ಪ್ರವಾದಿ ನಿಂದನೆಯಿಂದಾಗಿ ಭುಗಿಲೆದ್ದ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ ಸೇರಿದಂತೆ ಡ್ರಗ್ಸ್ ಜಾಲ ಪ್ರಕರಣಗಳ ತನಿಖೆಯಿಂದ ಹಿಂದೆ ಸರಿಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರು ಹಾಗೂ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರಗಳನ್ನು ರವಾನಿಸಿರುವ ದುಷ್ಕರ್ಮಿಗಳು ಬಾಂಬ್ ಬೆದರಿಕೆಯೊಡ್ಡಿದ್ದಾರೆ.
ಇದನ್ನೂ ಓದಿ: ಮಾನವ ನಿರ್ಮಿತ ಪಿಡುಗಿಗೆ 75 ವರ್ಷ: ಹಿರೋಶಿಮಾ ಬಾಂಬ್ ದಾಳಿಯಿಂದ ಜಗತ್ತು ಕಲಿತ ಪಾಠವೆಷ್ಟು?
ನಿನ್ನೆ ಸಂಜೆ 5 ಗಂಟೆಗೆ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ರವಾನಿಸಲಾಗಿದ್ದು, ಗಲಭೆ, ಡ್ರಗ್ಸ್ ಪ್ರಕರಣಗಳ ತನಿಖೆಯಿಂದ ಹಿಂದೆ ಸರಿಯಬೇಕು, ಕಾರಾಗೃಹದಲ್ಲಿರುವ ರಾಗಿಣಿ, ಸಂಜನಾಗೆ ಜಾಮೀನು ನೀಡಬೇಕು ಇಲ್ಲವೆಂದರೆ ಕಾರ್ ಬಾಂಬ್ ಸ್ಪೋಟಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಟಿ ಸಿವಿಲ್ ಕೋರ್ಟ್‌ಗೆ ಆಗಮಿಸಿದ ಶ್ವಾನದಳ ಮತ್ತು ಬಾಂಬ್ ಡಿಟೆಕ್ಟಿವ್ ತಂಡ ಪರೀಶೀಲನೆ ನಡೆಸಿತು. ಪತ್ರದ ಜೊತೆಗೆ ಡಿಟೋನೇಟರ್, ವೈರ್ ಮಾದರಿ ವಸ್ತುಗಳು ಪತ್ತೆಯಾಗಿದೆ ಎನ್ನಲಾಗಿದೆ. ಇದೊಂದು ಹುಸಿ ಬಾಂಬ್ ಕರೆ ಎಂದು ಬಾಂಬ್ ಡಿಟಿಕ್ಟಿವ್ ತಂಡ ಮಾಹಿತಿ ನೀಡಿದ್ದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೋಲೆಂಡ್- 2ನೇ ಮಹಾಯುದ್ಧದ ಅತಿದೊಡ್ಡ ಬಾಂಬ್ ಸ್ಫೋಟ!


