ಕೊರೋನಾ ಮತ್ತು ಲಾಕ್‌ಡೌನ್‌ ಸಮಾಜದ ಎಲ್ಲಾ ವರ್ಗಗಳಿಗೂ ವ್ಯಾಪಕ ಹೊಡೆತವನ್ನು ನೀಡಿದೆ. ಅದರಲ್ಲೂ ಹೊಟೆಲ್‌, ಸಾರಿಗೆ ಮತ್ತು PGಗಳ ಕಥೆ ಹೇಳತೀರದು. ಕೊರೋನಾ ಸಾಂಕ್ರಾಮಿಕದ ಹೊಡೆತಕ್ಕೆ ಎಲ್ಲಾ ಸಣ್ಣ ಪುಟ್ಟ ವ್ಯವಹಾರ ವಹಿವಾಟುಗಳು ಮುಚ್ಚಿಹೋಗಿವೆ. ಇದರಲ್ಲಿ ಮುಖ್ಯವಾಗಿ ಪೇಯಿಂಗ್‌ ಗೆಸ್ಟ್‌ಗಳಿಗೆ ಲಾಕ್‌ ಡೌನ್‌ ತೀವ್ರ  ನಷ್ಟವನ್ನುಂಟು ಮಾಡಿದೆ.

ಹೆಚ್ಚಾಗಿ PGಯಲ್ಲಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳು ನೆಲೆಸುತ್ತಾರೆ. ಆದರೆ 2021 ರ ಕೊರೋನಾ ಮೊದಲ ಅಲೆಯಿಂದಲೂ ಆನ್‌ಲೈನ್‌ ಕ್ಲಾಸ್‌ಗಳು ಮತ್ತು ವರ್ಕ್‌ ಫ್ರಮ್‌ ಹೋಮ್‌ ನಡೆಯುತ್ತಿರುವುದರಿಂದ ಬೆಂಗಳೂರಿನ ಹೆಚ್ಚಿನ ಪಿ.ಜಿಗಳು ಮುಚ್ಚಿಹೋಗಿವೆ. ಕಳೆದ 1 ವರ್ಷದ ಅವಧಿಯಲ್ಲಿ ಬೆಂಗಳೂರು ನಗರ ಒಂದರಲ್ಲೇ 8000 ಕ್ಕೂ ಹೆಚ್ಚು ಪೇಯಿಂಗ್‌ ಗೆಸ್ಟ್‌ಗಳು ಬಂದ್‌ ಆಗಿವೆ.

ಬೆಂಗಳೂರು PG ಅಸೋಸಿಯೇಷನ್‌ ಹೇಳುವ ಪ್ರಕಾರ ನಗರದಲ್ಲಿರುವ 12000 PGಗಳಲ್ಲಿ ಕೇವಲ 4000 PGಗಳು ಮಾತ್ರ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿವೆ. ಉಳಿದ 8 ಸಾವಿರ PGಗಳು ಅತಿಥಿಗಳಿಲ್ಲದೇ ನಿಂತು ಹೋಗಿವೆ. ಉಳಿದ 4 ಸಾವಿರ PG ಗಳು ಸಹ ಮುಚ್ಚಿಹೋಗುವ ಹಂತಕ್ಕೆ ಬಂದಿವೆ. 2021 ರ ಜನವರಿ ತಿಂಗಳಿನಲ್ಲಿ ನಗರದ PG ಇಂಡಸ್ಟ್ರಿ ಚೇತರಿಕೆಯನ್ನು ಕಾಣುವ ಲಕ್ಷಣವನ್ನು ತೋರಿಸಿತ್ತು. ಆದರೆ ಕೊರೋನಾ ಎರಡನೇ ಅಲೆಯ ಪರಿಣಾಮವಾಗಿ PGಗಳು ಸದ್ಯಕ್ಕೆ ಚೇತರಿಕೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಬೆಂಗಳೂರು PG ಅಸೋಸಿಯೇಷನ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಪಣಂಬುರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ PGಗಳು ಮುಚ್ಚಿರುವುದರಿಂದ ಸರಿ ಸುಮಾರು 30,000 ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ, ಮಾರತಳ್ಳಿ, ವೈಟ್‌ಫೀಲ್ಡ್‌ ಭಾಗಗಳಲ್ಲಿರು ಐಟಿ ಕಂಪನಿಗಳು ಕೊರೋನಾ ಮೊದಲನೇ ಅಲೆಯ ಪ್ರಾರಂಭದಲ್ಲಿ ದೀರ್ಘಾವಧಿಯ ವರ್ಕ್‌ ಫ್ರಮ್‌ ಹೋಮ್‌ ನೀತಿಯನ್ನು ಜಾರಿಗೊಳಿಸಿದವು. ಅದರ ಪರಿಣಾಮ ಸಾವಿರಾರು ಐಟಿ ಉದ್ಯೋಗಿಗಳು ಏಕಾ ಏಕಿ PGಗಳನ್ನು ಖಾಲಿ ಮಾಡಿ ಹೊರಟರು. ಕೆಲವರು ತಮ್ಮ ವಸ್ತುಗಳನ್ನು ಬಿಟ್ಟು ಕೋಣೆಗಳಿಗೆ ಬೀಗ ಹಾಕಿ ಹೊರಟರು. ಇದರಿಂದ PGಗಳನ್ನು ಹೋಮ್‌ ಕ್ವಾರಂಟೈನ್‌ ಸೆಂಟರ್‌ಗಳಾಗಿ ಮಾರ್ಪಡಿಸಲು ಸಾಧ್ಯವಾಗಿಲ್ಲ ಎಂದು PG ಮಾಲೀಕರೊಬ್ಬರು ತಿಳಿಸಿದರು.

ಇದನ್ನೂ ಓದಿ : ಸಮಗ್ರ ಪ್ಯಾಕೇಜ್ ನೀಡದಿದ್ದರೆ ಸಿಎಂ ನಿವಾಸದ ಮುಂದೆ ಖಾಲಿ ಚೀಲ ಹಿಡಿದು ಪ್ರತಿಭಟನೆ: ಜನಾಗ್ರಹ ಆಂದೋಲನ ಎಚ್ಚರಿಕೆ

ಕೆಲವೇ ಕೆಲವರಿಗಾಗಿ PGಯನ್ನು ನಡೆಸಲು ಸಾಧ್ಯವಿಲ್ಲ. ನಮ್ಮ ಉದ್ಯೋಗಿಗಳಿಗೆ ವೇತನ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸರ್ಕಾರದ ಅನೇಕ ಇಲಾಖೆಗಳ ಜೊತೆ ನಾವು ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ. ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ  PG ವಲಯವನ್ನು ಅಧಿಕೃತ ಉದ್ದಿಮೆಯಾಗಿ ಪರಿಗಣಿಸಿ ಸಹಾಯ ಮಾಡಬೇಕು ಎಂದು ಬೆಂಗಳೂರು PG ಅಸೋಸಿಯೇಶನ್ಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಪಣಂಬೂರ್‌ ತಿಳಿಸಿದ್ದಾರೆ.


ಇದನ್ನೂ ಓದಿ: ‘ಟ್ವಿಟರ್‌ ವಿರುದ್ದ ಹೋರಾಡುವ ಬದಲು ವ್ಯಾಕ್ಸಿನೇಷನ್‌ ಕಡೆ ಗಮನಹರಿಸಿ’ – ಒಕ್ಕೂಟ ಸರ್ಕಾರಕ್ಕೆ ಮಹಾರಾಷ್ಟ್ರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here