ್ ಅಲಿಯಾಸ್‍ ‘ಹಿಂದೂ ಶೇರ್ ಬಾಯ್’ (ಯೂಟ್ಯೂಬ್‌ನಲ್ಲಿ 4.6 ಲಕ್ಷ ಅನುಯಾಯಿಗಳು) ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಮತ್ತು ಮಂಗೋಲ್‌ಪುರಿಯಲ್ಲಿನ ಮುಸ್ಲಿಮರನ್ನು ಕೊಲ್ಲುವ ಮತ್ತು ಆ ಪ್ರದೇಶದಿಂದ ಎತ್ತಂಗಡಿ ಮಾಡುವ ಬೆದರಿಕೆ ಹಾಕಲಾಗಿದೆ. ತೀವ್ರಗಾಮಿ ಹಿಂದುತ್ವ ನಾಯಕಿ ರಾಗಿಣಿ ತಿವಾರಿ ಅವರೊಂದಿಗೆ ಸುರೇಶ್ ರಜಪೂತ್ ದೆಹಲಿಯಲ್ಲಿ ‘ಲವ್ ಜಿಹಾದ್’ ವಿರುದ್ಧದ ರ್ಯಾಲಿಯಲ್ಲಿ ಭಾಗವಹಿಸಿ ಮುನ್ನಡೆಸಿದ್ದ. ಅಲ್ಲಿ ಮಾತಾಡಿದವರೆಲ್ಲ, “ಮುಸ್ಲಿಮರನ್ನು ಶೂಟ್ ಮಾಡಿ” ಮತ್ತು ಮುಸ್ಲಿಮರು ಕೊಲ್ಲಲ್ಪಟ್ಟಾಗ, ನಾವು ರಾಮ್ ರಾಮ್ ಎಂದು ಕೂಗುತ್ತೇವೆ’ ಎಂದು ದೆಹಲಿ ಪೊಲೀಸರ ಸಮ್ಮುಖದಲ್ಲೇ ಹೇಳಿದ್ದರು.

ಇಂಡಿಯಾ ಗೇಟ್ ಮತ್ತು ಜಂತರ್ ಮಂತರ್‌ನಲ್ಲಿ ನಡೆದ ಈ “ಲವ್ ಜಿಹಾದ್” ವಿರೋಧಿ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ಕೊಡುವ  ಹಲವಾರು ದ್ವೇಷ ಭಾಷಣಗಳನ್ನು ದಿ ವೈರ್ ದಾಖಲಿಸಿದೆ. “ಹಿಂದೂ ಪರಿವಾರ್” ಎಂಬ ಪೇಜ್‍ ಇಂತಹ ಸಭೆ, ಪ್ರತಿಭಟನೆಗಳನ್ನು ಲೈವ್‍ ಪ್ರಸಾರ ಮಾಡುತ್ತದೆ. ತನ್ನ ದ್ವೇಷ ಭಾಷಣ ನೀತಿಯನ್ನು ಉಲ್ಲಂಘಿಸಿರುವುದು ಕಂಡುಬಂದ ನಂತರ ಈ ಪುಟವನ್ನು ಯೂಟ್ಯೂಬ್ ಪ್ರಕಟಿಸಲಿಲ್ಲ. ಆದರೆ ಇದು ಇದೀಗ ಚಾನೆಲ್‌ ರೂಪದಲ್ಲಿ ಆನ್‌ಲೈನ್‌ಗೆ ಮರಳಿದೆ. ಈ ಪ್ರಚೋದನಾಕಾರಿ ವೀಡಿಯೊಗಳ ಥಂಬ್‍ನೇಲ್‍ಗಳು ಸಾವಿನ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳನ್ನು ಉಚ್ಚರಿಸುತ್ತವೆ.

ಸೆಹ್ರಾವತ್ ಜೈಲಿನಿಂದ ಬಿಡುಗಡೆಯಾದ ನಂತರ, ಅಲ್ಕಾ ಲಾಂಬಾರನ್ನು ಅವಾಚ್ಯ ಭಾಷೆಯಲ್ಲಿ ನಿಂದಿಸುವ ಮತ್ತು ಲಾಂಬಾರ ದೇಹದ ಬಗ್ಗೆ ಲೈಂಗಿಕ ಪದಗಳನ್ನು ಬಳಸಿ ನಿಂದಿಸುವ ಮತ್ತೊಂದು ವೀಡಿಯೊವನ್ನು ಪ್ರಸಾರ ಮಾಡಿದ್ದ. ಸೆಹ್ರಾವತ್ ಚಾನೆಲ್‌ನಲ್ಲಿ ಇರುವ ಗಾಂಧಿ ಕುಟುಂಬದ ವಿರುದ್ಧದ ವೀಡಿಯೊದಲ್ಲಿನ ಥಂಬ್‍ನೇಲ್‍ಗಳು, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಅತ್ಯಾಚಾರದ ಬೆದರಿಕೆ ಹಾಕುತ್ತವೆ.

ಯಾವುದೋ ಕಾರಣಕ್ಕಾಗಿ, ಯೂಟ್ಯೂಬ್ ಮತ್ತು ಫೇಸ್‌ಬುಕ್ ತಮ್ಮ ಸಮುದಾಯ ಮಾನದಂಡಗಳನ್ನು ನಿಯಮಿತವಾಗಿ ಉಲ್ಲಂಘಿಸುವ ಈ ಸರಣಿ ಅಪರಾಧಿಗಳ ವಿರುದ್ಧ ತ್ವರಿತ ಅಥವಾ ಗಂಭೀರ ಕ್ರಮ ತೆಗೆದುಕೊಳ್ಳುವುದಿಲ್ಲ. ಜುಮಾ ಮಸೀದಿಯ ಶಾಹಿ ಇಮಾಮ್ ಅವರು ತಮ್ಮ ಶುಕ್ರವಾರದ ಉಪದೇಶದಲ್ಲಿ ನರಸಿಂಗಾನಂದ್ ಅವರನ್ನು ಬಂಧಿಸುವಂತೆ ಕರೆ ನೀಡಿದ ನಂತರ, ನರಸಿಂಗಾನಂದ್ ಅವರ ಇಬ್ಬರು ಶಿಷ್ಯರಾದ ರಾಹುಲ್ ವರ್ಮಾ (ದಾಸ್ನಾದ ಯತಿ ನರಸಿಂಗಾನಂದರ ದೇವಸ್ಥಾನದ ಆವರಣದಿಂದ ಸೆಹ್ರಾವತ್ ಮಾಡಿದ ಪ್ರಚೋದನಾತ್ಮಕ ವೈರಲ್ ವೀಡಿಯೊದಲ್ಲಿ ಸಹ ಇವನಿದ್ದಾನೆ) ಮತ್ತು ಸುರೇಶ್ ರಜಪೂತ್ ತಡರಾತ್ರಿ ಜುಮಾ ಮಸೀದಿಗೆ ತೆರಳಿ, ಮಸೀದಿ ಆವರಣದ ಗೇಟ್‍ ಬಳಿ ನಿಂತು, ಮತ್ತೊಂದು ಹಿಂಸಾವಾದಿ ವಿಡಿಯೊವನ್ನು ಅಪ್ಲೋಡ್ ಮಾಡಿದರು. ವೀಡಿಯೊ ಪ್ರಸಾರವಾದ ನಂತರ ಯೂಟ್ಯೂಬ್  ಆ ಚಾನೆಲ್‍  ಅನ್ನು ಡಿಲೀಟ್‍ ಮಾಡಿತು. ಆದರೆ ವೀಡಿಯೊ ಮತ್ತು ಚಾನೆಲ್ ಈಗ ಆನ್‌ಲೈನ್‌ಗೆ ಮರಳಿವೆ.

ತನ್ನ ಗುರು ನರಸಿಂಗಾನಂದ್ ಅವರಂತೆ, ಸೆಹ್ರಾವತ್ ನಿರಂತರವಾಗಿ ಜನರನ್ನು ಪ್ರಚೋದಿಸುತ್ತಾನೆ ಮತ್ತು ಹಿಂಸಾಚಾರಕ್ಕೆ ಪ್ರೇರೇಪಿಸುತ್ತಾನೆ. ಆಶ್ಚರ್ಯಕರವೆಂದರೆ, ಮುಸ್ಲಿಮರ ವಿರುದ್ಧ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕುವ ಸೆಹ್ರಾವತ್‌ನ ವೀಡಿಯೊಗಳು ಶುಕ್ರವಾರವೇ ಅವನ ಚಾನೆಲ್‍ನಲ್ಲಿ ಲೈವ್‍ ಪ್ರಸಾರವಾಗುತ್ತವೆ! “ನಾಳೆ ನಾನು ಇತಿಹಾಸ ನಿರ್ಮಿಸಲಿದ್ದೇನೆ. ಎಲ್ಲಾ ಹಿಂದೂಗಳು ಇದೇ ರೀತಿ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ‘ಪಾಲ್ವಾಲ್‌ನಲ್ಲಿ ಶುಕ್ರವಾರ ನಮಾಜ್ ನಂತರ ಮಧ್ಯಾಹ್ನ 1,30ಕ್ಕೆ ಏನಾಗುತ್ತದೆ ಎಂಬುದನ್ನು ನೋಡಿ. ಅವರು ನಮ್ಮ ಗುರುಗಳಿಗೆ (ನರಸಿಂಗಾನಂದ್) ಅಗೌರವ ತೋರಿದ್ದಾರೆ. ನಾವು ನಮ್ಮ ಪಾದಗಳ ಅಡಿ ಅವರನ್ನು ಪುಡಿ ಪುಡಿ ಮಾಡುತ್ತೇವೆ. ನಮ್ಮ ಕತ್ತಿಗಳನ್ನು ಝಳಪಿಸಿ ಜೀವ ತೆಗೆಯುತ್ತೇವೆ. ಅಂದು ಏನಾಗಲಿದೆ ಎಂದು ಮುಸ್ಲಿಮರಿಗೆ ಊಹಿಸಲೂ ಸಾಧ್ಯವಿಲ್ಲ … ಮುಲ್ಲಾಗಳೇ ಕೇಳಿ, ಪಲ್ವಾಲ್ ನಂತರ ನಾವು ಭಿಲ್ವಾರಾಗೆ ಬರುತ್ತೇವೆ. ನಿಮಗೆ ಬೇಕಾದಷ್ಟು ಮದ್ದುಗುಂಡುಗಳನ್ನು ಇಟ್ಟುಕೊಳ್ಳಿ, ನಾವು ಬರುತ್ತಿದ್ದೇವೆ… ಯುದ್ಧ ಘೋಷಿಸಲಾಗಿದೆ. ಕೊಲ್ಲುವುದು ಅಥವಾ ಸಾಯುವುದು….(ಕಿಲ್‍ ಆರ್ ಡೈ)….

ಇದನ್ನೂ ಓದಿ: ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

ಮತ್ತೊಂದು ವೀಡಿಯೊದಲ್ಲಿ ಈ ವರ್ಷ ಎರಡು ಗುರಿಗಳನ್ನು ನಿಗದಿಪಡಿಸಿದ್ದಾಗಿ ಸೇಹ್ರಾವತ್‍ ಹೇಳಿದ್ದಾನೆ. ‘ಈ ವರ್ಷ ಎರಡು ವಿಕೆಟ್‌ಗಳು ಬೀಳಲಿವೆ. ಜೈಲಿನಲ್ಲಿರುವ ಕೆಲವು ಮಿತ್ರರು ಹೊರಬರುವುದನ್ನು ಕಾಯುತ್ತಿದ್ದೇವೆ.… ಪಾಕಿಸ್ತಾನ ಕೂಡ ಗೌರವ (ಶ್ರದ್ದಾಂಜಲಿ) ಸಲ್ಲಿಸುತ್ತದೆ’ ಎಂದು  ಹೇಳಿದ್ದಾನೆ. ಈ ಕೆಲವು ವೀಡಿಯೊಗಳನ್ನು ಅಳಿಸಲಾಗಿದ್ದರೂ, ದಿ ವೈರ್ ಅವನ ಪರ್ಯಾಯ ಖಾತೆಗಳಿಂದ ಅವುಗಳನ್ನು ಡೌನ್‌ಲೋಡ್ ಮಾಡಿದೆ. ಒಂದು ವೇಳೆ ಪೊಲೀಸರು ಈ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಲು ಬಯಸಿದರೆ ಅದಕ್ಕೆ ಬೇಕಾದ ಸಾಕ್ಷ್ಯಗಳೆಲ್ಲ ದಿ ವೈರ್ ಬಳಿಯಿವೆ.

ಬರಹಗಾರ ಮತ್ತು ವಿದ್ವಾಂಸ ಶುದ್ಧಭ್ರತ ಸೇನ್‌ಗುಪ್ತಾ ಈ ವ್ಯವಸ್ಥೆಯ ಕಾರ್ಯವಿಧಾನವನ್ನು (ಮೋಡಸ್‍ ಆಪರೆಂಡಿ) ಸೂಕ್ತವಾಗಿ ವಿವರಿಸುತ್ತಾರೆ. ‘ದಾಸ್ನಾ ದೇವಸ್ಥಾನ ಈ ಗುಂಪುಗಳ ಪ್ರಧಾನ ಕಚೇರಿ, ದೇವಸ್ಥಾನದ ಮುಖ್ಯಸ್ಥ ಯತಿ ನರಸಿಂಗಾನಂದ್ ಈ ಗುಂಪುಗಳ ನಾಯಕ, ಪೋಷಕ…’ ಎನ್ನುತ್ತಾರೆ.

“ಅವರ ಕಾರ್ಯತಂತ್ರ ದುರ್ಬಲ ಮುಸ್ಲಿಮರ ಮೇಲೆ ಕುಂಟು ನೆಪಗಳ ಮೇಲೆ ದಾಳಿಗಳನ್ನು ಪ್ರಚೋದಿಸುವುದು, ಈ ದಾಳಿಯ ಸುದ್ದಿಗಳನ್ನು ವೈರಲ್‍ ಮಾಡುವುದು, ಪೋಲಿಸ್ ಮತ್ತು ಆಡಳಿತದಿಂದ ಜರುಗುವ ನಾಮಕಾವಸ್ತೆ ಕ್ರಮಗಳನ್ನು ಎದುರಿಸುವುದು ಮತ್ತು ತಾವು ‘ಜಿಹಾದಿ ಭಯೋತ್ಪಾದನೆ’ಯ ಬಲಿಪಶುಗಳೆಂದು ನಿರೂಪಿಸುವುದು (ಇದು ಕೇವಲ ಮುಸ್ಲಿಮರ ಉಪಸ್ಥಿತಿಯನ್ನು ಸೂಚಿಸುವ ಅವರ ಆದ್ಯತೆಯ ವಿಧಾನವಾಗಿದೆ) ಹಾಗೂ ‘ಎಡಪಂಥೀಯ’ ಪಿತೂರಿ ಎಂದೂ ಪ್ರಚಾರ ಮಾಡುವುದು…..’

‘ಈ ಕಾರ್ಯತಂತ್ರದ ತರ್ಕವು, ಲಜ್ಜೆಗೆಟ್ಟ ದಾಳಿ ಬೆದರಿಕೆಯ ಸರಣಿ ಪ್ರದರ್ಶನಗಳನ್ನು (ವೈರಲ್‍ ವಿಡಿಯೊಗಳು)  ಪ್ರಚಾರ ಮಾಡುವುದು ಮತ್ತು ಅಸಂಬದ್ಧವಾಗಿ ಇದನ್ನು ಸಮರ್ಥಿ‍ಸಿಕೊಳ್ಳುವುದು. ವಾದ, ಸಮರ್ಥನೆ ಹೆಚ್ಚು ಅತಿರೇಕದಿಂದ ಕೂಡಿದಷ್ಟೂ ಅದು ಹೆಚ್ಚು ಬೆಂಬಲವನ್ನು  ಪಡೆಯುತ್ತದೆ. ಸಾಮಾನ್ಯವಾಗಿ, ವ್ಯವಸ್ಥಿತ ಭಯೋತ್ಪಾದನೆಗೆ ನೆಲವನ್ನು ಹದಗೊಳಿಸುವ ತರ್ಕ ಇದರ ಹಿಂದಿದೆ’ ಎನ್ನುತ್ತಾರೆ ಸೇನ್‍ ಗುಪ್ತ.

ಕಳೆದ ಕೆಲವು ವಾರಗಳಲ್ಲಿ, ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಹಲವಾರು ದ್ವೇಷದ ಅಪರಾಧಗಳು ನಡೆದಿವೆ. ಕಾನೂನು ಜಾರಿ ಸಂಸ್ಥೆಗಳ ಯಾವುದೇ ಬಲವಾದ ಪರಿಶೀಲನೆಯ ಅನುಪಸ್ಥಿತಿಯಲ್ಲಿ, ಸೆಹ್ರಾವತ್, ನರಸಿಂಗಾನಂದ ಮತ್ತು ಇತರರು ಬೆಂಕಿಯಿಡುವ ಮತ್ತು ದ್ವೇಷದ ಸಂದೇಶಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದನ್ನು ಮುಂದುವರೆಸಿದ್ದಾರೆ. ಇದು ವ್ಯಾಪಕ ಪ್ರೇಕ್ಷಕರನ್ನು ತಲುಪುತ್ತಿದೆ..

(ಈ ಗುಂಪುಗಳು ಬಳಸಿರುವ ಅವಾಚ್ಯ, ಅಸಹ್ಯ ಪದಗಳನ್ನು ತೆಗೆದು ಹಾಕಿದ್ದೇವೆ)

(ಅಲಿಶಾನ್‍ ಜಾಫ್ರಿ ಫ್ರೀ ಲ್ಯಾನ್ಸ್ ಪತ್ರಕರ್ತರು)

ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ; ಜಿಹಾದಿ ಎಂದು ಶಿರಡಿ ಸಾಯಿಬಾಬಾ ಮೂರ್ತಿ ಧ್ವಂಸಗೈದ ಸಂಘಪರಿವಾರದ ಕಾರ್ಯಕರ್ತರು- ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...