Homeಮುಖಪುಟದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು- ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!

ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು- ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!

ಒಕ್ಕೂಟ ಸರ್ಕಾರವು ವ್ಯಾಕ್ಸಿನೇಷನ್‌ ನೀತಿಯ ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೆಸ್‌ ಸುಪ್ರೀಂಕೋರ್ಟ್‌ಗೆ ಧನ್ಯವಾದ ಸಲ್ಲಿಸಿದೆ.

- Advertisement -
- Advertisement -

ಕೊರೊನಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು. ತಮ್ಮ ಭಾಷಣದಲ್ಲಿ ವ್ಯಾಕ್ಸಿನ್ ಬಗ್ಗೆಯೆ ಹೆಚ್ಚಾಗಿ ಉಲ್ಲೇಖಿಸಿದ ಅವರು, ಕೊರೊನಾ ವಿರುದ್ದ ಹೋರಾಟಡಲು ಒಕ್ಕೂಟ ಸರ್ಕಾರವು ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ವ್ಯಾಕ್ಸಿನ್ ಪ್ರಕ್ರಿಯೆಯನ್ನು ಇನ್ನು ಮುಂದೆ ಕೇಂದ್ರ ಸರ್ಕಾರವೆ ನಡೆಸುತ್ತದೆ ಹಾಗೂ ರಾಜ್ಯಗಳಿಗೆ ಜೂನ್ 21 ರಿಂದ ಉಚಿತ ವ್ಯಾಕ್ಸಿನ್‌ ನೀಡುವುದಾಗಿ ಅವರು ಎಂದು ತಮ್ಮ ಭಾಷಣದಲ್ಲಿ ಘೋಷಿಸಿದ್ದಾರೆ.

ಪ್ರಧಾನಿ ಭಾಷಣ ಮಾಡುತ್ತಿದ್ದಂತೆ ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಆಯ್ದವು ಇಲ್ಲಿದೆ.

ಕ್ರುಶಿಕ ಎವಿ ಅವರು, “ನಿಮ್ಮ ಮಾತುಗಳು ನಮಗೆಲ್ಲಿ ಅರ್ಥವಾಗಬೇಕು, ನಮಗೆ ಅರ್ಥವಾಗದ ಯಾವುದೋ ನುಡಿಯಲ್ಲಿದೆ. ಅಡಿಬರಹ ಇಲ್ಲ, ಮಾತಿನ ಡಬ್ಬಿಂಗ್ ಇಲ್ಲ, ಕಡೆಪಕ್ಷ ಮಾತುಗಳ ಅನುವಾದದ ಪಿಡಿಎಫ್ ಕೂಡ ಇಲ್ಲ. ಕೇವಲ ಅಭಿನಯ ಮಾತ್ರ ಕಾಣೋದು. ಹಿಂದಿ ಹೇರಿಕೆ ನಿಲ್ಲಿಸಿ ಕನ್ನಡದಲ್ಲಿ ಮಾಹಿತಿ ಕೊಡಿ. ಪ್ರಧಾನಿ ಕಚೇರಿ ಪೂರ್ತಿ ದೇವನಾಗರಿಯಲ್ಲಿ ಟ್ವಿಟ್ ಮಾಡ್ತಿದೆ. ಹಿಂದಿ ಹೇರಿಕೆ ನಿಲ್ಲಿಸಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಟ್ಟೆಗೆ ಅನ್ನ, ಬದುಕಿಗೆ ಭರವಸೆ ನೀಡುವ ಸಮಗ್ರ ಪ್ಯಾಕೇಜ್ ನೀಡಿ: ಜನಾಗ್ರಹ ಆಂದೋಲನ

ಆಲ್ಟ್‌ನ್ಯೂಸ್‌ ಸಂಪಾದಕ ಪ್ರತೀಕ್ ಸಿನ್ಹಾ, ಅವರು ಪ್ರಧಾನಿಯ ಮೂವತ್ತು ನಿಮಿಷದ ಭಾಷಣದಲ್ಲಿ ಏನಿತ್ತು ಎಂಬುದನ್ನು ನಾಲ್ಕು ಅಂಶ ಪಟ್ಟಿ ಮಾಡಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಅವರ ಟ್ವೀಟ್‌ನಲ್ಲಿ, “1. ಕೇಂದ್ರ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. 2. ರಾಜ್ಯಗಳು ವಿಫಲವಾಗಿವೆ. 3. ವ್ಯಾಕ್ಸಿನೇಷನ್ ನೀತಿಯ ಯು-ಟರ್ನ್. 4. ಲಸಿಕೆಗಳ ಬಗ್ಗೆ ವದಂತಿ ಹಬ್ಬಿಸಿದ್ದಕ್ಕಾಗಿ ರಾಮದೇವ್ ಮೇಲೆ ಪರೋಕ್ಷ ದಾಳಿ” ಎಂದು ಹೇಳಿದ್ದಾರೆ.

ಕನ್ನಡ ಪರ ಹೋರಾಟಗಾರ ಅರುಣ್ ಜಾವಗಲ್‌, “ಇದು ಹಿಂದಿ ಭಾಷಿಕ ನಾಗರೀಕರಿಗೆ ಮಾತ್ರ ಸಂಬಂಧಿಸಿದ ವಿಚಾರವೆ ನರೇಂದ್ರ ಮೋದಿಯವರೆ?” ಎಂದು ಹಿಂದಿ ಹೇರಿಕೆಯ ವಿರುದ್ದ ಮಾತನಾಡಿದ್ದಾರೆ.

ಪ್ರಶಾಂತ್ ಭೂಷಣ್ ಅವರು, ವ್ಯಂಗ್ಯಚಿತ್ರಕಾರ ಮಂಜುಲ್ ಅವರ ವ್ಯಂಗ್ಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಕೊರೊನಾ ಎರಡನೆ ಅಲೆ ಬರುವ ಹೊತ್ತಿಗೆ ಹಾಗೂ ಹೆಚ್ಚುತ್ತಿರುವಾಗ ಪ್ರಧಾನಿ ಅಡಗಿ ಕೂತಿದ್ದರು. ಸೋಂಕು ಇಳಿಕೆಯಾಗುತ್ತಿದ್ದಂತೆ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಲು ಬರುತ್ತಾರೆ ಎಂಬಂತೆ ಚಿತ್ರಿಸಲಾಗಿದೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌, “ ‘ಇಲ್ಲ’ ಎನ್ನುವುದಕ್ಕಿಂತ ತಡವಾಗಿ ಆದರೂ ಒಳ್ಳೆಯದೆ. ಕೇಂದ್ರ ಸರ್ಕಾರ ಲಸಿಕೆಯ ಜವಾಬ್ದಾರಿ‌ ಹೊತ್ತಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಒತ್ತಾಯಿಸಿದ ಮಾನ್ಯ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು. ಲಸಿಕೆಗಳ ಸಮಾನ ವಿತರಣೆಯ ಕುರಿತು ಕರ್ನಾಟಕ ಸರ್ಕಾರ ಗಮನ ಹರಿಸಬೇಕಿದೆ” ಎಂದು ಹೇಳಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡಾ ಸುಪ್ರೀಂಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, “18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಪ್ರಜೆಗಳಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಘನತೆವೆತ್ತ ಸುಪ್ರೀಮ್ ಕೋರ್ಟ್‌ಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ. ಜೊತೆಗೆ ಕೇಂದ್ರಕ್ಕೆ ವ್ಯಾಕ್ಸಿನೇಷನ್‌ ವಿಷಯದಲ್ಲಿ ಕಿವಿಹಿಂಡಿರುವ ಪತ್ರಿಕಾ ವರದಿಯನ್ನೂ ಅವರು ತಮ್ಮ ಟ್ವೀಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, “ಜೂನ್ 21 ರಿಂದ ಕೋವಿಡ್ -19 ಲಸಿಕೆಯನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲಾಗುವುದು ಎಂಬ ಪ್ರಧಾನ ಮಂತ್ರಿಯ ಘೋಷಣೆಯು ಈ ಸಮಯದಲ್ಲಿ ಅತ್ಯಂತ ಸೂಕ್ತವಾದ ಪ್ರತಿಕ್ರಿಯೆಯಾಗಿದೆ. ನಮ್ಮ ಮನವಿಗೆ ಪ್ರಧಾನ ಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ನನಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ. ಕೇರಳ ಮುಖ್ಯಮಂತ್ರಿಯು ವ್ಯಾಕ್ಸೀನ್ ಉಚಿತವಾಗಿ ನೀಡಬೇಕು ಎಂದು ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್‌ ಆಚಾರ್ಯ ಅವರು, ಪಂಜರದೊಳಗಿನ ಗಿಳಿಯೊಂದು ಸೂಜಿ ಚುಚ್ಚಿದಾಗ, “ಸರಿ, ರಾಷ್ಟ್ರೀಯ ವ್ಯಾಕ್ಸಿನ್ ನೀತಿ” ಎಂದು ಧ್ವನಿಯೊಂದು ಹೇಳುವಂತೆ ಚಿತ್ರಿಸಿದ್ದಾರೆ. ಒಕ್ಕೂಟ ಸರ್ಕಾರಕ್ಕೆ ವ್ಯಾಕ್ಸಿನ್ ನೀತಿಯ ಬಗ್ಗೆ ಸುಪ್ರೀಂಕೋರ್ಟ್ ಕಿವಿಹಿಂಡಿರುವ ಪತ್ರಿಕಾ ವರದಿಯೊಂದರ ತಲೆ ಬರಹವನ್ನು ಚಿತ್ರದಲ್ಲಿ ಬರೆಯಲಾಗಿದೆ.

ಆಕಾಶ್ ಕುಮಾರ್ ಅವರು, “ಸರ್‌, ಬರೀ ಭಾಷಣಗಾರಿಗೆ ಬಂದ್ ಮಾಡಿ. ನೀವು ಏನೂ ಮಾಡಿಲ್ಲ. ಈಗ ನೀವು ರಾಜೀನಾಮೆ ಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ರೀಸ್ಥಿ ಅವರು, “ಮೋದಿಯವರೆ ನಿಮ್ಮ ಜೊತೆ ಯೋಗಿ ಅವರು ಯಾಕೆ ಹೀಗೆ ಮಾಡಿದರು” ಎಂದು ಉತ್ತರ ಪ್ರದೇಶ ಬಿಜೆಪಿಯ ಟ್ವಿಟರ್‌ನ ಕವರ್‌ ಫೋಟೋ ಹಾಕಿದ್ದಾರೆ. ಇತ್ತೀಚೆಗಿನ ಬೆಳವಣಿಗೆಯಂತೆ ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸಂಬಂಧ ಹಳಸಿದ್ದು, ಯುಪಿ ಬಿಜೆಪಿಯ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿನ ಕವರ್‌ ಚಿತ್ರಗಳಲ್ಲಿ ಮೋದಿಯ ಚಿತ್ರವನ್ನು ಬಳಸಿಕೊಂಡಿಲ್ಲ. ಇದು ಬಿಜೆಪಿಯ ಆಂತರಿಕ ಕಚ್ಚಾಟವನ್ನು ಬಹಿರಂಗ ಪಡಿಸಿತ್ತು

ಇದನ್ನೂ ಓದಿ: ಪಿಜ್ಜಾ, ಬರ್ಗರ್‌, ಸ್ಮಾರ್ಟ್‌ಫೋನ್‌ ಮನೆ ಬಾಗಿಲಿಗೆ ಬರುವುದಾದರೇ, ಪಡಿತರವೇಕೆ ಬೇಡ? ಕೇಂದ್ರಕ್ಕೆ ಕೇಜ್ರಿವಾಲ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಊರು ಕೊಳ್ಳೆ ಹೊಡೆದ ಮೇಲೆ, ದಡ್ಡಿ ಬಾಗಿಲು ಮುಚ್ಚಲು ಬಂದನೆ ಈವಪ್ಪ?

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...