Homeಮುಖಪುಟಪ್ರವಾಹ: ತೆಲಂಗಾಣ ರಾಜ್ಯಕ್ಕೆ 15 ಕೋಟಿ ರೂ ದೇಣಿಗೆ ನೀಡಲು ಮುಂದಾದ ದೆಹಲಿ ಸರ್ಕಾರ!

ಪ್ರವಾಹ: ತೆಲಂಗಾಣ ರಾಜ್ಯಕ್ಕೆ 15 ಕೋಟಿ ರೂ ದೇಣಿಗೆ ನೀಡಲು ಮುಂದಾದ ದೆಹಲಿ ಸರ್ಕಾರ!

ಹೈದರಾಬಾದ್‌ನಲ್ಲಿ ಪ್ರವಾಹ ಉಂಟಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೆಹಲಿಯ ಜನರು ಹೈದರಾಬಾದ್‌ನ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲಿದ್ದಾರೆ - ಕೇಜ್ರಿವಾಲ್

- Advertisement -
- Advertisement -

ಕಳೆದೊಂದು ವಾರದಿಂದ ಅಪ್ಪಳಿಸುತ್ತಿರುವ ಭಾರಿ ಪ್ರವಾಹಕ್ಕೆ ಹೈದರಾಬಾದ್ ತತ್ತರಿಸಿದೆ. ನೂರಾರು ಮನೆಗಳು, ವಾಹನಗಳು ಕೊಚ್ಚಿಹೋಗಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿ ಸರ್ಕಾರವು ಸಹಾಯ ಹಸ್ತ ಚಾಚಿದ್ದು, 15 ಕೋಟಿ ದೇಣಿಗೆ ನೀಡಲು ಮುಂದಾಗಿದೆ.

ಈ ಕುರಿತು ಇಂದು ಬೆಳಿಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ “ಹೈದರಾಬಾದ್‌ನಲ್ಲಿ ಪ್ರವಾಹ ಉಂಟಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೆಹಲಿಯ ಜನರು ಹೈದರಾಬಾದ್‌ನ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲಿದ್ದಾರೆ. ಪರಿಹಾರ ಕಾರ್ಯಗಳಿಗಾಗಿ ದೆಹಲಿ ಸರ್ಕಾರವು ತೆಲಂಗಾಣ ಸರ್ಕಾರಕ್ಕೆ 15 ಕೋಟಿ ರೂ ದೇಣಿಗೆ ನೀಡಲಿದೆ” ಎಂದು ಘೋಷಿಸಿದ್ದಾರೆ.

ಕೇಜ್ರಿವಾಲ್‌ರವರ ಈ ನಡೆಗೆ ಟ್ವಿಟ್ಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ದೆಹಲಿಯೇ ಸಂಕಷ್ಟದಲ್ಲಿರುವಾಗ ಇನ್ನೊಂದು ರಾಜ್ಯಕ್ಕೆ ಹಣ ನೀಡಬೇಕೇ ಎಂದು ಕೆಲವರು ಪ್ರಶ್ನಿಸಿದರೆ, ಸಂಕಷ್ಟದ ಸಮಯದಲ್ಲಿ ಇತರರ ನೆರವಿಗೆ ಧಾವಿಸಿರುವುದಕ್ಕೆ ಹಲವರು ಪ್ರಶಂಸಿದ್ದಾರೆ.


ಇದನ್ನೂ ಓದಿ: ಅ.21 ರವರೆಗೂ ಮಹಾಮಳೆ: ಹೈದರಾಬಾದ್‌ನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ!


ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹ ಪೀಡಿತ ರಾಜ್ಯಗಳಿಗೆ ಒಂದು ಪೈಸೆಯೂ ಹಣ ಬಿಡುಗಡೆ ಮಾಡಿಲ್ಲ. ಕೋವಿಡ್ ನಿರ್ವಹಣೆಗೂ ಹಣ ನೀಡುತ್ತಿಲ್ಲ ಎಂದು ಹಲವರು ದೂರಿದ್ದಾರೆ.

ಪ್ರಧಾನಿ ಮೋದಿಯವರು ಅಕ್ಟೋಬರ್ 14 ರಂದು ಟ್ವೀಟ್‌ ಮಾಡಿ “ಪ್ರವಾಹದಿಂದ ತತ್ತರಿಸಿರುವ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೆರವು ನೀಡುತ್ತದೆ ಎಂದು ಭರವಸೆ ನೀಡುತ್ತೇನೆ” ಎಂದು ಟ್ವೀಟ್‌ ಮಾಡಿದ್ದರು.


ಇದನ್ನೂ ಓದಿ: ಪ್ರವಾಹ: ಪ್ರಧಾನಿ ಮಾಡಿದ ಕನ್ನಡದ ಒಂದು ಟ್ವೀಟ್ ನೆರೆ ಪರಿಹಾರವಾಗಬಲ್ಲುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...