ಮಸ್ಕಿ ಕ್ಷೇತ್ರದ ಬರಪೀಡಿತ ನೂರಾರು ಹಳ್ಳಿಗಳ ರೈತರು ನಾರಾಯಣಪುರ ಬಲದಂಡೆ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಜಾರಿಗಾಗಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 201 ದಿನ ಪೂರೈಸಿದೆ.

1.72 ಲಕ್ಷ ಹೆಕ್ಟೇರ್ ಭೂಮಿಗೆ ಕೃಷ್ಣಾ ನೀರು ಕೊಡಿ ಎಂಬುದು 107 ಹಳ್ಳಿಗಳ, ಮುಖ್ಯವಾಗಿ 58 ಹಳ್ಳಿಗಳ ಹಕ್ಕೊತ್ತಾಯ. ಇದಕ್ಕಾಗಿ ದಶಕಗಳ ಹೋರಾಟ ನಡೆದಿದೆ. ಈ ವರ್ಷ ಕಳೆದ 200 ದಿನಗಳಿಂದ ನಿರಂತರವಾಗಿ ಈ ರೈತರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಏನಿದು NRBC_5A ಯೋಜನೆ?

ಮಸ್ಕಿ ತಾಲ್ಲೂಕಿನ ಬರಪೀಡಿತ 58 ಹಳ್ಳಿಗಳ ಗ್ರಾಮಸ್ಥರು, ರೈತರು ಕಳೆದ 12 ವರ್ಷಗಳಿಂದ ತಮ್ಮ ಗ್ರಾಮಕ್ಕೆ ನೀರಾವರಿ ಯೋಜನೆ ಬೇಕೆಂದು ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ನೀರಾವರಿ ಸಂಘ ಕಟ್ಟಿ ತಮ್ಮೂರಿಗೆ ಕಾಲುವೇ ನೀರು ಬಿಡಬೇಕೆಂದು ನೂರಾರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ 12 ವರ್ಷಗಳ ಅವಧಿಯಲ್ಲಿ ನಾಲ್ಕು ಸರ್ಕಾರಗಳು ಬದಲಾಗಿವೆ. ಎಲ್ಲಾ ಸರ್ಕಾರಗಳು ಭರವಸೆ ನೀಡಿವೆಯೇ ಹೊರತು ಒಬ್ಬರು ಕಾರ್ಯರೂಪಕ್ಕೆ ತಂದಿಲ್ಲ ಎಂದು ರೈತರು ಆರೋಪಿಸುತ್ತಾರೆ.

ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಈ ಹೋರಾಟ ಬಹಳ ಪ್ರಾಧಾನ್ಯತೆ ಪಡೆದುಕೊಂಡಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಮತ ಯಾಚಿಸಿದ್ದವು. ಆದರೆ ರೈತರು ಬಿಜೆಪಿ ವಿರುದ್ಧ ಮತ ಹಾಕುವಂತೆ ಕರೆ ನೀಡಿದ್ದರು.

ಈ ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್‌ ಶಾಸಕರಾದ ಬಸವನಗೌಡ ತುರುವಿಹಾಳರವರು ಎನ್.ಆರ್.ಬಿ.ಸಿ 5ಎ ನಾಲಾ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಉಪಚುನಾವಣೆ ಫಲಿತಾಂಶದ ನಂತರವೂ ಹೋರಾಟ ಮಾತ್ರ ನಿಂತಿಲ್ಲ. ಪ್ರತಿಭಟನೆ, ಹೋರಾಟ ಮಾಡಬಾರದು ಎಂಬ ಪೊಲೀಸರ ಆದೇಶಗಳಿಗೆ ಹೋರಾಟಗಾರರು ಶಾಂತ ರೀತಿಯಿಂದಲೇ ಉತ್ತರಿಸಿದ್ದರು. ನಾವು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡೇ ಹೋರಾಟ ಮುಂದುವರೆಸುತ್ತೇವೆ ಎಂದು ರೈತರು ಸ್ಪಷ್ಟವಾಗಿ ಹೇಳಿದ್ದರು. ಪಾಮನಕಲ್ಲೂರಿನಲ್ಲಿ ನಡೆಯುತ್ತಿದ್ದ ಹೋರಾಟವನ್ನು ಇತ್ತೀಚೆಗೆ ಚಿಲ್ಕರಾಗಿಗೆ ಸ್ಥಳಾಂತರಿಸಲಾಗಿತ್ತು.

ಕೋವಿಡ್ ಸಾಂಕ್ರಾಮಿಕ ರೋಗದ ನಿಯಮಗಳನ್ನು ಪಾಲಿಸುತ್ತಾ ಹೋರಾಟ ಸಮಿತಿ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಮುಖಂಡ ಮಲ್ಲರಡ್ಡೆಪ್ಪ ಕಳ್ಳಿಲಿಂಗಸುಗೂರು ಸೇರಿದಂತೆ ಗ್ರಾಮದ ರೈತರು ಹೋರಾಟವನ್ನು ಮುಂದುವರಿಸಿದ್ದಾರೆ.


ಇದನ್ನೂ ಓದಿ: ಲಾಕ್‌ಡೌನ್ – ಪೊಲೀಸ್ ಬೆದರಿಕೆ: ಜಗ್ಗದ, ಬಗ್ಗದ ಮಸ್ಕಿಯ ನೀರಾವರಿ ಹೋರಾಟ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here