PC: Samayam

ಕೊರೊನಾ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಸಣ್ಣ ತಲೆನೋವು, ಸ್ವಲ್ಪ ಜ್ವರ ಅಥವಾ ಅರೆನಿದ್ರಾವಸ್ಥೆಯಿಂದ ಬಳಲುತ್ತಿರುವ ವರದಿಗಳು ಈವರೆಗೆ ಬಂದಿವೆ. ಆದರೆ, ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಬಳಿಕ ದೇಹ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿಯನ್ನು ಪಡೆದುಕೊಂಡಿದೆ ಎಂಬ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳದಲ್ಲಿ ವೈರಲ್ ಆಗಿದೆ.

ಕೊವೀಡ್ ಲಸಿಕೆ ತೆಗೆದುಕೊಂಡ ನಂತರ ನಾಸಿಕ್‌ನ 71 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿ ಕಾಂತಿಯ ಶಕ್ತಿ ಬಂದಿದೆ ಎನ್ನಲಾಗಿದ್ದು, ಅವರ ತೋಳು ಮತ್ತು ಕತ್ತಿನ ಮೇಲೆ ಕಬ್ಬಿಣ, ಸ್ಟೀಲ್ ವಸ್ತುಗಳು, ನಾಣ್ಯಗಳು ಅಂಟಿಕೊಳ್ಳುತ್ತಿರುವ ವಿಡಿಯೋವನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಹಂಚಿಕೊಂಡಿದ್ದಾರೆ.

ನಾಸಿಕ್‌ನ ಸಿಡ್ಕೊ ಪ್ರದೇಶದ ಶಿವಾಜಿ ಚೌಕ್‌ನಲ್ಲಿ ವಾಸವಿರುವ 71 ವರ್ಷದ ಅರವಿಂದ್ ಸೋನಾರ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೊವೀಡ್ ಲಸಿಕೆ ‘ಕೋವಿಶೀಲ್ಡ್’ ನ ಎರಡನೇ ಡೋಸ್ ತೆಗೆದುಕೊಂಡ ಮೂರು ದಿನದ ನಂತರ ಉಕ್ಕಿನ, ಕಬ್ಬಿಣದ ವಸ್ತುಗಳು ತನ್ನ ದೇಹಕ್ಕೆ ಅಂಟಿಕೊಳ್ಳುತ್ತಿವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಅಂಬೇಡ್ಕರ್‌ ಪೋಸ್ಟರ್‌ ತೆರವಿಗೆ ಆಕ್ಷೇಪಿಸಿದ ದಲಿತ ಯುವಕನ ಹತ್ಯೆ

 

View this post on Instagram

ಸೋಷಿಯಲ್ ಮೀಡಿಯಾದಲ್ಲಿ ಉಕ್ಕಿನ ವಸ್ತುಗಳು ದೇಹಕ್ಕೆ ಅಂಟಿಕೊಳ್ಳುತ್ತಿರುವ ಪ್ರಕರಣಗಳನ್ನು ನೋಡಿದ ನಂತರ, ಅರವಿಂದ್ ಕೂಡ ಪ್ರಯತ್ನಿಸಿದ್ದಾರೆ. ಆಗ ಕಬ್ಬಿಣ ಮತ್ತು ಉಕ್ಕಿನ ವಸ್ತುಗಳು, ನಾಣ್ಯಗಳು ಮತ್ತು ಚಮಚಗಳು ದೇಹಕ್ಕೆ ಅಂಟಿಕೊಳ್ಳುತ್ತಿರುವುದನ್ನು ನೋಡಿ ಆಶ್ಚರ್ಯ ಹೊಂದಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕಿಂಗ್ ಘಟಕ ‘ಪಿಐಬಿ ಫ್ಯಾಕ್ಟ್ ಚೆಕ್’ ಈ ಘಟನೆಗಳು “ಆಧಾರರಹಿತ” ಎಂದು ಕರೆದಿದೆ.

’ಲಸಿಕೆಗಳು ಮಾನವ ದೇಹದಲ್ಲಿ ಕಾಂತೀಯ ಪ್ರತಿಕ್ರಿಯೆಯನ್ನು ಉಂಟುಮಾಡಲು ಸಾಧ್ಯವಿಲ್ಲ. ಕೊರೊನಾ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಯಾವುದೇ ಲೋಹ ಆಧಾರಿತ ಪದಾರ್ಥಗಳನ್ನು ಹೊಂದಿರುವುದಿಲ್ಲ. ಲಸಿಕೆ ಪಡೆದ ಮೇಲೆ ಸ್ವಲ್ಪ ತಲೆನೋವು, ಇಂಜೆಕ್ಷನ್ ಕೊಟ್ಟ ಭಾಗದಲ್ಲಿ ನೋವು ಅಥವಾ ಸಣ್ಣ ಜ್ವರ ಮುಂತಾದ ಲಘು ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ” ಎಂದು ತಿಳಿಸಿದೆ.

ಇದನ್ನೂ ಓದಿ: ಹಿಂದೂ ಸಂಘಟನೆಗಳ ವಿರೋಧ: ಮಸೀದಿ, ಮದರಸಾಗಳಿಗೆ ಬಿಡುಗಡೆ ಮಾಡಿದ್ದ ಗೌರವಧನ ಹಿಂಪಡೆದ ಸರ್ಕಾರ

 

ಇನ್ನು, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ತನ್ನ ವೆಬ್‌ಸೈಟ್‌ನಲ್ಲಿ ’ಕೊವೀಡ್ ಲಸಿಕೆಗಳು ಚುಚ್ಚುಮದ್ದು ಪಡೆದ ಸ್ಥಳದಲ್ಲಿ  ಅಯಸ್ಕಾಂತೀಯ ಗುಣವನ್ನು ಉತ್ಪಾದಿಸುವ ಅಂಶಗಳನ್ನು ಒಳಗೊಂಡಿಲ್ಲ. ಎಲ್ಲಾ ಲಸಿಕೆಗಳು ಕಬ್ಬಿಣ, ನಿಕಲ್, ಕೋಬಾಲ್ಟ್, ಲಿಥಿಯಂ ಮತ್ತು ಅಪರೂಪದ ಭೂಮಿಯ ಮಿಶ್ರಲೋಹಗಳಂತಹ ಲೋಹಗಳಿಂದ ಮುಕ್ತವಾಗಿವೆ’ ಎಂದು ವಿವರಿಸಿದೆ. ಡಬ್ಲ್ಯುಎಚ್‌ಒ ಸಹ ಅದನ್ನೇ ಹೇಳಿದೆ.

ನಾಸಿಕ್‌ ವ್ಯಕ್ತಿಯ ದೇಹಕ್ಕೆ ಕಬ್ಬಿಣ, ಸ್ಟೀಲ್‌ ವಸ್ತುಗಳು ಅಂಟಿಕೊಳ್ಳುವುದಕ್ಕೂ, ಅವರು ಲಸಿಕೆ ಪಡೆದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಅವರ ಮನೆಗೆ ಹೋಗಿ ಪರಿಶೀಲಿಸಿದ್ದೇವೆ. ಅವರ ಆರೋಗ್ಯದ ಸೂಚ್ಯಂಕಗಳು ಸರಿಯಾಗಿವೆ. ಈ ಕುರಿತು ನಾವು ವಿವರವಾದ ವರದಿ ತಯಾರಿಸುತ್ತೇವೆ ಎಂದು ನಾಸಿಕ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ನಾನು ಈ ರೀತಿಯ ವಿಡಿಯೋ ನೋಡಿದ್ದೆ. ಹಾಗಾಗಿ ಎರಡೂ ಡೋಸ್ ಲಸಿಕೆ ಪಡೆದ ನಮ್ಮ ತಂದೆ ತಾಯಿಯ ಮೇಲೆ ಸ್ಟೀಲ್ ಚಮಚಗಳು ಮತ್ತು ನಾಣ್ಯಗಳನ್ನು ಅಂಟಿಸಲು ಯತ್ನಿಸಿದೆ. ನಮ್ಮ ತಂದೆಯ ದೇಹದ ಮೇಲೆ ಅವು ಅಂಟಿಕೊಂಡವು, ನಮ್ಮ ತಾಯಿಯ ದೇಹದ ಮೇಲಲ್ಲ” ಎಂದು ಸೋನಾರ್‌ರವರ ಮಗ ಜಯಂತ್ ತಿಳಿಸಿದ್ದಾರೆ.

ಈ ಕುರಿತು ವಿವರವಾದ ಅಧ್ಯಯನ, ಸಂಶೋಧನೆ ನಡೆಸಲು ಸ್ಥಳೀಯ ಕಾರ್ಯಕರ್ತರು, ವೈದ್ಯರು ಮುಂದಾಗಿದ್ದಾರೆ.


ಇದನ್ನೂ ಓದಿ: ಲಸಿಕೆಗಾಗಿ ಆನ್‌ಲೈನ್ ನೋಂದಣಿ: ಇಂಟರ್‌ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದ ರಾಹುಲ್ ಗಾಂಧಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here