Homeಮುಖಪುಟ3 ತಿಂಗಳಿನಲ್ಲಿಯೇ ದಿನದ ಕೊರೊನಾ ಪ್ರಕರಣಗಳಲ್ಲಿ ಇಳಿಕೆ: 50 ಸಾವಿರಕ್ಕಿಂತ ಕಡಿಮೆ ವರದಿ!

3 ತಿಂಗಳಿನಲ್ಲಿಯೇ ದಿನದ ಕೊರೊನಾ ಪ್ರಕರಣಗಳಲ್ಲಿ ಇಳಿಕೆ: 50 ಸಾವಿರಕ್ಕಿಂತ ಕಡಿಮೆ ವರದಿ!

ನಿನ್ನೆ ಒಂದು ದಿನ 46,790 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 587 ಸಾವುಗಳು ಸಂಭವಿಸಿವೆ.

- Advertisement -
- Advertisement -

ದಿನವೊಂದಕ್ಕೆ ಹತ್ತಿರತ್ತಿರ ಒಂದು ಲಕ್ಷದವರೆಗೂ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿ ಗಾಬರಿ ಹುಟ್ಟಿಸಿದ್ದ ದಿನಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಇಂದು ಬೆಳಿಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ಪ್ರಕಾರ ಭಾರತವು ಕಳೆದ ಮೂರು ತಿಂಗಳಿನಲ್ಲಿಯೇ ದಿನದ ಕೊರೊನಾ ಪ್ರಕರಣಗಳಲ್ಲಿ ದಾಖಲೆಯ ಇಳಿಕೆ ಕಂಡಿದೆ. ಜುಲೈ ಅಂತ್ಯದ ವೇಳೆಯಿಂದ ಹೆಚ್ಚಾಗುತ್ತಲೇ ಇದ್ದ ದಿನದ ಪ್ರಕರಣಗಳು ಕೊನೆಗೂ 50 ಸಾವಿರಕ್ಕಿಂತ ಕಡಿಮೆ ವರದಿಯಾಗಿವೆ.

ನಿನ್ನೆ ಒಂದು ದಿನ 46,790 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 587 ಸಾವುಗಳು ಸಂಭವಿಸಿವೆ. ಅಲ್ಲಿಗೆ ಭಾರತದ ಒಟ್ಟಾರೆ ಪ್ರಕರಣಗಳು 76 ಲಕ್ಷ ಗಡಿ ತಲುಪಿದ್ದು, 1,15,197 ಒಟ್ಟಾರೆ ಸಾವುಗಳು ದಾಖಲಾಗಿವೆ.

ಕಳೆದೊಂದು ತಿಂಗಳ ಹಿಂದೆ ದಿನನಿತ್ಯ 1 ಲಕ್ಷದ ಹತ್ತಿರ ಪ್ರಕರಣಗಳು ದಾಖಲಾಗಿ ಅಮೆರಿಕವನ್ನು ಕೊರೊನಾ ಪ್ರಕರಣಗಳಲ್ಲಿ ಹಿಂದಿಕ್ಕಿಬಿಡುತ್ತೇವೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಅಮೆರಿಕ 82 ಲಕ್ಷ ಪ್ರಕರಣಗಳನ್ನು ವರದಿ ಮಾಡಿದ್ದರೆ ಭಾರತವು 76 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ. ಅದರಲ್ಲಿ 7 ಲಕ್ಷ ಮಾತ್ರ ಸಕ್ರಿಯ ಪ್ರಕರಣಗಳಿದ್ದು, 67 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.


ಇದನ್ನೂ ಓದಿ: ಫೆಬ್ರವರಿ ಒಳಗೆ ಕಡಿಮೆಯಾಗಲಿದೆ ಸೋಂಕು- ಕೊರೊನಾ ತಜ್ಞರ ಸಮಿತಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

0
'ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ' ಮತ್ತು 'ನನ್ನ ಅಜ್ಜಿ ಆಡಳಿತದಲ್ಲಿ ದೇಶದ ಯುದ್ಧಕ್ಕಾಗಿ ತಮ್ಮ ಚಿನ್ನವನ್ನು ದಾನ ಮಾಡಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಪ್ರಧಾನಿ...