Homeಅಂಕಣಗಳುನಮ್ಮ ಪ್ರಜಾಪ್ರಭುತ್ವ ದೇಶ ಹಳ್ಳ ಹಿಡಿಯ ಹೊರಟಿರುವುದು ನಮ್ಮ ಜನರಿಗೆ ಗೋಚರಿಸುತ್ತಿಲ್ಲವೆ?

ನಮ್ಮ ಪ್ರಜಾಪ್ರಭುತ್ವ ದೇಶ ಹಳ್ಳ ಹಿಡಿಯ ಹೊರಟಿರುವುದು ನಮ್ಮ ಜನರಿಗೆ ಗೋಚರಿಸುತ್ತಿಲ್ಲವೆ?

ಸರ್ಕಾರಿ ನೌಕರರು ಸಂಬಳದಾಳುಗಳಲ್ಲ. ಅವರಿರುವುದು ಸರ್ಕಾರದ ಜನಪರ ಪಾಲಿಸಿಯನ್ನು ಅನುಷ್ಠಾನಗೊಳಿಸುವುದಕ್ಕೇ ಹೊರತು ಮಂತ್ರಿಗಳ ರಾಜಕೀಯ ಪಕ್ಷಗಳ ಪುಢಾರಿಗಳು ಮಾಡೆನ್ನುವ ದುಷ್ಕೃತ್ಯಗಳನ್ನು ಎಸಗಲಿಕ್ಕಲ್ಲ.

- Advertisement -
- Advertisement -

ಸರ್ಕಾರ ರೈತರಿಗೆ, ಕಾರ್ಮಿಕರಿಗೆ ಸಂಬಂಧಪಟ್ಟಂತೆ ಮಾಡಿರುವ ಕಾಯ್ದೆ ತಿದ್ದುಪಡಿಗಳು ಪಟ್ಟಭದ್ರರಿಗೆ, ಕಾರ್ಪೊರೇಟ್ ಕಂಪೆನಿಗಳಿಗೆ ಲಾಭದಾಯಕವಾಗಿದ್ದು ರೈತರು ಮತ್ತು ಕಾರ್ಮಿಕರನ್ನು ಉದ್ಯೋಗಪತಿಗಳ ಗುಲಾಮರನ್ನಾಗಿ ಮಾಡುವ ಉದ್ದೇಶ ಹೊಂದಿವೆ. ಪ್ರಜೆಯನ್ನು ಒಂದಾದ ಮೇಲೊಂದರಂತೆ ಗಂಡಾತರಕ್ಕೆ ಸರ್ಕಾರ ತಳ್ಳುತ್ತಿದ್ದರೂ ಜನ ಕಣ್ಮುಚ್ಚಿ ಕುಳಿತಿದ್ದಾರೆ. ನಮ್ಮ ರಾಜ್ಯಾಂಗ ಆಡಳಿತ ಸುಲಲಿತವಾಗಿ ನಡೆಯಬೇಕೆಂದು ಶಾಸಕಾಂಗ, ಆಡಳಿತಾಂಗ ಮತ್ತು ನ್ಯಾಯಾಂಗಗಳನ್ನು ಅಸ್ತಿತ್ವಕ್ಕೆ ತಂದಿದೆ. ನಮ್ಮ ಶಾಸಕಾಂಗದ ದುರವಸ್ಥೆಯನ್ನು ನಾವು ಮೊದಲು ಮನಗಾಣಬೇಕಿದೆ. ನಮ್ಮ ಕಾರ್ಯಾಂಗ ಈಗ ನಮ್ಮನ್ನು ಮತ್ತೊಂದು ಪ್ರಪಾತಕ್ಕೆ ನೂಕಲು ಆರಂಭ ಮಾಡಿದೆ. ಆಂಧ್ರದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಧೀಶರಾದ ರಮಣರವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಭೂಕಬಳಿಕೆ ಆರೋಪ ವಿಚಾರದಲ್ಲಿ ಮೃದು ಧೋರಣೆ ತೋರಲು ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪ ಮಾಡಿ

PC : India Legal

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಸಾಲದ್ದಕ್ಕೆ ಈ ವಿಷಯವನ್ನು ಮುಖ್ಯಮಂತ್ರಿಗಳೇ ಬಹಿರಂಗಗೊಳಿಸಿದ್ದಾರೆ. ನಮ್ಮ ಕಾರ್ಯಾಂಗ, ಆಡಳಿತಾಂಗ ಮತ್ತು ನ್ಯಾಯಾಂಗಗಳು ಪಾರದರ್ಶಕವಾಗಿಲ್ಲ. ಆದುದರಿಂದ ಪ್ರಜೆಯನ್ನು ಎಲ್ಲ ರೀತಿಯಲ್ಲೂ ಹತೋಟಿಗೆ ತೆಗೆದುಕೊಳ್ಳುವ ಹಾಗೂ ಅವನ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತಿವೆ. ಮಾಧ್ಯಮಗಳ ಪಂಡಿತರು ನಡೆದ ಘಟನೆಯನ್ನು ತಮ್ಮದೇ ರೀತಿಯಲ್ಲಿ ಧಿಡೀರ್ ವಿಶ್ಲೇಷಣೆಗೆ ಒಳಪಡಿಸಿ, ಹತ್ತಾರು ಬಗೆಯ ತೀರ್ಮಾನಗಳನ್ನು ಏಕಕಾಲದಲ್ಲಿ ಗಾಳಿಗೆ ಹಾರಿಬಿಡುತ್ತಿದ್ದಾರೆ. ಜಡ್ಜ್ ರಮಣರವರು ಮುಂದಿನ ಮುಖ್ಯ ನ್ಯಾಯಾಧೀಶರಾಗುವುದನ್ನು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ತಮ್ಮಂತೆ ಅಪರಾಧಿ ಸ್ಥಾನದಲ್ಲಿರುವ ಎಂಪಿಗಳು, ಎಂಎಲ್‍ಎಗಳ ಮೇಲೆ ಹಾಕಲಾಗಿರುವ ಮೊಕದ್ದಮೆಗಳನ್ನೂ ಶೀಘ್ರವಾಗಿ ಇತ್ಯರ್ಥಪಡಿಸಬೇಕೆಂದು ಉಚ್ಚ ನ್ಯಾಯಾಲಯಗಳಿಗೆ ಜಸ್ಟೀಸ್ ರಮಣರವರನ್ನು ಒಳಗೊಂಡ ನ್ಯಾಯಪೀಠ ಆಜ್ಞೆ ಮಾಡಿರುವುದರಿಂದ ಜಗನ್‍ಮೋಹನ್ ರೆಡ್ಡಿಯವರು ಜಸ್ಟೀಸ್ ರಮಣರವರ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಪತ್ರ ಬರೆದಿರಬಹುದೇ?

ಜಗನ್ ಇತ್ತೀಚೆಗೆ ಮೋದಿಯವರೊಡನೆ ಸಖ್ಯ ಬೆಳೆಸಲು ಹೊರಟಿರುವುದಕ್ಕೆ ಇದೂ ಒಂದು ಕಾರಣ ಇರಬಹುದೇ? ಮೋದಿ, ಶಾಗಳು ಆಂಧ್ರಪ್ರದೇಶವನ್ನೂ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಹಿಂದಿನಿಂದಲೂ ಸಂಚು ಮಾಡುತ್ತಿದ್ದಾರೆ. ಜಗನ್ ತಾನಾಗಿಯೇ ಅವರ ತೆಕ್ಕೆಗೆ ಬೀಳಲು ಹೋಗಿರುವುದು ಅವರ ಪ್ರಯತ್ನವನ್ನು ಸುಗಮಗೊಳಿಸಿದೆ.

2018ರ ಜನವರಿ 12 ರಂದು ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದಾಗ ಅಲ್ಲಿನ ಯಾವ ನ್ಯಾಯಾಧೀಶರೂ ತುಟಿಪಿಟಿಕ್ ಎನ್ನಲಿಲ್ಲ. ‘ಇಂದು ನಮ್ಮ ನ್ಯಾಯಾಲಯದ ನ್ಯಾಯಾಧೀಶರೇ ಹೀಗೆ ಟೀಕೆ ಮಾಡಿದ್ದಾರೆ. ನಾಳೆ ಬೇರೆಯಾರಾದರೂ ಹೀಗೆಯೇ ಟೀಕೆ ಮಾಡಬಹುದಲ್ಲ’ ಎಂದು ಇತರೆ ನ್ಯಾಯಮೂರ್ತಿಗಳು ಅಂದೇ ತಿಳಿಯಬೇಕಿತ್ತು. ಇನ್ನೊಂದು ಉದಾಹರಣೆ ಕೊಡಬಹುದು.

ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೊ ಪುಲ್ 2016ರ ಆಗಸ್ಟ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಒಂದು ದಿನ ಮೊದಲು 160 ಪುಟದ ನೋಟ್ ಒಂದನ್ನು ಬರೆದಿಟ್ಟಿದ್ದರು. ಆ ನೋಟ್‍ನಲ್ಲಿ ಸ್ಫೋಟಕ ವಿಷಯಗಳನ್ನು ಹೊರಹಾಕಿದ್ದರು. ಸರ್ವೋಚ್ಚ ನ್ಯಾಯಾಲಯ ಈ 160 ಪುಟದ ನೋಟ್ ಬಗ್ಗೆ ದಿವ್ಯಮೌನ ತಾಳಿತು.

ತಟಸ್ಥ ಭಾವನೆಯಿಂದ ನಡೆದುಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರು ಅಧಿಕಾರ ವಹಿಸಿಕೊಳ್ಳುವ ಮೊದಲೇ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದ್ದರೂ, ಇನ್ನು ನ್ಯಾಯಾಧೀಶರಾಗಿರುವಾಗಲೇ ಪ್ರಧಾನಿ ಮೋದಿಯವರನ್ನು ಮುಕ್ತ ಕಂಠದಿಂದ ಹೊಗಳಿದರು. ಅದನ್ನು ನ್ಯಾಯಾಲಯವೇ ಖಂಡಿಸಬೇಕಾಗಿತ್ತು. ಈ ನ್ಯಾಯಾಧೀಶರೇ ತಪ್ಪಿತಸ್ತರಾಗಿದ್ದು ಮತ್ತೊಬ್ಬರ ಕೋರ್ಟ್ ನಿಂದನೆ ಕೇಸನ್ನು ಆಲಿಸುವ ಅಧಿಕಾರ ಚಲಾಯಿಸುವುದು ಅಕ್ರಮವಲ್ಲವೇ?

ಜಸ್ಟೀಸ್ ಮುರುಳೀಧರ ಅವರನ್ನು ದೆಹಲಿ ಹೈಕೋರ್ಟಿನಿಂದ ದಿಢೀರನೆ ವರ್ಗ ಮಾಡಲಾಯಿತು. ಯಾಕೆಂದರೆ ಅವರು ನೀಡಿದ ತೀರ್ಪಿನಿಂದ ಆಡಳಿತ ಮಾಡುತ್ತಿರುವವರಿಗೆ ಇರುಸುಮುರುಸಾಯಿತು. ಅದೇ ರೀತಿ ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಜಸ್ಟೀಸ್ಜ್ ಸಂಜಯ ಕುಮಾರ್ ಭಟ್ ಎಂಬ ಪ್ರಾಮಾಣಿಕರು ಸರ್ಕಾರಕ್ಕೆ ಇರಿಸುಮುರುಸು ಮಾಡುವ ತೀರ್ಪನ್ನು ನೀಡಿದರೆಂಬ ಕಾರಣಕ್ಕೆ ಹಠಾತ್ತನೆ ವರ್ಗ ಮಾಡಲಾಯಿತು.

ಇವೆಲ್ಲ ಪ್ರಕರಣಗಳು ಕೋರ್ಟುಗಳು ಎಷ್ಟು ಅಧಃಪತನ ಹೊಂದಿವೆ ಎಂಬುದನ್ನು ಸಾಬೀತು ಮಾಡುತ್ತವೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ನ್ಯಾಯಾಧೀಶರಾದ ರಮಣ ಅವರ ವಿರುದ್ಧ ಪತ್ರ ಬರೆದಿರುವುದು ಸರ್ವೋಚ್ಚ ನ್ಯಾಯಾಲಯದ ಸ್ವಾತಂತ್ರ್ಯವನ್ನು/ಸ್ವಾವತ್ತತೆಯನ್ನು ಪ್ರಶ್ನಿಸುವ ಹುನ್ನಾರ ಎಂದು ಭಾರತದ ಬಾರ್ ಕೌನ್ಸಿಲ್ ನಿರ್ಣಯ ಮಾಡಿದೆ. ಜಡ್ಜ್ ರಮಣ ಮತ್ತು ಕೆಲ ನ್ಯಾಯಾಧೀಶರನ್ನು ಗುರಿಯಾಗಿಟ್ಟುಕೊಂಡು ಜಗನ್‍ರವರು ಈ ಪತ್ರ ಬರೆದಿದ್ದಾರೆ. ಜಸ್ಟೀಸ್ ರಮಣ ಅವರನ್ನು ಒಳಗೊಂಡ ನ್ಯಾಯಪೀಠ ರಾಜಕೀಯ ಅಪರಾಧ ಎಸಗಿರುವವರ ವಿರುದ್ಧ ಹೂಡಿರುವ ಕೇಸ್‍ಗಳನ್ನು 6 ತಿಂಗಳ ಒಳಗಾಗಿ ಇತ್ಯರ್ಥ ಮಾಡಬೇಕೆಂದು ಉಚ್ಚ ನ್ಯಾಯಾಲಯಗಳಿಗೆ ಸೂಚನೆ ನೀಡಿರುವುದಕ್ಕೆ ವಿರುದ್ಧವಾಗಿ ಈ ಪತ್ರವನ್ನು ಆಂಧ್ರದ ಮುಖ್ಯಮಂತ್ರಿಗಳು ಬರೆದಿದ್ದಾರೆ. ಈ ಮುಖ್ಯಮಂತ್ರಿಯ ವಿರುದ್ಧವಾಗಿಯೂ ಕೆಲವು ಖಟ್ಲೆಗಳು ಇವೆ ಎಂಬುದನ್ನು ಮರೆಯುವಂತಿಲ್ಲ. ಸಾರ್ವಜನಿಕರು, ನ್ಯಾಯಾಂಗದಲ್ಲಿಟ್ಟಿರುವ ನಂಬಿಕೆಯನ್ನು ಬುಡಮೇಲು ಮಾಡುವುದೇ ಜಗನ್‍ರವರ ಉದ್ದೇಶ. ಇದಿಷ್ಟೇ ಅಲ್ಲದೆ ಜಗನ್‍ರವರು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬೊಬ್ಡೆಯವರಿಗೆ ಬರೆದಿರುವ ಪತ್ರದಲ್ಲಿ ಕೆಲವು ನ್ಯಾಯಾಧೀಶರು ತೆಲಗುದೇಶಂ ಪಕ್ಷದ ಚಂದ್ರಬಾಬು ನಾಯ್ಡುರವನ್ನು ರಕ್ಷಣೆ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ ಎಂದು ಬರೆದಿದ್ದಾರೆ ಎಂದು ಬಾರ್ ಕೌನ್ಸಿಲ್ ತನ್ನ ನಿರ್ಣಯದಲ್ಲಿ ಹೇಳಿದೆ.

PC : The Inependent

ನ್ಯಾಯಾಲಯಗಳು ಮಾತ್ರವಲ್ಲ ಆಡಳಿತ ವ್ಯವಸ್ಥೆಯೇ ಕುಸಿದುಬೀಳುತ್ತಿದೆ. ಮಹಾಜನ ಸಮೂಹ ಸನ್ನಿಗೆ ಒಳಗಾಗುತ್ತಿದ್ದಾರೆ. ಅತ್ತಕಡೆ ಸರ್ಕಾರ ಜನರ ಮೂಲಭೂತ ಹಕ್ಕುಗಳನ್ನು ಒಂದಾದಮೇಲೆ ಇನ್ನೊಂದರಂತೆ ಕಸಿಯುತ್ತಿದೆ. ವಿಚಾರಣೆ ಇಲ್ಲದೆ ಅನೇಕ ಕಾರ್ಯಕರ್ತರನ್ನು ಸೆರೆಮನೆಯಲ್ಲಿ ಕೂಡಿಹಾಕುತ್ತಿದೆ. ಸಾಮಾನ್ಯ ಜನರು ಹೂಡುವ ಹೋರಾಟಗಳನ್ನು ಅಸಹನೆಯಿಂದ ಸರ್ಕಾರ ನೋಡುತ್ತಿದೆ. ದ್ವೇಷಿಸುವುದು, ದ್ವೇಷ ಹರಡುವದನ್ನು ಸರ್ಕಾರ ಪ್ರೋತ್ಸಾಹಿಸುವುದು ಇಂದಿನ ಹೊಸ ಬೆಳವಣಿಗೆ.

ಸಾಮಾಜಿಕ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಆರ್‌ಎಸ್‍ಎಸ್ ಕಾರ್ಯಕರ್ತರು, ಶಾಸಕರು, ಮಂತ್ರಿಗಳು ಚಾರಿತ್ರ್ಯವಧೆ ಮಾಡುತ್ತಿದ್ದರೂ, ಸುಳ್ಳು ಆಪಾದನೆ ಹೊರೆಸುತ್ತಿದ್ದರೂ ಸರ್ಕಾರ ನಡೆಸುತ್ತಿರುವವರು ಪ್ರೇಕ್ಷಕನಂತೆ ಅದನ್ನು ವೀಕ್ಷಿಸುತ್ತಿದ್ದಾರೆ. ಈ ಮೌನದ ಅರ್ಥ ಸರ್ಕಾರ ಅದಕ್ಕೆ ತನ್ನ ಸಮ್ಮತಿ ಇದೆ ಎಂದು ಹೇಳುವುದೇ ಆಗಿದೆ. ನಮ್ಮ ನಗರಗಳ ಅಭಿವೃದ್ಧಿಗೆ ವಲಸೆ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಅವರಿಗೆ ಮೂಲಭೂತ ಸೌಕರ್ಯಗಳನ್ನಾದರೂ ಕಲ್ಪಿಸಿಕೊಡಬೇಕೆಂಬ ಹೃದಯವಂತಿಕೆಯೂ ಇಲ್ಲ ನಮ್ಮ ಸರ್ಕಾರಕ್ಕೆ.

ನಾವು ಈ ಎಲ್ಲ ಮೂಲಭೂತ ಸಮಸ್ಯೆಗಳ ಬಗೆಗೆ ಈ ಕೂಡಲೇ ದನಿ ಎತ್ತದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದುಬಿದ್ದು ಸರ್ವಾಧಿಕಾರಿ ವ್ಯವಸ್ಥೆಗೆ ಅದು ದಾರಿ ಮಾಡಬಹುದು. ಎಂದೂ ಇಲ್ಲದಷ್ಟು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಅಶಾಂತಿ ಹರಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅನೇಕ ಅಪಾಯಕಾರಿ ಘಟನೆಗಳು, ಕಳೆದ ಕೆಲ ವರ್ಷಗಳಿಂದ ಇಂದಿಗೂ ಮಾರ್ದನಿಸುತ್ತಿರುವ ಆಂತರಿಕ ರಾಜಕೀಯ ಗುದ್ದಾಟಗಳೂ ಎಲ್ಲರಿಗೂ ಮನವರಿಕೆಯಾಗಿದೆ. ಆದರೆ ಮೋದಿಯವರ ಆಡಳಿತ ವೈಖರಿ ಮತ್ತು ನೈತಿಕತೆಯ ಬಗೆಗೆ ಚರ್ಚೆಗಳೇ ಆಗುತ್ತಿಲ್ಲ.

ಸರ್ಕಾರದ ಅನಾದರಣೆಯಿಂದ ಮಹಿಳೆಯರು, ಮಕ್ಕಳು, ದಲಿತರು ಇವರ ಮೇಲೆ ದೌರ್ಜನ್ಯ ಭಾರತದ ಎಲ್ಲ ಕಡೆಯೂ ಪ್ರತಿದಿನ ನಡೆಯುತ್ತಿರುವಾಗ, ಮಕ್ಕಳು, ಬಡವರು, ಗರ್ಭಿಣಿಯರು ಅಪೌಷ್ಟಿಕತೆಯಿಂದ ಪ್ರತಿದಿನವೂ ಸಾಯುತ್ತಿರುವಾಗ, ನ್ಯಾಯಕ್ಕೆ ಬೆಲೆಯೇ ಇಲ್ಲದ ಕಾರಣದಿಂದ ಜನ ಜರ್ಜರಿತವಾಗಿರುವಾಗ – ಇವೆಲ್ಲ ರಾಷ್ಟ್ರಕ್ಕೆ ಒದಗಿಬಂದಿರುವ ಆಪತ್ತು ಎಂದು ಸರ್ಕಾರ ಪರಿಗಣಿಸದಿರುವಾಗ, ಪ್ರಜ್ಞಾವಂತ ಪ್ರಜೆಗಳು ತಮ್ಮ ಕರ್ತವ್ಯವೇನು ಎಂದು ಚಿಂತಿಸಬೇಕಾದ ಅಗತ್ಯ ಇದೆ.

ಐಎಎಸ್‍ಗಳು, ಕೆಎಎಸ್‍ಗಳು, ಐಪಿಎಸ್‍ಗಳು ತಮಗಿರುವ ಜವಾಬ್ದಾರಿ ನಿರ್ವಹಿಸಲು ಕಾನೂನು ಪ್ರಕಾರ ಆಡಳಿತ ನಡೆಸಲು ಬದ್ಧರು. ಆದರೆ ಅವರು ಮುಖ್ಯಮಂತ್ರಿ, ಮಂತ್ರಿ, ಪಕ್ಷದ ಶಾಸಕರ ಆಜ್ಞಾಧಾರಕರಂತೆ ನಡೆದುಕೊಳ್ಳುತ್ತಾರೆ. ಅವರಿಗೆ ಕಾನೂನು ಮುಖ್ಯವಲ್ಲ. ಮಂತ್ರಿಗಳನ್ನು ಓಲೈಸುವುದೂ ಮುಖ್ಯ. ಇದಕ್ಕೆ ಮುಖ್ಯ ಕಾರಣಗಳಿವೆ. ಮೊದಲನೆಯ ಕಾರಣ ಮಂತ್ರಿಗಳ, ಶಾಸಕರ ಕೃಪಾಕಟಾಕ್ಷಗಳಿಗೆ ಒಳಗಾಗಬೇಕೆಂಬ ಸ್ವಾರ್ಥ. ಎರಡನೆಯ ಕಾರಣ ಮಾಮೂಲಿಗೆ ಅವಕಾಶವಿಲ್ಲದ ಇಲಾಖೆಗೆ ಎಲ್ಲಿ ವರ್ಗಾವಣೆ ಮಾಡುತ್ತಾರೋ ಎಂಬ ಭಯ. ಮೂರನೆಯದು, ಲಂಚ ರುಚಿ ಹತ್ತಿದ ಕಾರಣ ಇಲಾಖೆಗೆ ಬರುವ ಗ್ರಾಂಟುಗಳಲ್ಲಿ ಸ್ವಲ್ಪ ಹಣವನ್ನು ಮಂತ್ರಿಗಳೊಡನೆ ತಾವೂ ಹಂಚಿಕೊಳ್ಳಬಹುದೆಂಬ ದುರಾಸೆ. ಇದರಿಂದಾಗಿ ಆಡಳಿತದಲ್ಲಿ ಕಾನೂನು ಕಟ್ಟಲೆಗಳಿಗೆ ಬೆಲೆ ಇಲ್ಲದಂತಾಗಿ, ಅದು ಸ್ವೇಚ್ಛಾಚಾರದ ಆಡಳಿತಕ್ಕೆ ದಾರಿ ಕಲ್ಪಿಸುತ್ತಿದೆ. ಅಮಾನುಷ ಹಿಂಸಾಚಾರ, ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿ ಆಡಳಿತ ವಿಫಲತೆಗೂ ಅದು ದಾರಿ ಮಾಡುತ್ತದೆ.

PC : The Hans India

ಇದು ಆಡಳಿತ ವಿಫಲತೆಯ ಒಂದು ಮಗ್ಗುಲಾದರೆ ಗ್ರಾಮಗಳಲ್ಲಿನ ರಾಜಕೀಯ ಪುಢಾರಿಗಳು, ಊರ ಪಾಳೆಗಾರರು, ಪ್ರಬಲ ಜಾತಿಗಳ ಯಜಮಾನರುಗಳು ಜನರನ್ನು ಭಯಪಡಿಸಿ ಕಾನೂನು ಕಟ್ಟಲೆಗಳನ್ನು ಮುರಿದು ಜಿಲ್ಲಾಧಿಕಾರಿಗಳನ್ನು ಮೊದಲುಗೊಂಡು ಎಲ್ಲ ನೌಕರರನ್ನು ತಮ್ಮ ಆಜ್ಞಾವರ್ತಿಗಳಾಗಿಸಿಕೊಳ್ಳುತ್ತಾರೆ. ಈ ಅಧಿಕಾರಿಗಳು ಪ್ರಾಮಾಣಿಕವಾಗಿ ನಿಷ್ಪಕ್ಷಪಾತಿಗಳಾಗಿ ಕಾನೂನು ರೀತ್ಯಾ ಆಡಳಿತ ನಡೆಸುವುದಕ್ಕೆ ಬಿಡುವುದಿಲ್ಲ.

ಹಿಂದೆ ಇಂಗ್ಲಿಷರ ಕಾಲದಲ್ಲೇ ವೈಸರಾಯರ ಮಂಡಲದಲ್ಲಿದ್ದ ಪಿಎಸ್ ಅಧಿಕಾರಿಗಳು ಕಾನೂನಿಗನುಸಾರ ಆಡಳಿತ ನಡೆಸುತ್ತಿದ್ದರು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಲು ಒತ್ತಡ ಬಂದರೆ ಅದಕ್ಕೆ ಅವರು ಮಣಿಯುತ್ತಿರಲಿಲ್ಲ. ನೀವು ಹೇಳಿದಂತೆ ಕಾನೂನಿಗೆ ವಿರುದ್ಧವಾಗಿ ನಾನು ಬರೆಯುವುದಿಲ್ಲ. ನೀವು ನಮ್ಮ ಧಣಿಗಳು, ನೀವು ಕಾನೂನು ಮೀರಿ ಈ ಕೆಲಸ ಮಾಡಿ ಎಂದು ಬರವಣಿಗೆಯಲ್ಲಿ ಕೊಟ್ಟರೆ ನಾನು ನಿಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿರುವನಾದ್ದರಿಂದ ನಿಮ್ಮ ಆಜ್ಞೆಯನ್ನು ಪಾಲಿಸುತ್ತೇನೆ ಎನ್ನುತ್ತಿದ್ದ ಅಂತಹ ನಿಸ್ಪೃಹತೆ ನಮ್ಮ ಅಧಿಕಾರಿಗಳಲ್ಲಿ ಬೆಳೆಯಬೇಕು. ವರ್ಗಾವಣೆಯಾಗಲೂ ಸಿದ್ಧರಿರಬೇಕು.

ಸರ್ಕಾರಿ ನೌಕರರು ಸಂಬಳದಾಳುಗಳಲ್ಲ. ಅವರಿರುವುದು ಸರ್ಕಾರದ ಜನಪರ ಪಾಲಿಸಿಯನ್ನು ಅನುಷ್ಠಾನಗೊಳಿಸುವುದಕ್ಕೇ ಹೊರತು ಮಂತ್ರಿಗಳ ರಾಜಕೀಯ ಪಕ್ಷಗಳ ಪುಢಾರಿಗಳು ಮಾಡೆನ್ನುವ ದುಷ್ಕೃತ್ಯಗಳನ್ನು ಎಸಗಲಿಕ್ಕಲ್ಲ.

ಇವೆಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಸಮಾಜವನ್ನು ಪರಿವರ್ತನೆ ಮಾಡುವ ಸಂಕಲ್ಪ ಜನರದ್ದು, ಅಧಿಕಾರಿಗಳದ್ದು, ರಾಜಕಾರಣಿಗಳದ್ದು ಸರ್ಕಾರದ್ದು ಮತ್ತು ಪ್ರಭುತ್ವದ ಇತರ ಸಂಸ್ಥೆಗಳದ್ದಾಗಿರಬೇಕು.


ಇದನ್ನೂ ಓದಿ: ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿರುವ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...