ಬಾಮ್‌ಸೆಫ್‌ನ ಹಿರಿಯ ನಾಯಕ ದಲಿತ ವಕೀಲ ದೇವ್‌ಜಿ ಮಹೇಶ್ವರಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣ ವಿರೋಧಿ ಬರಹವನ್ನು ಬರೆದಿದ್ದಕ್ಕೆ ಹತ್ಯೆ ಮಾಡಿದ್ದಾರೆಂದು ವಿಶೇಷ ತನಿಖಾ ತಂಡ (SIT) ಹೇಳಿದ ಹಿನ್ನಲೆಯಲ್ಲಿ, ಊನಾ ಚಳವಳಿ ನಾಯಕ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ “ನಮ್ಮ ಮೇಲೆ ದಾಳಿ ಮಾಡಿದರೆ ನಾವು ಹೋರಾಟವನ್ನು ನಿಲ್ಲಿಸುತ್ತೇವೆ ಎಂದು ಮನುವಾದಿಗಳು ಭಾವಿಸಿದ್ದಾರೆಯೆ?” ಎಂದು ಪ್ರಶ್ನಿಸಿದ್ದಾರೆ.
ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ(ಬಾಮ್ಸೆಫ್)ದ ಹಿರಿಯ ನಾಯಕರಾಗಿರುವ ದೇವ್‌ಜಿ ಮಹೇಶ್ವರಿ ಅವರನ್ನು ಸೆಪ್ಟೆಂಬರ್ 25 ರ ಸಂಜೆ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಇರಿದು ಹತ್ಯೆ ಮಾಡಲಾಗಿತ್ತು. ಅವರನ್ನು ಬ್ರಾಹ್ಮಣ ವಿರೋಧಿ ಬರಹಗಳಿಗಾಗಿ ಹತ್ಯೆ ಮಾಡಿದ್ದಾರೆಂದು SIT ಹೇಳಿದೆ.
ಇದನ್ನೂ ಓದಿ: ಬ್ರಾಹ್ಮಣ ವಿರೋಧಿ ಬರಹಕ್ಕೆ ದಲಿತ ವಕೀಲನ ಹತ್ಯೆ – SIT ತನಿಖೆಯಲ್ಲಿ ಬಹಿರಂಗ
ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, “ನಮ್ಮ ಮೇಲೆ ದಾಳಿ ಮಾಡಿದರೆ ನಾವು ಹೋರಾಟವನ್ನು ನಿಲ್ಲಿಸುತ್ತೇವೆ ಎಂದು ಮನುವಾದಿಗಳು ಭಾವಿಸಿದ್ದಾರೆಯೆ? ನಾವು ಜಾತಿಯನ್ನು ಒಡೆದುಹಾಕಿ ನಾಶಪಡಿಸುವವರೆಗೂ ಹೋರಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
Devjibhai Maheshwari, a well known Dalit rights lawyer in Gujarat, was killed for opposing Brahminism!
Do Manuwadis think we will stop fighting if you attack us? We will fight till we smash and annihilate caste!https://t.co/cvFmxJbQAs https://t.co/QhCnoN0mk1
— Jignesh Mevani (@jigneshmevani80) October 21, 2020
ವಕೀಲ ದೇವ್‌ಜಿ ಹತ್ಯೆ ನಡೆದ ಮರುದಿನ ಮುಂಬೈ ಪೊಲೀಸರು ಪ್ರಧಾನ ಆರೋಪಿ ಭರತ್ ರಾವಲ್‌ನನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಬ್ರಾಹ್ಮಣರ ಕುರಿತು ಪೂರ್ವಾಗ್ರಹದ ಪೋಸ್ಟ್‌ಗೆ ಸಂಬಂಧಿಸಿ ದೇವ್‌ಜಿಯನ್ನು ಹತ್ಯೆಗೈದಿರುವುದಾಗಿ ಭರತ್ ತಿಳಿಸಿದ್ದಾನೆ. ದೇವ್‌ಜಿ ಪತ್ನಿ ಮೀನಾಕ್ಷಿಬೆನ್ FIR ನಲ್ಲಿ 8 ಮಂದಿಯನ್ನು ಉಲ್ಲೇಖಿಸಿದ್ದರು, ಆದರೆ ಅವರ ವಿರುದ್ಧದ ಪುರಾವೆಗಳು ಪೊಲೀಸರಿಗೆ ಇದುವರೆಗೆ ಪತ್ತೆಯಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ


