ಆದಿವಾಸಿ ಯುವತಿ ಮೇಲೆ ಭದ್ರತಾ ಪಡೆಗಳಿಂದ ಅತ್ಯಾಚಾರ, ಕೊಲೆ ಆರೋಪ: ಮೃತಳಿಗೆ ಮಾವೋವಾದಿ ಪಟ್ಟ!

ಆದಿವಾಸಿ ಯುವತಿಯ ಮೇಲೆ ಮೃಗೀಯ ಅತ್ಯಾಚಾರ ನಡೆಸಿ ಕೊಂದು, ನಂತರ ಮಾವೋವಾದಿಯಾಗಿದ್ದ ಯುವತಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾಳೆ ಎಂದು ಭದ್ರತಾ ಪಡೆಗಳು ಘೋಷಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಛತ್ತೀಸಗಡದ ಬಿಜಾಪುರ ಜಿಲ್ಲೆಯ ನೀರಂ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬಸ್ತರ್ ಪ್ರದೇಶದಲ್ಲಿ ಇಂತಹ ಘಟನೆಗಳು ಹೊಸ ಪ್ರಕರಣವಲ್ಲ ಎನ್ನಲಾಗಿದೆ. ಈ ಹಿಂದೆ ಬಿಜೆಪಿಯ ಹಿಂಸಾತ್ಮಕ ಆಡಳಿತದಿಂದ ಮುಕ್ತವಾಗಲು ರಾಜ್ಯದ ಜನಸಾಮಾನ್ಯರು ಭಾರಿ ಬಹುಮತದಿಂದ ಕಾಂಗ್ರೆಸ್ ಅನ್ನು ಅಧಿಕಾರ ನೀಡಿದ್ದಾರೆ. ಆದರೆ ಆಡಳಿತ ಪಕ್ಷ ಕಾಂಗ್ರೆಸ್ ನೀಡಿದ ರಾಜಕೀಯ ಭರವಸೆಗಳನ್ನು ಅದರ ನಾಯಕರು ಈಗ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ 30ರ ರಾತ್ರಿ 11- 12ರ ನಡುವೆ, 24 ವರ್ಷದ ಆದಿವಾಸಿ ಯುವತಿ ಪೈಕೆ ವೆಕ್ಕೊ, ತಾಯಿ ಸುಕ್ಕಿ ವೆಕ್ಕೊ ಸೇರಿದಂತೆ ಇನ್ನೊಬ್ಬರ ಕುಟುಂದ ಸದಸ್ಯರ ಜೊತೆ ತಮ್ಮ ಮನೆಯ ಅಂಗಳದಲ್ಲಿ ಮಲಗಿದ್ದರು. ಮನೆ ಸುತ್ತುವರೆದ ಜಿಲ್ಲಾ ಮೀಸಲು ಕಾವಲುಗಾರ ಪಡೆಯ ಸಿಬ್ಬಂದಿ ಅಂಗಳಕ್ಕೆ ಪ್ರವೇಶಿಸಿ ಪೈಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯ ರಕ್ಷಣೆಗೆ ಹೋದ ಕುಟುಂಬ ಸದಸ್ಯರನ್ನು ಭೀಕರವಾಗಿ ಥಳಿಸಲಾಗಿತು. ನಂತರ ಯುವತಿಯನ್ನು ಸಿಬ್ಬಂದಿ ಕಾಡಿಗೆ ಎಳೆದೊಯ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ಲಾಕ್‌ಡೌನ್‌ ಹೊಡತಕ್ಕೆ ಬಾಗಿಲು ಮುಚ್ಚಿದ 8000 PGಗಳು

ಡಿಜಿಆರ್‌ ಸದಸ್ಯರು ರಾಜ್ಯ ಭದ್ರತಾ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದರಿಂದ, ಪೈಕೆ ಅವರನ್ನು ಬಂಧಿಸಿರಬಹುದು ಎಂದು ಭಾವಿಸಿದ ಆಕೆಯ ಪೋಷಕರು ಮತ್ತು ನೆರೆಹೊರೆಯವರು ಮೇ 31 ರಂದು ದಂತೇವಾಡ ಜೈಲಿಗೆ ಹೋಗಿದ್ದಾರೆ. ನಂತರ ನೆಲಾಸ್ನರ್ ಪೊಲೀಸ್ ಠಾಣೆಯಲ್ಲಿ ಮಾವೋವಾದಿ ಎಂಬ ಕಾರಣಕ್ಕೆ ಪೈಕೆ ಅವರನ್ನು ‘ಎನ್‌ಕೌಂಟರ್‌’ನಲ್ಲಿ ಕೊಲ್ಲಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿ ಪೈಕೆ ಅವರ ಮೃತ ದೇಹವನ್ನು ನೋಡಿದ ಪೋಷಕರು ಮತ್ತು ಸಂಬಂಧಿಕರು, ಆಕೆಯ ಮೇಲೆ ಅತ್ಯಾಚಾರ ನಡೆಸಿ, ಡಿಜಿಆರ್‌ ಸಿಬ್ಬಂದಿ ಆಕೆಯ ದೇಹವನ್ನು ತೀವ್ರವಾಗಿ ವಿರೂಪಗೊಳಿಸಿದ್ದಾರೆ. ಸಂತ್ರಸ್ತೆಯ ಪೋಷಕರು ಮತ್ತು ಪ್ರದೇಶದ ಇತರ ಸ್ಥಳೀಯ ಆದಿವಾಸಿಗಳು ಪೈಕೆ ಯಾವುದೇ ಮಾವೋವಾದಿ ಬಣಕ್ಕೆ ಸೇರಿಲ್ಲ ಮತ್ತು ಆಕೆಯ ಹತ್ಯೆಯನ್ನು ಎನ್‌ಕೌಂಟರ್‌ ಎಂದು ತಪ್ಪಾಗಿ ನಿರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದಿರುವ ಸ್ಥಳೀಯ ಗುಂಪು ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ. ಐಪಿಸಿಯ ಸೆಕ್ಷನ್ 302 (ಕೊಲೆ), 316 (ಅತ್ಯಾಚಾರ)  ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದೆ.

ಜಿಲ್ಲಾ ಮೀಸಲು ಕಾವಲುಗಾರರು ಅಂದರೆ ಡಿಜಿಆರ್‌ ಎಂಬುದು ಒಂದು ಮಿಲಿಟಂಟ್ ಗುಂಪು, ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನು ಎತ್ತಿ ಕಟ್ಟಲು ಕಾಂಗ್ರೆಸ್ ಆಡಳಿತ ಮಾಡಿರುವ ಸೃಷ್ಟಿ ಇದಾಗಿದೆ. ಇದು ಶರಣಾದ ಮಾವೋವಾದಿಗಳು ಮತ್ತು ಹಳ್ಳಿಗಳ ಮಾವೋವಾದಿ ವಿರೋಧಿಗಳನ್ನು ಒಳಗೊಂಡಿದೆ. ವಾಸ್ತವವಾಗಿ, ಡಿಜಿಆರ್‌ ತಂಡವನ್ನು ಬಿಜೆಪಿಯ ಆಳ್ವಿಕೆಯಲ್ಲಿನ ಸಾಲ್ವಾ ಜುಡಮ್‌ಗೆ ಹೋಲಿಸಲಾಗಿದೆ. ಡಿಜಿಆರ್‌ ಸದಸ್ಯರು ಬಹುತೇಕ ಆದಿವಾಸಿಗಳೇ ಆಗಿದ್ದಾರೆ.

ಮೃತ ಸಂತ್ರಸ್ಥ ಯುವತಿಯ ಸಾವಿಗೆ ನ್ಯಾಯ ಬೇಕು ಎಂದು ಸ್ಥಳೀಯ ಆದಿವಾಸಿಗಳು ಪ್ರತಿಭಟನೆ ನಡೆಸಿ, ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮಮತಾ ಬ್ಯಾನರ್ಜಿ ಭೇಟಿಯಾಗಲಿರುವ ರಾಕೇಶ್‌ ಟಿಕಾಯತ್‌

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here