ಮಸೀದಿ, ಮದರಸಾಗಳಿಗೆ ಬಿಡುಗಡೆ ಮಾಡಿದ್ದ ಗೌರವಧನ ಹಿಂಪಡೆದ ಸರ್ಕಾರ
PC: youtube

ದಕ್ಷಿಣ ಕನ್ನಡ ಜಿಲ್ಲೆಯ 41 ಮಸೀದಿಗಳು ಮತ್ತು ಮದರಸಾಗಳ ಮೌಲ್ವಿಗಳಿಗೆ ‘ತಸ್ತೀಕ್’ (ಗೌರವ) ಭತ್ಯೆ ಬಿಡುಗಡೆ ಮಾಡುವುದರ ವಿರುದ್ಧ ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, 764 ಹಿಂದೂಯೇತರ ದೇವಾಲಯಗಳಿಗೆ ಬಿಡುಗಡೆ ಮಾಡಿದ ಗೌರವ ಧನವನ್ನು ಹಿಂಪಡೆಯಲು ಧಾರ್ಮಿಕ ದತ್ತಿ ಇಲಾಖೆ ನಿರ್ಧರಿಸಿದೆ.

“ರಾಜ್ಯದಾದ್ಯಂತ 27,000 ಹಿಂದೂ ದೇವಾಲಯಗಳಲ್ಲಿ ತಸ್ತೀಕ್ ಮೊತ್ತವನ್ನು ಪಾವತಿಸಲಾಗುತ್ತಿದೆ. ಸರ್ಕಾರವು ಈ ಉದ್ದೇಶಕ್ಕಾಗಿ ಪ್ರತಿವರ್ಷ 133 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇತರ ಧರ್ಮಗಳ ಸುಮಾರು 764 ದೇಗುಲಗಳು ಸಹ ತಸ್ತೀಕ್ ಭತ್ಯೆ ಸ್ವೀಕರಿಸುತ್ತಿದ್ದವು. ಸಚಿವರ ನಿರ್ದೇಶನದ ಮೇರೆಗೆ ಇತರ ಧರ್ಮಗಳ 764 ದೇಗುಲಗಳಿಗೆ ಬಿಡುಗಡೆಯಾಗುತ್ತಿರುವ ಮೊತ್ತವನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು “ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳ ಮೌಲ್ವಿಗಳಿಗೆ ಆರ್ಥಿಕ ನೆರವು ಅಥವಾ ತಸ್ತಿಕ್ ನೀಡುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೀವ್ರವಾಗಿ ವಿರೋಧಿಸಿತು.

ಇದನ್ನೂ ಓದಿ: 10 ರಲ್ಲಿ8 ಭಾರತೀಯ ಅಮೆರಿಕನ್ನರು ಮೇಲ್ಜಾತಿ ಅಥವಾ ಸಾಮಾನ್ಯ ಜಾತಿಯೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ – ಸಮೀಕ್ಷೆ

“ಸರ್ಕಾರ ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು” ಎಂದು ವಿಎಚ್‌ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಂಗಳೂರಿನಲ್ಲಿ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ಆಗ್ರಹಿಸಿದ್ದರು.

ಕೊರೊನಾ ಲಾಕ್‌ಡೌನ್ ಕಾರಣ ದೇವಾಲಯದ ಅರ್ಚಕರಿಗೆ ತಸ್ತೀಕ್ ಭತ್ಯೆ ನೀಡುವ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿತ್ತು. ಆದರೆ, ದಕ್ಷಿಣ ಕನ್ನಡದ 41 ಮಸೀದಿಗಳು ಮತ್ತು ಮದರಸಾಗಳ ಮಾಲ್ವಿಗಳಿಗೆ ವಾರ್ಷಿಕ 48,000 ರೂ.ಗಳ ಗೌರವ ಭತ್ಯೆಯನ್ನು ಇಲಾಖೆಯ ಮೂಲಕ ಬಿಡುಗಡೆ ಮಾಡುವ ನಿರ್ಧಾರ ಸರಿಯಲ್ಲ. ದೇವಾಲಯಗಳಲ್ಲಿ ಸಂಗ್ರಹಿಸಿದ ಹಣವನ್ನು ದೇವಾಲಯಗಳ ಕಲ್ಯಾಣಕ್ಕೆ ಮತ್ತು ಹಿಂದೂಗಳಿಗಾಗಿ ಬಳಸಿಕೊಳ್ಳಬೇಕು” ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ಹಿಂದೂ ಧಾರ್ಮಿಕ ಮುಖಂಡರು ಮತ್ತು ಇತರ ಸಂಘಟನೆಗಳ ಆಕ್ರೋಶದ ಹಿನ್ನೆಲೆಯಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ವಿವಿಧ ಧರ್ಮಗಳ ದೇಗುಲಗಳಿಗೆ ಹಣವನ್ನು ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

’ತಸ್ತೀಕ್ ಭತ್ಯೆಯನ್ನು ಇತರ ಧರ್ಮಗಳ ಪೂಜಾ ಸ್ಥಳಗಳಿಗೆ ಬಳಸಲಾಗುತ್ತಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಇತರ ಧರ್ಮಗಳ ದೇವಾಲಯಗಳು ಸಂಬಂಧಪಟ್ಟ ಇಲಾಖೆಗಳ ಸಹಾಯವನ್ನು ಪಡೆಯಬೇಕು” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿಗೆ 100 ರೂ. ಕಳಿಸಿ ಗಡ್ಡ ಬೋಳಿಸಿಕೊಳ್ಳಿ ಎಂದ ಚಹಾ ಮಾರಾಟಗಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಹಣವನ್ನು ತೆಗೆದು ಯಡಿಯೂರಪ್ಪ ಮತ್ತು ಹಿಂದುತ್ವದ ನಾಯಿಗಳ ಎದೆಗೆ ಹಾಕಿ ಅಲ್ಪಸಂಖ್ಯಾತರಿಗೆ ನಿಮ್ಮ ಬೇವರ್ಸಿಗಳ ಹಣ ಬೇಡ ನಿಮ್ಮ ಸರ್ಕಾರದ ಪ್ಯಾಕೆಜ್ ಗಳಲ್ಲಿ ಅಲ್ಲ ಜನ ಸಾಮಾನ್ಯರ ಜೀವನ ಉದ್ದರ ಆಗಿರೋದು

LEAVE A REPLY

Please enter your comment!
Please enter your name here