Homeಅಂತರಾಷ್ಟ್ರೀಯಭಾರಿ ಸೋಲಿನತ್ತ ಡೊನಾಲ್ಡ್‌ ಟ್ರಂಪ್; ನಾವು ಗೆಲ್ಲಲಿದ್ದೇವೆ ಎಂದ ಬೈಡೆನ್!

ಭಾರಿ ಸೋಲಿನತ್ತ ಡೊನಾಲ್ಡ್‌ ಟ್ರಂಪ್; ನಾವು ಗೆಲ್ಲಲಿದ್ದೇವೆ ಎಂದ ಬೈಡೆನ್!

- Advertisement -
- Advertisement -

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಳೆದ ಕೆಲವು ದಿನದಿಂದ ನಡೆಯುತ್ತಿದ್ದು, ಆರಂಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡೆಯಲ್ಲಿದ್ದರೂ, ನಂತರದ ಬೆಳವಣೆಗೆಯಲ್ಲಿ ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದು, ಈ ಭಾರಿ ಅವರೆ ಅಮೆರಿಕದ ಅಧ್ಯಕ್ಷರಾಗುವುದು ನಿಶ್ಚಿತವಾಗುತ್ತಿದೆ.

ಆದರೆ ಎಣಿಕೆ ಇನ್ನೂ ನಡೆಯುತ್ತೇ ಇರುವುದರಿಂದ ಅಧೀಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಫಲಿತಾಂಶವು ತನ್ನ ಪರವಾಗಿಲ್ಲ ಎಂದು ತಿಳಿಯುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಮತದಾನದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದು, ಎಣಿಕೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Explainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

ಮತದಾನದಲ್ಲಿ ವಂಚನೆ ನಡೆದಿದೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಟ್ರಂಪ್ ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಸ್ಥಾನಗಳ ಅಗತ್ಯವಿದ್ದು, ಟ್ರಂಪ್ 214 ಸ್ಥಾನಗಳಲ್ಲಿ ಗೆದ್ದು 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜೋ ಬೈಡೆನ್ 264 ಸ್ಥಾನಗಳನ್ನು ಗೆದ್ದಿದ್ದು, ಅವರಿಗೆ ಗೆಲ್ಲಲು ಕೇವಲ 6 ಸ್ಥಾನಗಳ ಅಗತ್ಯವಿದೆಯಾದರೂ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

 

ಮುನ್ನಡೆ ಕಾಯ್ದುಕೊಂಡಿರುವ ಎಲ್ಲಾ ಸ್ಥಾನಗಲ್ಲಿ ಬೈಡನ್ ಗೆದ್ದರೆ 270 ಕ್ಕಿಂತ ಹಚ್ಚಿನ ಸ್ಥಾನ ಪಡೆಯಲಿದ್ದು, ಟ್ರಂಪ್ ಹೀನಾಯ ಸೋಲು ಅನುಭವಿಸಲಿದ್ದಾರೆ. ಈಗಾಗಲೇ ಜೋ ಬೈಡನ್ ಅಮೆರಿಕಾದ ಇತಿಹಾಸದಲ್ಲೇ ಅತೀ ಹೆಚ್ಚು ಅಧ್ಯಕ್ಷೀಯ ಮತ ಪಡೆದ ಅಭ್ಯರ್ಥಿಯಾಗಿ ದಾಖಲಾಗಿದ್ದಾರೆ. ಈ ಹಿಂದೆ ಈ ದಾಖಲೆ ಬರಾಕ್ ಒಬಾಮ ಅವರ ಪಾಲಿಗಿತ್ತು.

ಇದನ್ನೂ ಓದಿ: ’ಉಸಿರು ಬಿಗಿ ಹಿಡಿದ ಅಮೆರಿಕಾ’ – ವಿಶ್ವದ ಪ್ರಮುಖ ಪತ್ರಿಕೆಗಳ ಕಣ್ಣಲ್ಲಿ ಅಮೆರಿಕಾ ಚುನಾವಣಾ ಫಲಿತಾಂಶ!

ಮತ ಎಣಿಕೆಯ ಪ್ರಾರಂಭದಲ್ಲಿ ಜೋ ಬೈಡೆನ್ ಹಿನ್ನಡೆ ಅನುಭವಿಸಿದ್ದರು, ಆದರೆ ಅವರು ಭಾವೋಧ್ವೇಗಕ್ಕೆ ಒಳಗಾಗದೆ “ನಾವು ಗಲ್ಲಲಿದ್ದೇವೆ, ವಿಶ್ವಾಸ ಇಡಿ” ಎಂದು ತಮ್ಮ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು.

ಸ್ವಿಂಗ್ ರಾಜ್ಯಗಳಾದ ನೆವಾಡ, ಜಾರ್ಜಿಯ, ನಾರ್ಥ್ ಕೆರೊಲಿನಾ ಮತ್ತು ಪೆನ್ಸಿಲ್ವೇನಿ ರಾಜ್ಯಗಳಲ್ಲಿ ಇನ್ನು ಎಣಿಕೆ ನಡೆಯುತ್ತಿದ್ದು, ನಾರ್ಥ್ ಕೆರೊಲಿನಾದಲ್ಲಷ್ಟೇ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಉಳಿದ ಕಡೆ ಜೋ ಬೈಡೆನ್ ಮುನ್ನಡೆಯಲ್ಲಿದ್ದು “ನಾವು ಚುನಾವಣೆಯಲ್ಲಿ ಗೆಲ್ಲಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...