10 ರಲ್ಲಿ8 ಭಾರತೀಯ ಅಮೆರಿಕನ್ನರು ಮೇಲ್ಜಾತಿ ಅಥವಾ ಸಾಮಾನ್ಯ ಜಾತಿಯೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ - ಸಮೀಕ್ಷೆ
PC: AFP (ಸಾಂದರ್ಭಿಕ ಚಿತ್ರ)

ಹಿಂದೂ ಜಾತಿಪದ್ದತಿಯ ಗುಂಪಿನೊಂದಿಗೆ ಗುರುತಿಸಿಕೊಳ್ಳುವ 10 ಜನರಲ್ಲಿ 8 ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ತಾವು ಸಾಮಾನ್ಯ ಅಥವಾ ಮೇಲ್ಜಾತಿಗೆ ಸೇರಿದವರು ಎಂದು ತಿಳಿಸುತ್ತಾರೆ ಎಂಬ ವಿಷಯವನ್ನು ಬುಧವಾರ ಪ್ರಕಟವಾದ ಭಾರತೀಯ ಅಮೆರಿಕನ್ನರ ವರ್ತನೆ ಕುರಿತು ನಡೆಸಿರುವ ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಇಂಡಿಯನ್ ಅಮೇರಿಕನ್ ಆಟಿಟ್ಯೂಡ್ಸ್ ಸರ್ವೆ (IAAS) ಯನ್ನು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್-ಎಸ್ಎಐಎಸ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಮೀಕ್ಷೇ ನಡೆಸಲಾಗಿದೆ.

IAAS ಸಮೀಕ್ಷೆಯಲ್ಲಿ 1,200 ಭಾರತೀಯ ಅಮೆರಿಕನ್ನರ ಪ್ರತಿಕ್ರಿಯೆಗಳು ಸೇರಿವೆ. 632 ಮಂದಿ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ, ಕೇವಲ 293 ಮಂದಿ ಮಾತ್ರ ಜಾತಿಯನ್ನು ತಿಳಿಸಿದ್ದಾರೆ. ಈ ಗುಂಪಿನಲ್ಲಿ, ಶೇಕಡಾ 83 ರಷ್ಟು ಜನರು ತಮ್ಮನ್ನು ಸಾಮಾನ್ಯ ಅಥವಾ ಮೇಲ್ಜಾತಿ ಎಂದು ವರ್ಗೀಕರಿಸಿಕೊಂಡಿದ್ದಾರೆ, ಶೇಕಡಾ 16 ಪ್ರತಿಶತದಷ್ಟು ಜನರು ಹಿಂದುಳಿದ ವರ್ಗದ (OBC) ಸದಸ್ಯರೆಂದೂ, ಶೇಕಡಾ 1 ರಷ್ಟು ಪರಿಶಿಷ್ಟ ಪಂಗಡ (ST) ಅಥವಾ ಪರಿಶಿಷ್ಟ ಜಾತಿ (ST) ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಟ, ಹೋರಾಟಗಾರ ಚೇತನ್ ವಿರುದ್ಧ ದೂರು: IStandWithChetanAhimsa ಎಂದ ನೆಟ್ಟಿಗರು

ದಲಿತ ಉದ್ಯೋಗಿಯೊಬ್ಬರನ್ನು ಆತನ ಜಾತಿಯ ಆಧಾರದ ಮೇಲೆ ಭಾರತೀಯ ಅಮೆರಿಕನ್ ಕಂಪನಿ ವ್ಯವಸ್ಥಾಪಕರು ಕಿರುಕುಳ ನೀಡಿದ್ದಾರೆ ಎಂದು ಜುಲೈ 2020 ರಲ್ಲಿ, ಕ್ಯಾಲಿಫೋರ್ನಿಯಾ ರಾಜ್ಯವು ನೆಟ್‌ವರ್ಕ್ ಗೇರ್ ತಯಾರಕ ಸಿಸ್ಕೋ ಸಿಸ್ಟಮ್ಸ್ ಇಂಕ್ ಸಂಸ್ಥೆ ವಿರುದ್ಧ ಮೊಕದ್ದಮೆ ಹೂಡಿತ್ತು. ಈ ಉದಾಹರಣೆಯನ್ನು ಉದಾಹರಿಸಿ, ಐಎಎಎಸ್ ಸಮೀಕ್ಷೆಯು “ಅಮೆರಿಕಾಕ್ಕೆ ವಲಸೆ ಬಂದಿರುವ ಸಮುದಾಯದೊಳಗೆ, ಹಿಂದೂ ಧರ್ಮಕ್ಕೆ ಸಂಬಂಧಿಸಿದ ಜಾತಿ ಶ್ರೇಣಿಕರಣ ಮತ್ತು ಸ್ಥಾನಮಾನದ ಗುರುತಿನ ಜೊತೆಗೆ ಜಾತಿಯ ಭದ್ರವಾದ ಸ್ವರೂಪವಿದೆ” ಎಂದು ತಿಳಿಸಿದೆ.

ಮುಖ್ಯವಾಗಿ ಚರ್ಮದ ಬಣ್ಣಗಳ ಆಧಾರದ ಮೇಲೆ, ಇಬ್ಬರು ಭಾರತೀಯ ಅಮೆರಿಕನ್ನರಲ್ಲಿ ಒಬ್ಬರು ತಾರತಮ್ಯವನ್ನು ಎದುರಿಸುತ್ತಿದ್ದಾರೆಂದು ಕಳೆದ ಒಂದು ವರ್ಷದಲ್ಲಿ ನಡೆಸಿದ ಸಮೀಕ್ಷೆ ಆಧಾರದಲ್ಲಿ ವರದಿ ಮಾಡಿದೆ.

ಭಾರತೀಯರು ಎಂಬ ಗುರುತಿಗೆ ಸಂಬಂಧಿಸಿದಂತೆ, ಶೇಕಡಾ 88 ರಷ್ಟು ಹಿಂದೂಗಳು ತಮಗೆ ಭಾರತೀಯರು ಎನಿಸಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

“ಭಾರತೀಯ ಅಮೆರಿಕನ್ನರ ಈ ಹೇಳಿಕೆಯು ಬಹುಶಃ ಭಾರತದ ಪ್ರಸ್ತುತ ರಾಜಕೀಯ ವಾತಾವರಣದ ಪ್ರತಿಬಿಂಬವಾಗಿದೆ” ಎಂದು ಸಮೀಕ್ಷೆ ಹೇಳಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯನ್ನು ಅಂಗೀಕರಿಸಲು ಹಿಂದೂ ಭಾರತೀಯ ಅಮೆರಿಕನ್ನರು ಇಷ್ಟಪಡುತ್ತಾರೆ ಎಂದು ಸಮೀಕ್ಷಾ ವರದಿ ಹೇಳಿದೆ.


ಇದನ್ನೂ ಓದಿ: ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here