Homeಕರ್ನಾಟಕಮೋದಿ ಘೋರವಾಗಿ ಸಾಯುತ್ತಾರೆ; ಕರ್ನಾಟಕ ವಿಭಜನೆಯಾತ್ತದೆ: ಬ್ರಹ್ಮಾಂಡ ಗುರೂಜಿ

ಮೋದಿ ಘೋರವಾಗಿ ಸಾಯುತ್ತಾರೆ; ಕರ್ನಾಟಕ ವಿಭಜನೆಯಾತ್ತದೆ: ಬ್ರಹ್ಮಾಂಡ ಗುರೂಜಿ

- Advertisement -
- Advertisement -

ಸದಾ ಏನಾದರೊಂದು ವಿವಾದದಲ್ಲಿರುವ ಬ್ರಹ್ಮಾಂಡ ಗುರೂಜಿ ಎಂದು ಕರೆಯಲ್ಪಡುವ ನರೇಂದ್ರ ಬಾಬು ಶರ್ಮಾ ಇದೀಗ ಮತ್ತೇ ವಿವಾದವನ್ನು ಮೈಗೆಳಿದುಕೊಂಡಿದ್ದಾರೆ. ಹಾಸನಾಂಬ ದೇವಿಯ ದರ್ಶನ ಪಡೆಯಲು ಬಂದಿದ್ದ ಅವರು, ”ಇಂದಿರಾ ಗಾಂಧಿಗಿಂತಲೂ ಘೋರವಾಗಿ ಪ್ರಧಾನಿ ನರೇಂದ್ರ ಮೋದಿ ಸಾವನ್ನಪ್ಪಬಹುದು” ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ಇನ್ನಾದರೂ ತಾಯಿ ಅಥವಾ ಪತ್ನಿಯೊಂದಿಗೆ ಇರಬೇಕು. ಪ್ರಧಾನಿಯ ರಕ್ಷಣೆಗಾಗಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಇಲ್ಲವಾದರೆ ಅಪಾಯವಿದೆ. ಮುಂದಿನ ಬಾರಿ ಅವರು ಪ್ರಧಾನಿಯಾಗಬೇಕು ಎಂದು ಬಯಸಿದರೂ ಅವರನ್ನು ಪ್ರಧಾನಿ ಮಾಡಲು ಅವರ ಪಕ್ಷದವರೇ ಒಪ್ಪುವುದಿಲ್ಲ. ಸ್ವಪಕ್ಷೀಯರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಾರದೆಂದು ಸಂಚು ರೂಪಿಸಿದ್ದಾರೆ” ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆ ಸುಟ್ಟು ಕೃಷಿ ಮಸೂದೆಗಳಿಗೆ ರೈತರ ವಿರೋಧ!

ಇದನ್ನೂ ಓದಿ: ಮಾಸ್ಕ್ ಇಲ್ಲದ ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR ಏಕಿಲ್ಲ? ಹೈಕೋರ್ಟ್ ಪ್ರಶ್ನೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆಯೂ ಮಾತನಾಡಿದ ಅವರು, ”ಮುಂದಿನ ವರ್ಷ ಸಿಎಂ ಬದಲಾವಣೆ ಆಗಲಿದ್ದು, ಇನ್ನೂ ಮೂವರು ಮುಖ್ಯಮಂತ್ರಿಗಳು ಬರುವುದರೊಳಗೆ ಕರ್ನಾಟಕ ಇಬ್ಭಾಗ ಆಗುತ್ತೆ. ಕರ್ನಾಟಕವು ಆಂಧ್ರ ತೆಲಂಗಾಣದಂತೆ ಒಡೆದು, ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರವಾದರೆ, ಬೆಂಗಳೂರು ದಕ್ಷಿಣದ ರಾಜಧಾನಿಯಾಗಿರುತ್ತದೆ. ಮೂರನೇ ಮಹಾಯುದ್ಧ ಕೂಡಾ ನಡೆಯುತ್ತೆ. ಭಾರತದ 6 ಮಂದಿ ವಿದೇಶದಲ್ಲೂ ಆಳ್ವಿಕೆ ನಡೆಸುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ: ಕಾಶ್ಮೀರಿಗಳ 600 ಹೇಬಿಯಸ್ ಕಾರ್ಪಸ್ ವರ್ಷದಿಂದ ಬಾಕಿ, ಅರ್ನಬ್ ಅರ್ಜಿ ಒಂದೇ ದಿನದಲ್ಲಿ ವಿಚಾರಣೆ; ಅನ್ಯಾಯ!

“ಮೋದಿಯ ಅವಧಿ ಕೂಡ ಮುಕ್ತಾಯವಾಗುತ್ತದೆ. ಮುಂದಿನ 13 ವರ್ಷಗಳ ಕಾಲ ದೇಶದಲ್ಲಿ ಆಹಾರದ ಕೊರತೆ ಉಂಟಾಗಿ ಹಸಿವಿನ ಕ್ಷಾಮ ತಲೆದೋರಲಿದೆ. ಹೀಗಾಗಿ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮುಂದಾದರೂ ಭ್ರಷ್ಟಾಚಾರ ಬಿಟ್ಟು ಧರ್ಮ ಮಾರ್ಗದಲ್ಲಿ ನಡೆಯಬೇಕು” ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ ಮೋದಿ: ಜಾಲತಾಣಿಗರ ಪ್ರತಿಕ್ರಿಯೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...