ನಟ, ಹೋರಾಟಗಾರ ಚೇತನ್ ವಿರುದ್ಧ ದೂರು: ಹೋರಾಟ ಬ್ರಾಹ್ಮಣ್ಯದ ವಿರುದ್ಧ ಬ್ರಾಹ್ಮಣರ ವಿರುದ್ಧವಲ್ಲ ಎಂದ ನಟ

ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ್ ’ಬ್ರಾಹ್ಮಣ್ಯ’ ಎಂಬ ಪದ ಬಳಸಿರುವುದರ ವಿರುದ್ಧ ಬ್ರಾಹ್ಮಣ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಸಮುದಾಯದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದೆ.

’ಚಿತ್ರನಟ ಚೇತನ್ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ಅವಮಾನ ಮಾಡಿರುತ್ತಾರೆ. ಇದರಿಂದ ಸಮುದಾಯ ಮಾನಸಿಕವಾಗಿ ನೊಂದಿದ್ದು, ರಾಜ್ಯಾದ್ಯಂತ ವಿವಿಧ ಸಂಗ ಸಂಸ್ಥೆಗಳು ನನಗೆ ಮನವಿ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನಗರ ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಚೇತನ್ ವಿರುದ್ಧ ಬ್ರಾಹ್ಮಣ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬ್ರಾಹ್ಮಣರ ಕ್ಷಮೆ ಕೇಳಲು ಚೇತನ್ ಯಾವ ತಪ್ಪು ಮಾಡಿಲ್ಲ ಎಂದಿದ್ದಾರೆ. #IStandWithChetanAhimsa ಎಂಬ ಹ್ಯಾಶ್‌ಟ್ಯಾಗ್ ಹಾಕಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು- ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!

ನಟ ಚೇತನ್ ಪೋಸ್ಟ್‌ನಲ್ಲಿ ಇದ್ದದ್ದು ಏನು…?

ಜೂನ್ 6 ರಂದು ನಟ ಚೇತನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಪೆರಿಯಾರ್‌ ಅವರ ಹೇಳಿಕೆಗಳನ್ನು ಕೋಟ್ ಮಾಡಿ, ಪೋಸ್ಟ್ ಮಾಡಿದ್ದರು.
” ‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ… ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ — ಅಂಬೇಡ್ಕರ್
‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪ್ರಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ’- ಪೆರಿಯಾರ್

ಇಬ್ಬರ ಹೇಳಿಕೆಗಳ ಜೊತೆಗೆ #Brahminism #Ambedkar #Periyar ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು.

ಇದನ್ನೂ ಓದಿ: ಕೊರೊನಾದಿಂದ ಬಾಧಿತರಾದ 30,000 ಮಕ್ಕಳು : ಮಕ್ಕಳ ಹಕ್ಕು ಆಯೋಗದಿಂದ ಸುಪ್ರೀಂಗೆ ಮಾಹಿತಿ

ಹೋರಾಟಗಾರ, ನಟ ಚೇತನ್ ವಿರುದ್ಧ ದೂರು ನೀಡಿರುವುದಕ್ಕೆ ಹಲವು ಮಂದಿ ಅಸಮಾಧಾನ, ಟೀಕೆ ವ್ಯಕ್ತಪಡಿಸಿದ್ದಾರೆ.

’ಚೇತನ್ ಅವರು ತಮ್ಮ ಹೋರಾಟ ಬ್ರಾಹ್ಮಣ್ಯದ ವಿರುದ್ಧ ಹೊರತು ಬ್ರಾಹ್ಮಣರ ವಿರುದ್ಧ ಅಲ್ಲ ಅಂತ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಅವರೆಲ್ಲೂ ಜನಾಂಗದ ನಿಂದನೆ ಮಾಡಿಲ್ಲ. ಆದರೂ ಅವರೇಕೆ ಕ್ಷಮೆ ಕೇಳಬೇಕು’ ಎಂದು ’ಹೊಸತು’ ಟ್ವಿಟರ್‌ ಖಾತೆ ಬಳಕೆದಾರರು ಪ್ರಶ್ನಿಸಿದ್ದಾರೆ.

“ಬ್ರಾಹ್ಮಣ್ಯತ್ವದಿಂದ ಭಾರತದಲ್ಲಿ ಜಾತಿ, ಅಸಮಾನತೆ, ಮೂಲಭೂತವಾದ ಹುಟ್ಟು ಹಾಕಿ ಜಾತಿ ಕೇಳಿ ಇಂದಿಗೂ ಮೂತ್ರ ಮಾಡುವ ಬ್ರಾಹ್ಮಣರೇ ನಮಗೆ ನೀವು ಕ್ಷಮೆ ಕೇಳಿ! ನಮ್ಮದು ಕ್ಷಮೆ ಕೇಳುವ ವಂಶ ಅಲ್ಲ, ದ್ರಾವಿಡ ವಂಶ, ಬಸವಣ್ಣನ ವಂಶ, ಅಂಬೇಡ್ಕರ್ ವಂಶ!” ಎಂದು ಆಜಾದ್ ಸಮಾಜ್ ಪಾರ್ಟಿ ಟ್ವೀಟ್ ಮಾಡಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕೊರೋನಾ ಲಾಕ್‌ಡೌನ್‌ ಹೊಡತಕ್ಕೆ ಬಾಗಿಲು ಮುಚ್ಚಿದ 8000 PGಗಳು

ಇನ್ನು ನಟನ ವಿರುದ್ಧ ದೂರು ದಾಖಲಿಸಿರುವ ಹೆಚ್ ಎಸ್ ಸಚ್ಚಿದಾನಂದ ಮೂರ್ತಿ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಕಾವ್ಯ ಅಚ್ಯುತ್ ದೂರು ನೀಡಿದ್ದಾರೆ.

ನಟ ಚೇತನ್ ಅವರ ವಿರುದ್ದ ಬ್ರಾಹ್ಮಣರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಎಂಬವರು ಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಯ ಹೆಸರು ಮತ್ತು ಸರ್ಕಾರಿ ಮುದ್ರೆ/ಲಾಂಛನವನ್ನು ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಅಪರಾಧ ಮಾಡಿದ್ದಾರೆ. ಸಚ್ಚಿದಾನಂದ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಕಾವ್ಯ ಅಚ್ಯುತ್ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.


ಇದನ್ನೂ ಓದಿ: ಸ್ಮಶಾನ ಕಾರ್ಮಿಕರ ಸಮಸ್ಯೆ ಬಗೆಹರಿಸಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದ ನಟ ಚೇತನ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

4 COMMENTS

  1. ಮನುವಾದಿಗಳಿಗೆ ಅದಿಕಾರದ ಮದದಿಂದಾಗಿ ಪಿತ್ತ ನೆತ್ತಿಗೇರಿರುವಂತಿದೆ. ವಿಚಾರವಾದಿಗಳ ವಿರುದ್ಧ ದೂರು ಕೊಟ್ಟಾಕ್ಶಣ ವಿಚಾರವಾದ ಅಳಿಯುವುದಿಲ್ಲ ಅಥವಾ ದುರ್ಬಲಗೊಳ್ಳುವುದಿಲ್ಲ, ಬದಲಿಗೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ.
    ಜೈಬೀಮ್.

  2. ಪರದೇಶದಿಂದ ಬಂದಿರೋ ಬ್ರಾಹ್ಮಣರಿಗೆ ಇಷ್ಟು ಕೊಬ್ಬಿರಬೇಕಾದ್ರೆ ನಾವು ಈ ದೇಶದ ಮೂಲನಿವಾಸಿಗಳು ದ್ರಾವಿಡರು ನಮಗೆಷ್ಟಿರಬೇಡ ಚೇತನ್ ಸರ್ ಜೊತೆ ನಾವಿದೀವಿ ಅದೆಷ್ಟೇ ಬ್ರಾಹ್ಮಣರು ಬಂಧರೂ ನಮ್ಮನ್ನು ಏನು ಕಿತ್ಕೊಳ್ಳಾಕ್ಕಾಗಲ್ಲ. ಜೈ ಭೀಮ್ ಜೈ ಟಿಪ್ಪು ಸುಲ್ತಾನ್

LEAVE A REPLY

Please enter your comment!
Please enter your name here