ಕೊರೊನಾದಿಂದ 30,000 ಮಕ್ಕಳು ಬಾಧಿತರು: ಮಕ್ಕಳ ಹಕ್ಕು ಆಯೋಗದಿಂದ ಸುಪ್ರೀಂಗೆ ಮಾಹಿತಿ
PC: The Hindu

ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಸುಮಾರು 30,000 ಮಕ್ಕಳು ಅನಾಥರಾಗಿದ್ದಾರೆ, ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (NCPCR) ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ವಿವಿಧ ರಾಜ್ಯಗಳು ಸಲ್ಲಿಸಿದ ಮಾಹಿತಿಯ ಪ್ರಕಾರ 30,071 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದಿದ್ದಾರೆ.

ಒಟ್ಟು, 26,176 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ, 3,621 ಮಕ್ಕಳು ಅನಾಥರಾಗಿದ್ದಾರೆ ಮತ್ತು 274 ಮಕ್ಕಳನ್ನು ಹೊರದಬ್ಬಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

2020 ರ ಏಪ್ರಿಲ್ 1 ರಿಂದ 2021 ರ ಜೂನ್ 5 ರವರೆಗೆ ತಾಯಿ ಅಥವಾ ತಂದೆಯನ್ನು ಕಳೆದುಕೊಂಡಿರುವುದು, ಮತ್ತು ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ರಾಜ್ಯವಾರು ಮಾಹಿತಿ ದೊರೆತಿದೆ ಎಂದು ಆಯೋಗವು ತಿಳಿಸಿದೆ. ಈ ಪೋಷಕರ ಸಾವಿನ ಕೊರೊನಾ ಮಾತ್ರವಲ್ಲ ಬೇರೆ ಕಾರಣಗಳು ಇವೆ ಎಂದು ತಿಳಿಸಿದೆ.

ಮಹಾರಾಷ್ಟ್ರ ಕೊರೊನಾದಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದು, ಕಳೆದ ವರ್ಷ ಏಪ್ರಿಲ್ 1 ರಿಂದ 7,084 ಮಕ್ಕಳು ಕೊರೊನಾ ಮಾರಕ ವೈರಸ್‌ಗೆ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದಿದೆ.

ಇದನ್ನೂ ಓದಿ: ‘ಟ್ವಿಟರ್‌ ವಿರುದ್ದ ಹೋರಾಡುವ ಬದಲು ವ್ಯಾಕ್ಸಿನೇಷನ್‌ ಕಡೆ ಗಮನಹರಿಸಿ’ – ಒಕ್ಕೂಟ ಸರ್ಕಾರಕ್ಕೆ ಮಹಾರಾಷ್ಟ್ರ

ಉತ್ತರ ಪ್ರದೇಶ (3,172), ರಾಜಸ್ಥಾನ (2,482), ಹರಿಯಾಣ (2,438), ಮಧ್ಯಪ್ರದೇಶ (2,243), ಆಂಧ್ರ ಪ್ರದೇಶ (2,089), ಕೇರಳ (2,002), ಬಿಹಾರ (1,634) ಮತ್ತು ಒಡಿಶಾ (1,073) ರಾಜ್ಯಗಳಲ್ಲಿ ಇಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂದು ಎನ್‌ಸಿಪಿಸಿಆರ್ ಹೇಳಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 7,084 ಮಕ್ಕಳಲ್ಲಿ 6,865 ಮಕ್ಕಳು ಒಬ್ಬ ಪೋಷಕರನ್ನು (ತಂದೆ ಅಥವಾ ತಾಯಿ) ಕಳೆದುಕೊಂಡಿದ್ದಾರೆ. 217 ಮಂದಿ ಅನಾಥರಾಗಿದ್ದಾರೆ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ತ್ಯಜಿಸಲಾಗಿದೆ. ಇತ್ತ ಮಧ್ಯಪ್ರದೇಶದಲ್ಲಿ 226 ಮಕ್ಕಳನ್ನು ಬಿಟ್ಟು ಬಿಡಲಾಗಿದ್ದು, ದೇಶದಲ್ಲಿ ಅಗ್ರಸ್ಥಾನದಲ್ಲಿದೆ.

ಅನಾಥರಾಗಿರುವವರಲ್ಲಿ 15,620 ಮಂದಿ ಬಾಲಕರು, 14,447 ಮಂದಿ ಬಾಲಕಿಯರು ಮತ್ತು 4 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಇದ್ದಾರೆ ಎಂದು ಎನ್‌ಸಿಪಿಸಿಆರ್ ತಿಳಿಸಿದೆ. ಇದರಲ್ಲಿ 11,815 ಮಂದಿ 8 ರಿಂದ 13 ವರ್ಷ ವಯಸ್ಸಿನವರಾಗಿದ್ದಾರೆ.

2,902 ಮಂದಿ 3 ವರ್ಷದೊಳಗಿನ ಮಕ್ಕಳು, 4-7 ವರ್ಷ ವಯಸ್ಸಿನವರು 5,107 ಮತ್ತು 14 ರಿಂದ 15 ವರ್ಷ ವಯಸ್ಸಿನವರು 4,908 ಮಂದಿ ಇದ್ದರೆ, 16 ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರು 5,339 ಮಂದಿಯಿದ್ದಾರೆ ಎಂದು ಮಾಹಿತಿ ನೀಡಿದೆ.

ಅನಾಥ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ನೆರವು ನೀಡಲು ಬಯಸುತ್ತೇವೆ ಎಂದು ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಡೇಟಾ ಸಂಗ್ರಹಣೆಯಲ್ಲಿ ಹಲವು ಜನರು ಮತ್ತು ಸಂಸ್ಥೆಗಳು ಭಾಗಿಯಾಗಿವೆ. ಜುವೆನೈಲ್ ಜಸ್ಟೀಸ್ ಆಕ್ಟ್, 2015 ರ ಅಡಿಯಲ್ಲಿ ನೀಡಲಾದ ಮಾನದಂಡಗನ್ನು ಅನುಸರಿಸದೆ ಈ ಸಂಸ್ಥೆಗಳು ಅನಾಥ ಮಕ್ಕಳನ್ನು ಹಲವು ಕುಟುಂಬಗಳಿಗೆ ದತ್ತು ನೀಡುತ್ತಿದ್ದಾರೆ ಎಂದು ಎನ್‌ಸಿಪಿಸಿಆರ್ ಆರೋಪಿಸಿದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ಲಾಕ್‌ಡೌನ್‌ ಹೊಡತಕ್ಕೆ ಬಾಗಿಲು ಮುಚ್ಚಿದ 8000 PGಗಳು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here