Homeಮುಖಪುಟಗುಜರಾತ್‌: ಬ್ರಾಹ್ಮಣ ವಿರೋಧಿ ಬರಹಕ್ಕೆ ದಲಿತ ವಕೀಲನ ಹತ್ಯೆ - SIT ತನಿಖೆಯಲ್ಲಿ ಬಹಿರಂಗ

ಗುಜರಾತ್‌: ಬ್ರಾಹ್ಮಣ ವಿರೋಧಿ ಬರಹಕ್ಕೆ ದಲಿತ ವಕೀಲನ ಹತ್ಯೆ – SIT ತನಿಖೆಯಲ್ಲಿ ಬಹಿರಂಗ

ಬಾಮ್ಸೆಫ್‌ನ ಹಿರಿಯ ನಾಯಕರಾಗಿರುವ ದೇವ್‌ಜಿ ಮಹೇಶ್ವರಿ, ಕಳೆದ 20 ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದರು.

- Advertisement -
- Advertisement -

ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಬ್ರಾಹ್ಮಣ ವಿರೋಧಿ ಪೋಸ್ಟ್‌‌ಗಳೇ ದಲಿತ ವಕೀಲ ದೇವ್‌ಜಿ ಮಹೇಶ್ವರಿ ಅವರ ಹತ್ಯೆಗೆ ಕಾರಣ ಎಂದು ವಿಶೇಷ ತನಿಖಾ ತಂಡ (SIT) ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ವಕೀಲ ದೇವ್‌ಜಿ ಮಹೇಶ್ವರಿ ಹಾಕಿದ್ದ ಪೋಸ್ಟ್ ಕುರಿತಂತೆ 22 ವರ್ಷದ ಭರತ್ ರಾವಲ್ ನಡುವೆ ಫೋನ್‌ನಲ್ಲಿ ವಾಗ್ವಾದ ನಡೆದಿತ್ತು ಎನ್ನಲಾಗಿದ್ದು, ಇದಾಗಿ ಒಂದು ದಿನದ ಬಳಿಕ (ಸೆಪ್ಟಂಬರ್ 25) ಕಛ್‌‌ನ ರಾಪರ್ ಪಟ್ಟಣದಲ್ಲಿ ಭರತ್‌‌ ದೇವ್‌‌ಜಿ ಅವರನ್ನು ಇರಿದು ಕೊಂದಿದ್ದಾನೆ.

ಇದನ್ನೂ ಓದಿ: ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ

ವಕೀಲ ದೇವ್‌ಜಿ ಹತ್ಯೆ ನಡೆದ ಮರುದಿನ ಮುಂಬೈ ಪೊಲೀಸರು ಪ್ರಧಾನ ಆರೋಪಿ ಭರತ್ ರಾವಲ್‌ನನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಬ್ರಾಹ್ಮಣರ ಕುರಿತು ಪೂರ್ವಾಗ್ರಹದ ಪೋಸ್ಟ್‌ಗೆ ಸಂಬಂಧಿಸಿ ದೇವ್‌‌ಜಿಯನ್ನು ಹತ್ಯೆಗೈದಿರುವುದಾಗಿ ಭರತ್‌ ತಿಳಿಸಿದ್ದಾನೆ. ದೇವ್‌‌ಜಿ ಪತ್ನಿ ಮೀನಾಕ್ಷಿಬೆನ್ FIR ನಲ್ಲಿ 8 ಮಂದಿಯನ್ನು ಉಲ್ಲೇಖಿಸಿದ್ದರು, ಆದರೆ ಅವರ ವಿರುದ್ಧದ ಪುರಾವೆಗಳು ಪೊಲೀಸರಿಗೆ ಇದುವರೆಗೆ ಪತ್ತೆಯಾಗಿಲ್ಲ ಎನ್ನಲಾಗಿದೆ.

‘‘ದೇವ್‌ಜಿ ಮಹೇಶ್ವರಿ ತನ್ನ ಫೇಸ್‌ಬುಕ್‌ನಲ್ಲಿ ಬ್ರಾಹ್ಮಣರಿಗೆ ವಿರುದ್ಧವಾದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಆಗಾಗ ಅಪ್‌ಲೋಡ್ ಮಾಡುತ್ತಿದ್ದರು. ಈ ಬಗ್ಗೆ ಭರತ್ ರಾವಲ್ ಅವರಿಗೆ ಫೋನ್ ಮಾಡಿದ್ದ. ಫೋನಿನಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬ್ರಾಹ್ಮಣ ಸಮುದಾಯದ ವಿರುದ್ಧ ಹಾಕಲಾಗಿದ್ದ ಪೋಸ್ಟ್‌ನ ಕಾರಣಕ್ಕೆ ಹುಟ್ಟಿಕೊಂಡ ವಿವಾದದ ಹಿನ್ನೆಲೆಯಲ್ಲಿ ಭರತ್ ರಾವಲ್, ದೇವ್‌ಜಿಯನ್ನು ಹತ್ಯೆಗೈದಿದ್ದಾನೆ ಎಂಬುದು ತನಿಖೆಯ ಸಂದರ್ಭ ಸಂಗ್ರಹಿಸಲಾದ ಪುರಾವೆಯಿಂದ ಬೆಳಕಿಗೆ ಬಂದಿದೆ’’ ಎಂದು SIT ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ(ಬಾಮ್ಸೆಫ್)ದ ಹಿರಿಯ ನಾಯಕರಾಗಿರುವ ದೇವ್‌ಜಿ ಮಹೇಶ್ವರಿ, ಕಳೆದ 20 ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ದರು. ಸೆಪ್ಟೆಂಬರ್‌ 25 ರ ಸಂಜೆ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಇರಿತಕ್ಕೊಳಗಾಗಿ, ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಕರೆದೊಯ್ಯುವ ಮೊದಲೆ ಮೃತಪಟ್ಟಿದ್ದರು.

ಇದನ್ನೂ ಓದಿ: ದೇಶಾದ್ಯಂತ ನಡೆಯುವ ದಲಿತರ ಮೇಲಿನ ಹಲ್ಲೆಗಳಲ್ಲಿ ಶೇ.25 ಯುಪಿಯೊಂದರಲ್ಲಿ ವರದಿಯಾಗುತ್ತವೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಮನುವಾದಿಗಳು, ಅವರನ್ನು ಹತ್ಯೆ ಮಾಡುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...