Homeಮುಖಪುಟಪ್ಲಾಸ್ಮಾ ದಾನ ಮಾಡಿ: ಮಹಿಳೆಯರಿಗೆ ಕರೆ ನೀಡಿದ ದೆಹಲಿಯ ಮೊದಲ ಮಹಿಳಾ ಪ್ಲಾಸ್ಮ ದಾನಿ

ಪ್ಲಾಸ್ಮಾ ದಾನ ಮಾಡಿ: ಮಹಿಳೆಯರಿಗೆ ಕರೆ ನೀಡಿದ ದೆಹಲಿಯ ಮೊದಲ ಮಹಿಳಾ ಪ್ಲಾಸ್ಮ ದಾನಿ

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಹಿಳೆಯರು ಮುಂದೆ ಬರಬೇಕು. ಈ ಹೋರಾಟದಲ್ಲಿ ಅವರಿಗೂ ಪ್ರಮುಖ ಪಾತ್ರವಿದೆ ಎಂದು ಅವರು ಹೇಳಿದ್ದಾರೆ.

- Advertisement -
- Advertisement -

ರಾಷ್ಟ್ರ ರಾಜಧಾನಿಯ ಮೊದಲ ಮಹಿಳಾ ಪ್ಲಾಸ್ಮಾ ದಾನಿ ಭಾನುವಾರ ಹೆಚ್ಚಿನ ಮಹಿಳೆಯರಿಗೆ ತಮ್ಮ ‘ಆಂಟಿಬಾಡಿ ರಿಚ್’ ಪ್ಲಾಸ್ಮಾವನ್ನು ದಾನ ಮಾಡಲು ಹಾಗೂ ಕೊರೊನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡುವಂತೆ ಕೇಳಿಕೊಂಡಿದ್ದಾರೆ.

20 ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಹಾಗೂ ವಾಯುವ್ಯ ದೆಹಲಿಯ ರೋಹಿಣಿ ನಿವಾಸಿಯಾದ ಇವರು ಮೇ 30 ರಂದು ಕೊರೊನಾ ವೈರಸ್ ಪಾಸಿಟಿವ್ ಪರೀಕ್ಷೆ ನಡೆಸಿದ್ದರು. ಅವರ ಸಹೋದರನಿಗೆ ಮೇ 25 ರಂದು ರೋಗವಿದೆಯೆಂದು ತಿಳಿದು ಬಂದಿತ್ತು. ತದನಂತರ ಅವರಿಬ್ಬರೂ ಗುಣಮುಖರಾಗಿದ್ದರು.

ಸಹೋದರ-ಸಹೋದರಿಯ ಜೋಡಿ ಶನಿವಾರ ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬಿಲಿಯರಿ ಸೈನ್ಸಸ್‌ನಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕಿನಲ್ಲಿ ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದರು. ಈ ಪ್ಲಾಸ್ಮಾ ಬ್ಯಾಂಕ್ ರೋಗದಿಂದ ಚೇತರಿಸಿಕೊಂಡ ರೋಗಿಗಳು ಪ್ಲಾಸ್ಮ ದಾನ ಮಾಡಲು ಅರ್ಹವಾಗಿದ್ದರೆ ಅವರೊಂದಿಗೆ ಸಮನ್ವಯ ಸಾಧಿಸಿಸುತ್ತದೆ.

“ನಮಗೆ ಪಿಕ್ ಅಪ್ ಮತ್ತು ಡ್ರಾಪ್ ಆಯ್ಕೆಯನ್ನು ನೀಡಲಾಯಿತು. ನಾವು ಪ್ಲಾಸ್ಮಾವನ್ನು ದಾನ ಮಾಡಲು ಯೋಗ್ಯರಾಗಿದ್ದೇವೆಯೇ ಎಂದು ಕಂಡುಹಿಡಿಯಲು ಕೆಲವು ಪರೀಕ್ಷೆಗಳನ್ನು ನಡೆಸಲಾಯಿತು. ಇಡೀ ಪ್ರಕ್ರಿಯೆಯು ಕೇವಲ 45 ನಿಮಿಷಗಳನ್ನು ತೆಗೆದುಕೊಂಡಿತು” ಮಹಿಳೆಯ ಎಂದು ಸಹೋದರ ಹೇಳಿದರು.

ಅಲ್ಲಿರುವ ವೈದ್ಯರು ಬಹಳ ಸಹಾಯಕರಾಗಿದ್ದಾರೆ ಹಾಗೂ ತಾಳ್ಮೆಯಿಂದ ನಿಮ್ಮ ಮಾತುಗಳನ್ನು ಕೇಳುತ್ತಾರೆ ಎಂದು ಅವರು ಹೇಳಿದರು. ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಮಹಿಳಾ ಪ್ಲಾಸ್ಮಾ ದಾನಿ ಎಂದು ತಿಳಿದಾಗ ಅವರು ಮಹಿಳೆಯೂ ಆಶ್ಚರ್ಯಚಕಿತರಾದರು.

“ವೈದ್ಯರು ನನಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಿದರು ಮತ್ತು ಇತರರನ್ನು ಪ್ರೇರೇಪಿಸಲು ವೀಡಿಯೊ ಸಂದೇಶವನ್ನು ರೆಕಾರ್ಡ್ ಮಾಡಲು ನನ್ನನ್ನು ಕೇಳಿದರು” ಎಂದು ಅವರು ಹೇಳಿದರು.

“ಅನೇಕ ಮಹಿಳೆಯರು ಪ್ಲಾಸ್ಮಾ ದಾನ ಮಾಡಲು ಹಿಂಜರಿಯುತ್ತಾರೆ. ಚಿಂತೆ ಮಾಡಲು ಏನೂ ಇಲ್ಲ ಹಾಗೂ ಯಾವುದೇ ತೊಂದರೆ ಇಲ್ಲ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಹಿಳೆಯರು ಮುಂದೆ ಬರಬೇಕು. ಈ ಹೋರಾಟದಲ್ಲಿ ಅವರಿಗೂ ಪ್ರಮುಖ ಪಾತ್ರವಿದೆ” ಎಂದು ಅವರು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದ ತನ್ನ ಸ್ನೇಹಿತೆಯೊಬ್ಬರನ್ನು ಪ್ಲಾಸ್ಮಾ ದಾನ ಮಾಡಲು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.


ಓದಿ: ದೆಹಲಿಯಲ್ಲಿ ಅಮಿತ್ ಶಾ ಹಾಗೂ ಕೇಜ್ರಿವಾಲ್ ಎಂಬ ಎರಡು ಮಾದರಿಯಿದೆ; ಸಿಸೋಡಿಯಾ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...